1. ಸುದ್ದಿಗಳು

ರೈತ ಹುತಾತ್ಮ ದಿನಾಚರಣೆಗೆ (Farmer martyrs day) ಕೊರೋನಾ ಕರಿನೆರಳು

farmer

ಪ್ರತಿವರ್ಷದಂತೆ ಜುಲೈ 21 ರಂದು ರೈತ ಹುತಾತ್ಮ ದಿನಾಚರಣೆ (Farmer martyrs day) ಆಚರಿಸಲು ವಿವಿಧ ರೈತ ಸಂಘಟನೆಗಳು ನಿರ್ಧರಿಸಿದ್ದರಾದರೂ ಲಾಕ್ಡೌನ್ ಹಿನ್ನೆಲೆಯಲ್ಲಿ ಕೊರೋನಾ ನಿಯಮಾವಳಿಗಳ ಪ್ರಕಾರ ಸುರಕ್ಷಿತ ಸಾಮಾಜಿಕ ಅಂತರ ಕಾಯ್ದುಕೊಂಡು ಹುತಾತ್ಮರ ಆತ್ಮಕ್ಕೆ ಶಾತಿ  ಕೋರಿ ಮೌನಾಚರಣೆ ಮಾಡುವ ಮೂಲಕ ರೈತ ಹುತಾತ್ಮ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ.

ಏನಿದು ರೈತ ಹುತಾತ್ಮ ದಿನಾಚರಣೆ ( what is FARMER MARTYRS DAY)?  

ಉತ್ತರ ಕರ್ನಾಟಕದಲ್ಲಿ 1980ರಲ್ಲಿ ತೀವ್ರ ಸ್ವರೂಪದ ರೈತ ಹೋರಾಟ ನಡೆದಿತ್ತು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿನ ಅನ್ಯಾಯದ ಕುರಿತಾಗಿ ಚಿಕ್ಕನರಗುಂದ ಹಾಗೂ  ಸವದತ್ತಿ ತಾಲೂಕುಗಳಲ್ಲಿ ನಡೆದಿದ್ದ ಸಮಾವೇಶದ ವೇಳೆ ಪೊಲೀಸ್‌ ಗುಂಡೇಟಿಗೆ ಚಿಕ್ಕನರಗುಂದದ ಈರಪ್ಪ ಕೊಡ್ಲಿಕೊಪ್ಪ(Earappa kodlikoppa) ಹಾಗೂ ಅಳಗವಾಡಿಯ ಬಸಪ್ಪ ಲಕ್ಕುಂಡಿ (Basappa lakkundi)  ಹುತಾತ್ಮರಾಗಿದ್ದರು. ವಿವಿಧೆಡೆ ನಡೆದಿದ್ದ (shootout) ಗೋಲಿಬಾರ್‌ಗಳಲ್ಲಿ 139 ರೈತರು ಬಲಿಯಾಗಿದ್ದರು. ಈ ರೈತರ ನೆನಪಿನಲ್ಲಿ ಜು. 21ರಂದು (July 21st) ರೈತರ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತದೆ.

ರೈತ ಹುತಾತ್ಮ ದಿನಾಚರಣಕ್ಕೆ ಮಿತಿ:

ಪ್ರತಿ ವರ್ಷ ಹುತಾತ್ಮ ದಿನಾಚರಣೆಗೆಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿ ಹುತಾತ್ಮ ಲಕ್ಕುಂಡಿ (Lakkundi) ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ರೈತಪರ ಹೋರಾಟದ ಬಗ್ಗೆ ನಿರ್ಧರಿಸುತ್ತಾ ಬರುತ್ತಿದ್ದರು. ಆದರೆ ಈ ವರ್ಷ ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಯಾವುದೇ ಸಭೆ ಸಮಾರಂಭ ಮಾಡುವುದಿಲ್ಲ. ಮೌನಾಚರಣೆ ಮೂಲಕ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿದ್ದಾರೆ.

farmer

 ಹಳ್ಳಿಗಳಿಗೆ ವಾಪಸ್ ಕೃಷಿಯಲ್ಲಿ ಬದಲಾವಣೆ (Return to village):

