ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಜೋಡಣೆ ಹಾಗೂ ಪ್ಯಾನ್ ಕಾರ್ಡ್ ಜೋಡಣೆ ಅವಧಿಯನ್ನು ವಿಸ್ತರಿಸಿದೆ.
ರೇಷನ್ ಕಾರ್ಡ್ನೊಂದಿಗೆ ಆಧಾರ್ ಲಿಂಕ್ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.
ಸಾರ್ವಜನಿಕರಿಗೆ ಸಬ್ಸಿಡಿಯಲ್ಲಿ ಆಹಾರ ಧಾನ್ಯ ಹಾಗೂ ಇಂಧನ ಪಡೆಯಲು ಪಡಿತರ ಚೀಟಿ ವಿತರಿಸಲಾಗಿದೆ.
ಪಡಿತರ ಚೀಟಿಗೂ ಆಧಾರ್ ಜೋಡಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಪ್ಯಾನ್- ಆಧಾರ್ ಕಾರ್ಡ್ ಅಷ್ಟೇ ಅಲ್ಲ ರೇಷನ್ ಕಾರ್ಡ್ನೊಂದಿಗೂ ಜೋಡಣೆ ಮಾಡಬೇಕು!
ಅಲ್ಲದೇ ರೇಷನ್ ಕಾರ್ಡ್ನೊಂದಿಗೆ ಆಧಾರ್ ಜೋಡಣೆ ಮಾಡುವುದಕ್ಕೆ ಮಾರ್ಚ್ 31ರ ವರೆಗೆ ಗಡುವು ನೀಡಲಾಗಿತ್ತು.
ಇದೀಗ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹೊಸ ಅಧಿಸೂಚನೆ ಹೊರಡಿಸಿದ್ದು, ರೇಷನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡುವ ಗಡುವನ್ನು 2023ರ ಮಾರ್ಚ್ 31 ರಿಂದ ಜೂನ್ 30ರವರೆಗೆ ವಿಸ್ತರಿಸಲಾಗಿದೆ.
ಪ್ಯಾನ್ ಕಾರ್ಡ್ನೊಂದಿಗೆ ಆಧಾರ್ ಜೋಡಣೆ ಅವಧಿ ವಿಸ್ತರಣೆ
ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಜೋಡಣೆ ಅವಧಿಯನ್ನು ಕೇಂದ್ರ ಸರ್ಕಾರವು ಮುಂದೂಡಿದೆ.
ಪ್ಯಾನ್ ಹಾಗೂ ಆಧಾರ್ ದಂಡ ಸಹಿತ ಪಾವತಿಗೆ ಮಾರ್ಚ್ 31 ಕೊನೆಯ ದಿನವಾಗಿತ್ತು.
ಈ ಅವಧಿಯಲ್ಲಿ ಪ್ಯಾನ್ ಹಾಗೂ ಆಧಾರ್ ಜೋಡಣೆ ಆಗದೆ ಇದ್ದರೆ, ದಂಡ ಪಾವತಿ ಮಾಡಬೇಕು.
ಅಲ್ಲದೇ ಪ್ಯಾನ್ ಕಾರ್ಡ್ ನಂಬರ್ ನಿಷ್ಕ್ರೀಯವಾಗಲಿದೆ ಎಂದು ಹೇಳಲಾಗಿತ್ತು.
ಪ್ಯಾನ್ಗೆ ಆಧಾರ್ ಜೋಡಣೆ: ಪರಿಶೀಲನೆ ಮಾಡುವುದು ಹೇಗೆ ?
ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ 10,000 ಸಾವಿರ ರೂ. ದಂಡ ಪಾವತಿ ಮೊತ್ತ ತೀವ್ರ ಹೆಚ್ಚಳವಾಗಿದ್ದು, ಈ ಕ್ರಮ ಸರಿ ಅಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಜೋಡಣೆಯ ಅಂತಿಮ ದಿನಾಂಕವನ್ನು 2023ರ ಜೂನ್ 30ಕ್ಕೆ ವಿಸ್ತರಿಸಲಾಗಿದೆ.
