1. ಸುದ್ದಿಗಳು

ಮುಂದಿನ ವರ್ಷದಿಂದ ಭಾರತದಲ್ಲಿ ಎಲ್ಲರಿಗೂ ಸಿಗಲಿದೆ ಇ-ಪಾಸ್ಪೋರ್ಟ್ (E-Passport)

passport

ಜಗತ್ತಿನ ಬಹುತೇಕ ದೇಶಗಳಲ್ಲಿ ಇ-ಪಾಸ್​ಪೋರ್ಟ್​( E- passport) ಜಾರಿಯಲ್ಲಿದೆ. ಈ ಯೋಜನೆಯನ್ನು ಭಾರತದಲ್ಲೂ ಅಳವಡಿಸಲು ಸರ್ಕಾರ ಮುಂದಾಗಿದ್ದು, 2021ರೊಳಗೆ ಭಾರತೀಯರಿಗೆ ಇ- ಪಾಸ್​ಪೋರ್ಟ್​ ಲಭ್ಯವಾಗಲಿದೆ.

ಪಾಸ್ ಪೋರ್ಟ್ ವಂಚನೆ ಪ್ರಕರಣ ಹೆಚ್ಚುತ್ತಿರುವ ಜೊತೆಗೆ ನಕಲಿ ಪಾಸ್ ಪೋರ್ಟ್ (Duplicate passport) ಗಳನ್ನು ತಡೆದು ಪ್ರಯಾಣಿಕರಿಗೆ ತ್ವರಿತಗತಿಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಪಾಸ್ ಪೋರ್ಟ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 2021ರ ಆರಂಭದ ಹೊತ್ತಿಗೆ ಭಾರತೀಯ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಸದ್ಯಕ್ಕೆ ಮುದ್ರಿತ ಪಾಸ್ ಪೋರ್ಟ್ ಗಳನ್ನೇ ಜನತೆಗೆ ವಿತರಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಮತ್ತು ರಾಜತಾಂತ್ರಿಕರಿಗೆ ಪ್ರಾಯೋಗಿಕವಾಗಿ 20 ಸಾವಿರ ಇ ಪಾಸ್ ಪೋರ್ಟ್ ವಿತರಿಸಲಾಗಿದೆ. ಇದರಲ್ಲಿ ಮೈಕ್ರೋಪ್ರೊಸೆಸರ್ ಚಿಪ್ ಇರುತ್ತದೆ. ಈ ನಡೆಯಿಂದಾಗಿ ಇನ್ನು ಮುಂದೆ ನಕಲಿ ಪಾಸ್ ಪೋರ್ಟ್ ಮಾಡುವುದು ಕಷ್ಟವಾಗುತ್ತದೆ. ಇನ್ನು ಪ್ರಯಾಣಿಕರ (passenger) ವಲಸಿಗರ ನಿಯಮಾವಳಿಗಳು ಸಲೀಸಾಗಿ ಮುಗಿಯಲಿವೆ. 

ಮುಂದೆ ಪ್ರತಿ ಗಂಟೆಗೆ 10 ಸಾವಿರದಿಂದ 20 ಸಾವಿರ ಇ ಪಾಸ್ ಪೋರ್ಟ್ ಗಳನ್ನು ನೀಡುವ ನಿಟ್ಟಿನಲ್ಲಿ ತಾಂತ್ರಿಕವಾಗಿ ಸಜ್ಜುಗೊಳಿಸಲಾಗುತ್ತದೆ. ಪ್ರಯಾಣಿಕರ ಬಯೋಮೆಟ್ರಿಕ್ ಮಾಹಿತಿ ಕೂಡ ಚಿಪ್​ನಲ್ಲಿಯೇ ಸಂಗ್ರಹವಾಗಿರುತ್ತದೆ. ಇದರಿಂದಾಗಿ ಇಮಿಗ್ರೇಷನ್​ ಕೌಂಟರ್​ನಲ್ಲಿ ನಿಂತು ಕಾಯುವ ಅಗತ್ಯ ಇರುವುದಿಲ್ಲ. ಇ-ಪಾಸ್​ಪೋರ್ಟ್​ ಮೂಲಕ ಬೇಗ ಸ್ಕ್ಯಾನ್ ಮಾಡಬಹುದು.ಈ ಪಾಸ್ ಪೋರ್ಟ್ ಚಾಲ್ತಿಗೆ ಬರುವುದರಿಂದ ಭಾರತೀಯರ ಪ್ರವಾಸ ದಾಖಲೆ ಪತ್ರದ ಭದ್ರತಾ ಅಂಶಗಳು ಬಲಗೊಳ್ಳಲಿವೆ ಎಂದ ವಿದೇಶಾಂಗ ಸಚಿವ ಎಸ್. ಜೈಶಂಕರ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಗುಣಮಟ್ಟಕ್ಕೆ ತಕ್ಕಂತೆ ಇ- ಪಾಸ್ ಪೋರ್ಟ್ ಗಳು ಇರಲಿವೆ ಒಂದು ಸಲ ಎಲ್ಲ ಸಿದ್ಧತೆ ಮುಗಿದು, ಪೂರ್ತಿಯಾಗಿ ತಯಾರಾದ ಮೇಲೆ ದೇಶದ ಎಲ್ಲ 36 ಪಾಸ್ ಪೋರ್ಟ್ ಕಚೇರಿಯಲ್ಲೂ ಇ -ಪಾಸ್ ಪೋರ್ಟ್ ವಿತರಣೆ ಮಾಡಲಾಗುವುದು ಎಂದೂ ಅಧಿಕಾರಿಗಳು ಹೇಳಿದ್ದಾರೆ

Published On: 15 August 2020, 03:50 PM English Summary: e passport for all indian citizens next year onwords

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.