ಚಿನ್ನದ ದರದಲ್ಲಿ ಏರಿಳಿತ ಮುಂದುವರಿದಿದೆ. ಕಳೆದ ತಿಂಗಳ ಪ್ರಾರಂಭದಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿತ್ತು.
ಇದೀಗ ಫೆಬ್ರವರಿ ಕೊನೆಯ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ.
ಚಿನ್ನದ ದರದಲ್ಲಿ ಏರಿಕೆ ಕಂಡುಬರುತ್ತಿರುವುದು. ಚಿನ್ನ ಖರೀದಿದಾರರಲ್ಲಿ ನಿರಾಸೆ ಮೂಡಿಸಿದೆ.
ಅಲ್ಲದೇ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುವ ಆತಂಕವೂ ಇದೆ.
ಗುರುವಾರಕ್ಕೆ ಹೋಲಿಕೆ ಮಾಡಿದರೆ, ಶುಕ್ರವಾರ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.
ಬೆಂಗಳೂರಿನಲ್ಲಿ ಕಸ ನಿರ್ವಹಣೆ ಸಂಸ್ಥೆಗೆ 700 ಕೋಟಿ ರೂ. ಅನುದಾನ!
ಶುಕ್ರವಾರ ಪ್ರತಿ ಗ್ರಾಂ ಆಭರಣದ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ 5,175 ರೂಪಾಯಿ, ಪ್ರತಿ ಹತ್ತು ಗ್ರಾಂ 51,750 ರೂಪಾಯಿ ಮುಟ್ಟಿದೆ.
24 ಕ್ಯಾರಟ್ ಚಿನ್ನದ ದರವು ಪ್ರತಿ ಹತ್ತು ಗ್ರಾಂಗೆ 56,450 ರೂಪಾಯಿ ಆಗಿರುವುದು ವರದಿ ಆಗಿದೆ.
Pension ಹಳೇ ಪಿಂಚಣೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಸರ್ಕಾರ!
ರಾಜ್ಯ ರಾಜಧಾನಿಯಲ್ಲಿಯೂ ಚಿನ್ನದ ಬೆಲೆ ಏರಿಳಿತ ಕಂಡು ಬಂದಿದೆ. ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್ ಚಿನ್ನದ ಬೆಲೆಯು 10 ಗ್ರಾಂಗೆ 51,800 ರೂಪಾಯಿ ಆಗಿದೆ.
ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಳಿತ ಕಂಡುಬಂದಿದೆ. ಶುಕ್ರವಾರ ಒಂದು ಕೆ.ಜಿ ಬೆಳ್ಳಿ ಬೆಲೆಯು 66,500 ರೂಪಾಯಿ ಆಗಿದ್ದು,
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ 10 ಗ್ರಾಂಗೆ 700 ರೂಪಾಯಿ, ನೂರು ಗ್ರಾಂಗೆ 7,000 ಸಾವಿರ ರೂಪಾಯಿ ಹಾಗೂ ಒಂದು
ಕೆ.ಜಿ ಬೆಳ್ಳಿ ಬೆಲೆಯೂ 70,000 ರೂಪಾಯಿ ಮುಟ್ಟಿದೆ.
Bank 5 ದಿನ ಮಾತ್ರ ಇನ್ಮುಂದೆ ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸ ?
ಇದೀಗ ಚಿನ್ನವನ್ನು ಗೂಗಲ್ ಪೇನ ಮೂಲಕವೂ ಖರೀದಿಸಬಹುದಾಗಿದೆ. ಆಗಿದ್ದರೆ ಅದರ ವಿಧಾನಗಳೇನು, ಚಿನ್ನವನ್ನು ಗೂಗಲ್ ಪೇನ ಮೂಲಕ ಖರೀದಿಸಲು
ಅನುಸರಿಸಬೇಕಾದ ವಿಧಾನಗಳೇನು, ಇಲ್ಲಿದೆ ಮಾಹಿತಿ.
ಗೂಗಲ್ ಪೇನ ಮೂಲಕ ಚಿನ್ನ ಖರೀದಿಸುವುದು ಹೇಗೆ ?
ಗೂಗಲ್ ಪೇನ ಮೂಲಕ ಚಿನ್ನ ಖರೀದಿಸುವುದು ಇದೀಗ ಸುಲಭವಾಗಿದೆ. ವಿಧಾನಗಳ ವಿವರ ಇಲ್ಲಿದೆ.
- ಮೊದಲನೇ ಹಂತ: ನಿಮ್ಮ ಪಿನ್ ನಮೂದಿಸಿ ಗೂಗಲ್ ಪೇ ಅಥವಾ ಜಿಪೇ ಆಪ್ ತೆರೆಯಿರಿ
- ಎರಡನೇ ಹಂತ: ಆದ್ಯತೆಯ ನಿಮ್ಮ ಪಾವತಿ ವಿಧಾನ ಆಯ್ಕೆಮಾಡಿ ಮತ್ತು ಪಾವತಿ ಮಾಡಿರಿ
- ನಾಲ್ಕನೇ ಹಂತ: ನೀವು ಎಷ್ಟು ರೂಪಾಯಿಯ ಚಿನ್ನವನ್ನು ಖರೀದಿ ಮಾಡಲು ಬಯಸುತ್ತೀರಿ ಎಂದು ಅದರಲ್ಲಿ ನಿಖರವಾಗಿ ನಮೂದಿಸಿ
- ಐದನೇ ಹಂತ: ಗೋಲ್ಡ್ ಲಾಕರ್ ಅನ್ನು ಕ್ಲಿಕ್ ಮಾಡಿ, Buy Gold ಮೇಲೆ ಕ್ಲಿಕ್ ಮಾಡಿ (ಇಲ್ಲಿ ನಿಮಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಬೆಲೆಯನ್ನು ತೆರಿಗೆ ಸಮೇತ ತೋರಿಸಲಾಗುತ್ತದೆ)
- ಇನ್ನು ಹುಡುಕಾಟ ವಿಭಾಗದಲ್ಲಿ (ಸರ್ಚ್) 'ಗೋಲ್ಡ್ ಲಾಕರ್' ಎಂದು ಬರೆಯಿರಿ.
- ಈ ರೀತಿ ಖರೀದಿಯಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಬಳಕೆದಾರರು ಖರೀದಿಸಬೇಕಾದ ಕನಿಷ್ಠ ಚಿನ್ನದ ಮೊತ್ತವು 1 ಗ್ರಾಂ ಖರೀದಿಸಬೇಕಾಗಿದೆ.
Share your comments