1. ಸುದ್ದಿಗಳು

ಕೃಷಿ ಯಂತ್ರೋಪಕರಣಗಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಶೇ.50 ರಿಂದ 80 ರಷ್ಟು ಸಬ್ಸಿಡಿ ಪಡೆಯಿರಿ

ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಈಗ ಯಾರ ಪ್ರಭಾವವೂ ಬೇಕಾಗಿಲ್ಲ.  ಇದಕ್ಕಾಗಿ ಕಚೇರಿಗಳಿಗೆ ಮತ್ತೆ ಮತ್ತೆ ಅಲೆಯುವ ಅವಶ್ಯಕತೆಯೂ ಇಲ್ಲ, ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಕೇಂದ್ರ ಸರ್ಕಾರದ SMAM ಯೋಜನೆಯಡಿಯಲ್ಲಿ  ಅರ್ಜಿ ಸಲ್ಲಿಸಿ ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದು. ಅದು ಹೇಗೆ ಸಾಧ್ಯ ಅಂದುಕೊಂಡಿದ್ದೀರಾ... ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ.

ಆಧುನಿಕ ಪದ್ಧತಿಯಲ್ಲಿ ಕೃಷಿ ಮಾಡಿ ವ್ಯವಸಾಯ ಮಾಡಿ ಇಡೀ ದಿನ ಮಾಡುವ ಕೆಲಸವನ್ನು ಒಂದೇ ತಾಸಿನಲ್ಲಿ ಮಾಡಲು ಕೃಷಿ ಯಂತ್ರೋಪಕರಣ ಬಳಕೆ ಅನಿವಾರ್ಯವಾಗಿದೆ. ರೈತರ ಅವಶ್ಯಕತೆಯನ್ನು ಮನಗಂಡು  ಕೇಂದ್ರ ಸರ್ಕಾರವು ರೈತರಿಗಾಗಿ  Sub-mission on Agricultural Mechanization (SMAM) ಯೋಜನೆಯನ್ನು ಜಾರಿಗೆ ತಂದಿದೆ.  ಆಧುನಿಕ ಕೃಷಿ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗದ ರೈತರಿಗಾಗಿ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನುಒದಗಿಸುವ ಯೋಜನೆ ಇದಾಗಿದೆ.  ಯಂತ್ರೋಪಕರಣಗಳ ಮೇಲೆ ಶೇ. 50 ರಿಂದ 80 ರವರೆಗೆ ಸಬ್ಸಿಡಿ ದೊರೆಯಲಿದೆ.

ಈ ಯೋಜನೆಯ ಉಪಯೋಗ ಪಡೆದುಕೊಳ್ಲಲಿಚ್ಚಿಸುವವರು ನಿಮ್ಮ ಗುರುತಿನ ಚೀಟಿ, ಆಧಾರ್ ಕಾರ್ಡ್,  ಪಾಸ್‌ಪೋರ್ಟ್‌ ಸೈಜ್‌ ಫೋಟೊ, ಭೂಮಿ ಹಕ್ಕು ಪತ್ರ ( ROR), ಯೋಜನೆಯ ಫಲ ಪಡೆದುಕೊಳ್ಲಲಿರುವ ವ್ಯಕ್ತಿಯ ಬ್ಯಾಕ್‌ ಖಾತೆಯ ಪಾಸ್‌ಬುಕ್‌ನ ಮುಖಪುಟದ ನಕಲು , ಆಧಾರ್‌ ಕಾರ್ಡ್‌/ಚುನಾವಣಾ ಗುರುತಿನ ಚೀಟಿಯ ನಕಲು ಪ್ರತಿ, ಎಸ್.ಸಿ ಎಸ್.ಟಿಯವರಾಗಿದ್ದರೆ ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ನೀಡಬೇಕಾಗುತ್ತದೆ .

ನೊಂದಣಿ ಮಾಡುವುದು ಹೇಗೆ ? 

ರೈತರು ತಮ್ಮ ಹೆಸರನ್ನು ನೋಂದಾಯಿಸಲು ವೆಬ್‌ಸೈಟ್‌ನಲ್ಲಿ ನಿಮ್ಮ ಜಿಲ್ಲೆ , ತಾಲೂಕು , ಗ್ರಾಮವನ್ನು ಆಯ್ಕೆ ಮಾಡಬೇಕು . ರೈತರ ಹೆಸರು ಆಧಾರ್‌ ಕಾರ್ಡ್‌ನಲ್ಲಿ ಇರುವಂತೆ ನೊಂದಾಯಿಸಬೇಕು . ರೈತರ ವಿವರ, ಸಣ್ಣ, ಮಧ್ಯಮ, ದೊಡ್ಡ ಇಳುವರಿದಾರರ ಕುರಿತ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು. ಈ ಮೂಲಕ ವೆಬ್‌ಸೈಟ್‌ನಲ್ಲಿ ಹೆಸರು, ವಿವರ ನೊಂದಾಯಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದು.

