1. ಸುದ್ದಿಗಳು

Millets: "ಫಿಟ್ ಇಂಡಿಯಾ ಹೆಲ್ತಿ ಹಿಂದೂಸ್ತಾನ್ ಟಾಕ್ ಸೀರಿಸ್ ವಿತ್ ಮಿಲ್ಲೆಟ್ಸ್" ವಿಶೇಷ ಸಂಚಿಕೆಗೆ ಚಾಲನೆ

Maltesh
Maltesh

ಶ್ರೀ ಅನುರಾಗ್ ಠಾಕೂರ್ ಅವರು ಸುದೃಢ ಭಾರತ ಆರೋಗ್ಯಕರ ಹಿಂದೂಸ್ತಾನ ಅಪ್ರತಿಮರುಗಳೊಂದಿಗೆ ವಿಶೇಷ ಅಧಿವೇಶನ ನಡೆಸಿ, ಅಲ್ಲಿ ಸುದೃಢತೆ, ಆರೋಗ್ಯಕರ ಆಹಾರ ಪಟ್ಟಿ, ಹಿರಿಯ ನಾಗರಿಕರ ಅಗತ್ಯಗಳು ಮತ್ತು ನಮ್ಮ ದೈನಂದಿನ ಜೀವನದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯದ ಬಗ್ಗೆ ಚರ್ಚಿಸಿದರು.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಜನವರಿ 15ರ ಭಾನುವಾರ ಸುದೃಢ ಭಾರತದ ಆರೋಗ್ಯಕರ ಹಿಂದೂಸ್ತಾನ ಮಾತಿನ  ಸರಣಿಗೆ ಚಾಲನೆ ನೀಡಿದರು.

ವಿಶೇಷ ಕಾರ್ಯಕ್ರಮ ಪೂರ್ವ ಸಂಚಿಕೆಯಲ್ಲಿ, ಸಚಿವರು ಸುದೃಢ ಭಾರತ ಆರೋಗ್ಯಕರ  ಹಿಂದೂಸ್ತಾನದ ಅಪ್ರತಿಮರುಗಳೊಂದಿಗೆ ವಿಶೇಷ ಅಧಿವೇಶನ ನಡೆಸಿ, ಅಲ್ಲಿ ಅವರು ಸುದೃಢತೆ, ಆರೋಗ್ಯಕರ ಆಹಾರ ಪಟ್ಟಿ, ಹಿರಿಯ ನಾಗರಿಕರ ಅಗತ್ಯಗಳು ಮತ್ತು ನಮ್ಮ ದೈನಂದಿನ ಜೀವನದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯದ ಬಗ್ಗೆ ಚರ್ಚಿಸಿದರು.

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ

ಖ್ಯಾತ ಸುದೃಢತೆ ತಜ್ಞರು ಮತ್ತು ಸುದೃಢ ಭಾರತದ ಅಪ್ರತಿಮರ ಆನ್ ಲೈನ್ ಟಾಕ್ ಶೋ ಸರಣಿಯು 2023ರ ಜನವರಿ 22 ರಿಂದ ಪ್ರಾರಂಭವಾಗಿ ಮಾರ್ಚ್ 12, ರವರೆಗೆ ನಡಯಲಿದ್ದು, ಫಿಟ್ ಇಂಡಿಯಾದ ಅಧಿಕೃತ ಯೂಟ್ಯೂಬ್ ಮತ್ತು ಇನ್ಸ್ ಟಾಗ್ರಾಮ್ ಹ್ಯಾಂಡಲ್ ಗಳಲ್ಲಿ ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.

ಇಂತಹ ಉದಾತ್ತ ಅಭಿಯಾನಕ್ಕಾಗಿ ಸುದೃಢ ಭಾರತದ ಎಲ್ಲ ತಜ್ಞರು ಮತ್ತು ಅಪ್ರತಿಮರನ್ನು ಶ್ಲಾಘಿಸಿದ ಸಚಿವರು, "70 ನೇ ವಯಸ್ಸಿನಲ್ಲಿ, ನಾವು ಆರೋಗ್ಯಕರ ದೇಹವನ್ನು ಬಯಸುತ್ತೇವೆ, ಹಾಗಾದರೆ ನಾವು ಚಿಕ್ಕ ವಯಸ್ಸಿನಿಂದಲೇ ನಮ್ಮ ಆರೋಗ್ಯದ ಬಗ್ಗೆ ಏಕೆ ಕಾಳಜಿ ವಹಿಸಬಾರದು?

ವೃತ್ತಿಪರರಿಂದ ಜ್ಞಾನವನ್ನು ಪಡೆದುಕೊಳ್ಳೋಣ, ಆರೋಗ್ಯಕರವಾಗಿ ತಿನ್ನೋಣ, ನಿಯಮಿತವಾಗಿ ವ್ಯಾಯಾಮ ಮಾಡೋಣ ಮತ್ತು ಸುದೃಢವಾಗಿರೋಣ ಎಂದರು. ನಾವು ಜನರಿಗೆ ಎಷ್ಟು ಬೇಗ ಅರಿವು ಮೂಡಿಸುತ್ತೇವೋ ಅಷ್ಟು ಬೇಗ, ದೊಡ್ಡ ವ್ಯತ್ಯಾಸವಾಗಲಿದೆ ಮತ್ತು ಈ ಪ್ರದರ್ಶನವು ಜನರ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ ಎಂಬ ಸಂಪೂರ್ಣ ವಿಶ್ವಾಸ ತಮಗಿದೆ ಎಂದರು.

ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಸುದೃಢ ಭಾರತ ಆರೋಗ್ಯಕರ ಹಿಂದೂಸ್ತಾನ್ ಎಲ್ಲ ವಯೋಮಾನದವರಲ್ಲಿ, ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ಸುದೃಢತೆ, ಆರೋಗ್ಯಕರ ಆಹಾರ ಮತ್ತು ಮಾನಸಿಕ ಆರೋಗ್ಯದ ಮಹತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ವಿಶ್ವಸಂಸ್ಥೆಯ ಮಹಾಧಿವೇಶನವು 2023ನೇ ವರ್ಷವನ್ನು 'ಅಂತಾರಾಷ್ಟ್ರೀಯ ಸಿರಿಧಾನ್ಯಗಳ ಎಂದು ಘೋಷಿಸಿದೆ. ಇದು ಭಾರತ ಸರ್ಕಾರದ ಉಪಕ್ರಮವಾಗಿದ್ದು, ವಿಶ್ವದಾದ್ಯಂತ 70 ಕ್ಕೂ ಹೆಚ್ಚು ರಾಷ್ಟ್ರಗಳ ಬೆಂಬಲದೊಂದಿಗೆ ವಿಶ್ವಸಂಸ್ಥೆಯ ನಿರ್ಣಯವನ್ನು ಅಂಗೀಕರಿಸಲು ಕಾರಣವಾಗಿದೆ. ಭಾರತೀಯ ಸಿರಿಧಾನ್ಯಗಳು, ಪಾಕವಿಧಾನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಜಾಗತಿಕವಾಗಿ ಸ್ವೀಕರಿಸಲು ಐವೈಒಎಂ 2023 ಅನ್ನು ಜನಾಂದೋಲನವನ್ನಾಗಿ ಮಾಡಲು ಭಾರತ ಸರ್ಕಾರ ಪ್ರಯತ್ನಿಸುತ್ತದೆ.

ಸುದೃಢ ಭಾರತ ಆರೋಗ್ಯಕರ ಹಿಂದೂಸ್ತಾನ್ ಚರ್ಚೆಯಲ್ಲಿ ಪಾಲ್ಗೊಳ್ಳುವವರಲ್ಲಿ ಲ್ಯೂಕ್ ಕುಟಿನ್ಹೋ (ಜೀವನಶೈಲಿ ತಜ್ಞ), ರಯಾನ್ ಫರ್ನಾಂಡೊ (ಕ್ರೀಡಾ ಪೌಷ್ಟಿಕತಜ್ಞ), ಹೀನಾ ಭಿಮಾನಿ (ಪೌಷ್ಟಿಕತಜ್ಞರು) ಮತ್ತು ಸಂಗ್ರಾಮ್ ಸಿಂಗ್ (ಕುಸ್ತಿಪಟು / ಪ್ರೇರಕ ಸ್ಪೀಕರ್) ಸೇರಿದ್ದಾರೆ.

Aadhaar Card| ಆಧಾರ್‌ ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್‌ ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು! Pan Card
ಸಿರಿಧಾನ್ಯಗಳ ಪ್ರಾಮುಖ್ಯದ ಬಗ್ಗೆ ಮಾತನಾಡಿದ ಪೌಷ್ಟಿಕ ತಜ್ಞ ರಯಾನ್ ಫರ್ನಾಂಡೊ, "ಶೇ.60ರಷ್ಟು ಮಹಿಳೆಯರು ಹಿಮೋಗ್ಲೋಬಿನ್ ಕೊರತೆಯನ್ನು ಹೊಂದಿದ್ದಾರೆ ಆದರೆ ಸಿರಿಧಾನ್ಯಗಳ ಬಳಕೆಯು ಆ ಕೊರತೆಯನ್ನು ನಿವಾರಿಸುತ್ತದೆ; ರಾಗಿಯಲ್ಲಿ ಫಿನೋಲಿಕ್ ಆಮ್ಲ ಎಂದು ಕರೆಯಲಾಗುವ ಅಂಶ ಇದ್ದು, ಇದು ಸ್ನಾಯುಗಳ ಹಾನಿಯನ್ನು ಗುಣಪಡಿಸುವ ಅತ್ಯಂತ ಶಕ್ತಿಶಾಲಿ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಆಗಿದೆ ಮತ್ತು ನನ್ನ ಪುಸ್ತಕದಲ್ಲಿ ಸಿರಿಧಾನ್ಯಗಳು ಹೊಸ ಮಹಾನ್ ನಾಯಕರಾಗಲಿವೆ" ಎಂದು ಉಲ್ಲೇಖಿಸಿರುವ ಬಗ್ಗೆ ಹೇಳಿದರು

Published On: 16 January 2023, 12:57 PM English Summary: Fit India Healthy Hindustan Talk Series with Millets Special episode starts

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.