ನಗರಗಳಲ್ಲಿ ನೆಲೆಸಿದ್ದ ಗ್ರಾಮೀಣ ಪ್ರದೇಶಗಳ ಬಹಳಷ್ಟು ಜನರು ಕೊರೊನಾದಿಂದಾಗಿ ಉಂಟಾದ ಭಿನ್ನ ಪರಿಣಾಮಗಳ ಹಿನ್ನೆಲೆಯಲ್ಲಿ ಹಳ್ಳಿಗಳಿಗೆ ವಾಪಸಾಗಿದ್ದಾರೆ. ಹೀಗೆ ವಾಪಸಾಗಿರುವವರು ತಮ್ಮ ಹೊಲಗಳಲ್ಲಿ ಕೃಷಿ ಆರಂಭಿಸಲು ಮನಸ್ಸು ಮಾಡುತ್ತಿದ್ದು, ಇಷ್ಟು ದಿನ ಬರಡು ಭೂಮಿಯಾಗಿದ್ದ ಅನೇಕ ಬಯಲು ಪ್ರದೇಶ ಹಸನಾಗುತ್ತಿದೆ..

ಮಾರ್ಕೆಟಿಂಗ್‌ನಲ್ಲಿ ಬದಲಾವಣೆ(Changes in marketing):

ಹಿಂದೆ ಬಹುತೇಕ ರೈತರು ಎಪಿಎಂಸಿಗಳಲ್ಲಿ ಅಗ್ಗದ ದರದಲ್ಲಿ ತಮ್ಮ ಬೆಳೆಗಳನ್ನು ಮಾರಾಟ ಮಾಡುತ್ತಿದ್ದರು. ಇದರಲ್ಲಿ ಕೆಲವು ರೈತರು ತಾವೇ ವ್ಯಾಪಾರ ಮಾಡಿ ಲಾಭ ಮಾಡುತ್ತಿದ್ದಾರೆ. ಅಂಗಡಿಗಳಲ್ಲಿ, ಮಾಲ್ಗಳಲ್ಲಿ, ರಿಲೈಯನ್ಸ್, ಬಿಗ್ ಬಜಾರ್ ನಲ್ಲಿಯೂ ಸಹ ಮಾರಾಟ ಮಾಡುವಂತಹ ಬದಲಾವಣೆ ಕಂಡುಬರುತ್ತಿದೆ.

ಸೋಷಿಯಲ್ ಮಿಡೀಯಾ ಬಳಕೆ(Using social media):

ಫೇಸ್‌ಬುಕ್‌, ಇನ್ ಸ್ಟ್ರಾಗ್ರಾಂ ಮೂಲಕ ಸಾವಯವ ಪದ್ಧತಿಯಲ್ಲಿ ಬೆಳೆಯುವ ಕುರಿತು ತಿಳಿದುಕೊಳ್ಳುತ್ತಿದ್ದಾರೆ. ವಾಟ್ಸಾಪ್‌, ಆನ್‌ಲೈನ್‌ ಅಪ್ಲಿಕೇಶನ್‌ಗಳ ಮೂಲಕ ತಳಿಗಳನ್ನು ಬುಕಿಂಗ್‌ ಮಾಡಿ ತರಿಸಿಕೊಳ್ಳುತ್ತಿದ್ದಾರೆ. ಮಾಹಿತಿಯೂ ಪಡೆಯುತ್ತಿದ್ದಾರೆ.

ಕೊರೋನಾ ಆಂತಕದ ನಡುವೆ ಕೃಷಿಯಲ್ಲಿ ಅಸ್ತಿತ್ವ ಗಟ್ಟಿ:

ಬೆಳೆ ನಷ್ಟದಿಂದಾಗಿ ಕೃಷಿಕ ಆತ್ಮಹತ್ಯೆ, ಹೋರಾಟದಲ್ಲಿ ರೈತರ ಸಾವು. ಇವು ಪ್ರತಿ ವರ್ಷ ಕೇಳಿಬರುವ ವಿಚಾರ. ಆದರೆ ದೇಶದಲ್ಲಿ ಸದ್ಯ ಕೊರೋನಾ ಸೋಂಕಿನ ನಡುವೆ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕೊರೋನಾ ನಿಯಂತ್ರಣಕ್ಕೆ ವಿಧಿಸಿದ ಲಾಕ್‌ಡೌನ್‌ನಿಂದ ಎಲ್ಲ ವಲಯಗಳ ಮೇಲೆ ಪರಿಣಾಮ ಬೀರಿರಬಹುದು. ಆದರೆ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.  ಕೃಷಿ ಮಾತ್ರ ಎಲೆಮರೆಯಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಿದೆ.

Published On: 21 July 2020, 12:12 PM English Summary: FARMER MARTYRS DAY

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.