ದೇಶದ ಎಲ್ಲ ರಾಜ್ಯಗಳ ರೈತರಿಗಾಗಿ ಜಾರಿಗೆ ತಂದ ಈ ಯೋಜನೆಯಡಿ ಮಹಿಳಾ ರೈತರೂ ಕೂಡ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ರೈತರಿಗೆ ತೊಂದರೆಯಾಗದಂತೆ ಕೇಂದ್ರ ಸರ್ಕಾರ ವೆಬ್ ಪೋರ್ಟಲ್ ಸಹ ಬಿಡುಗಡೆ ಮಾಡಿದೆ.  ಈ ಮಂದಿನ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

https://agrimachinery.nic.in/Farmer/SHGGroups/Registration.  ಈ ಲಿಂಕ್ ಕ್ಲಿಕ್ ಮಾಡಿದರೆ ಡಿಬಿಟಿ (Direct Benefit Transfer in Agriculture Mechanization) ವೆಬ್ ಓಪನ್ ಆಗುತ್ತದೆ. ಅಲ್ಲಿ  Registration ಮೇಲೆ ಕ್ಲಿಕ್ ಮಾಡಿದರೆ ನಾಲ್ಕು ಆಯ್ಕೆಗಳು ಕಾಣುತ್ತವೆ. ಅದರಲ್ಲಿ ನೀವು ಫಾರ್ಮರ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್, ಮೊಬೈಲ್ ನಂ,  ಹೆಸರು (ಆದಾರ್ ನಲ್ಲಿರುವಂತೆ) Option ಕಾಣುತ್ತವೆ. ಆಧಾರ್ ಮೇಲೆ ಕ್ಲಿಕ್ ಮಾಡಿ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕು.. ದಯವಿಟ್ಟು ಮೇಲೆ ತಿಳಿಸಿದ ದಾಖಲೆಗಳನ್ನು ನಿಮ್ಮ ಮುಂದೆ ಇಟ್ಟುಕೊಂಡು  ಮಾಹಿತಿಯನ್ನು ಭರ್ತಿ ಮಾಡಬೇಕು.  ಅರ್ಜಿ ಸಲ್ಲಿಸಿದ ನಂತರ ಸ್ಟೇಟಸ್ ಸಹ ತಿಳಿದುಕೊಳ್ಳಬಹುದು.

ತಪ್ಪು ಮಾಹಿತಿಯನ್ನು ತುಂಬಬೇಡಿ. ಸುಳ್ಳು ಮಾಹಿತಿ ಸಲ್ಲಿಸಿದರೆ ನಿಮ್ಮ ಅರ್ಜಿ ತಿರಸ್ಕಾರಗೊಳ್ಳುತ್ತದೆ. ಸಬ್ಸಿಡಿ ಪಡೆಯಲು ಸರಿಯಾದ ಮಾಹಿತಿ ಕೊಡುವುದು ಅತೀ ಅಗತ್ಯವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ https://agrimachinery.nic.in/ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಥವಾ ದಿವಾಕರ್,  ಉಪನಿರ್ದೇಶಕರು, ಮೊ.  8277929820 ಗೆ ಕರೆ ಮಾಡಬಹುದು.

ಸೂಚನೆ:  ಪೋರ್ಟಲ್ ನಲ್ಲಿ ಹೆಸುರ ನೋಂದಾಯಿಸುವಾಗ ಸರಿಯಾದ ಜಿಲ್ಲೆ, ತಾಲೂಕು, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು. ಆಧಾರ್ ಕಾರ್ಡ್ ಪ್ರಕಾರ ರೈತನ ಹೆಸರು ಇರಬೇಕು. ರೈತ ವರ್ಗ (ಎಸ್ ಸಿ/ಎಸ್ ಟಿ/ಸಾಮಾನ್ಯ), ರೈತ ಪ್ರಕಾರ (ಸಣ್ಣ/ಸಣ್ಣ/ದೊಡ್ಡ)  ರೈತರಿದ್ದರೆ ಮಾಹಿತಿ ಸರಿಯಾಗಿ ಒದಗಿಸಬೇಕು, ಇಲ್ಲದಿದ್ದರೆ ಅರ್ಜಿ ಪರಿಶೀಲನೆ ವೇಳೆ ತಿರಸ್ಕೃತಗೊಳ್ಳುವ ಸಾಧ್ಯತೆಯಿರುತ್ತದೆ.

Published On: 07 November 2020, 09:45 PM English Summary: farmers can Apply online and get subsidies for agriculture equipment

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.