ಇದರಲ್ಲೂ ಪ್ಯಾನ್ ಹಾಗೂ ಆಧಾರ್ ಜೋಡಣೆಯನ್ನು ಗಡುವಿನೊಳಗೆ ಮಾಡದೆ ಇದ್ದರೆ, ಕಾನೂನು ಕ್ರಮ ಎದುರಾಗಲಿದೆ. ಈ ಪ್ರಕ್ರಿಯೆ ಜುಲೈ 1ರ ಒಳಗೆ ಆಗದಿದ್ದರೆ, ಪ್ಯಾನ್ ನಿಷ್ಕ್ರೀಯವಾಗಲಿದೆ.
ಒಂದು ಸಾವಿರ ರೂಪಾಯಿ ಶುಲ್ಕ ಪಾವತಿಸಿ ನಿಗದಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಿದರೆ, 30 ದಿನಗಳಲ್ಲಿ ಪ್ಯಾನ್ ನಂಬರ್ ಸಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.
ಆನ್ಲೈನ್ನಲ್ಲಿ ಪ್ಯಾನ್-ಆಧಾರ್ ಲಿಂಕ್ ಮಾಡುವ ಸುಲಭವಾದ ವಿಧಾನ ಇಲ್ಲಿದೆ.
- ನೀವು ಮೊದಲಿಗೆ ಇದಕ್ಕೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ಗೆ ಭೇಟಿ ನೀಡಬೇಕು.
- ಅದಕ್ಕೆ ಈ ಲಿಂಕ್ ಬಳಸಿ: https://incometaxindiaefiling.gov.in/
- ಇದಕ್ಕೆ ಪ್ಯಾನ್ ಸಂಖ್ಯೆ (PAN) ನಿಮ್ಮ ಬಳಕೆದಾರ ID ಎಂದು ಪರಿಗಣಿಸುತ್ತದೆ.
- ಇದಾದ ನಂತರದಲ್ಲಿ ಬಳಕೆದಾರ ಐಡಿ, ಪಾಸ್ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿದ ಲಾಗಿನ್ ಆಗಬೇಕು.
- PANನಲ್ಲಿ ಹುಟ್ಟಿದ ದಿನಾಂಕ ಮತ್ತು ಲಿಂಗ ವಿವರಗಳನ್ನು ದಾಖಲಿಸಬೇಕು
- ಈ ಪ್ರಕ್ರಿಯೆಗಳು ಮುಗಿದ ನಂತರದಲ್ಲಿ ಈ ವಿವರಗಳನ್ನು ನಿಮ್ಮ ಆಧಾರ್ ವಿವರಗಳೊಂದಿಗೆ ಹೊಂದಿಸಬೇಕು.
- ಈ ಹಂತದಲ್ಲಿ ನಿಖರವಾದ ಮಾಹಿತಿಯನ್ನು ಹಾಕಬೇಕು. ಒಂದೊಮ್ಮೆ ಎರಡೂ ದಾಖಲೆಯಲ್ಲಿನ ಅಂಶಗಳು ಸರಿಯಾಗಿ ಕೂಡದೇ ಇದ್ದರೆ,
- ನಿಖರವಾದ ಮಾಹಿತಿಯನ್ನು ದಾಖಲಿಸಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಂಪರ್ಕಿಸಿ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಆಗಿದೆ ಎಂಬ ಪಾಪ್-ಅಪ್ ಸಂದೇಶ ಕಾಣಿಸುತ್ತದೆ.
5 ದಿನದಲ್ಲಿ ಪ್ಯಾನ್- ಆಧಾರ್ ಲಿಂಕ್ ಮಾಡದಿದ್ದರೆ ಬೀಳಲಿದೆ 10,000 ಸಾವಿರ ದಂಡ!
Share your comments