ವಾರಾಂತ್ಯದಲ್ಲಿ ಚಿನ್ನದ ಬೆಲೆಯು ಗ್ರಾಹಕರ ಖುಷಿಯನ್ನು ಹೆಚ್ಚಿಸುವಂತೆಯೇ ಇದೆ!
ಹಬ್ಬದ ಸೀಸನ್ ಇರುವುದರಿಂದ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಕೇಳಿಬಂದಿದ್ದು, ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು.
ಚಿನ್ನದ ಬೆಲೆಯು ಭಾರತದಲ್ಲಿ ಹಲವು ಹೂಡಿಕೆಗಳನ್ನು ನಿರ್ಧರಿಸುತ್ತದೆ.
ಬೆಂಗಳೂರಿನಲ್ಲಿ ಇಂದಿನ ಚಿಲ್ಲರೆ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 5,650 ರೂಪಾಯಿ ಇದೆ.
ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 6,164 ರೂಪಾಯಿ ತಲುಪಿದೆ.
ಇನ್ನು ಕಳೆದ ಒಂದು ವಾರದಿಂದ ಚಿನ್ನದ ಬೆಲೆಯನ್ನು ನೋಡುವುದಾದರೆ, ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆಯಾದರೂ,
ಒಟ್ಟಾರೆ ಚಿನ್ನದ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿಲ್ಲ. ಹೀಗಾಗಿ ಹಬ್ಬದ ಸೀಸನ್ನಲ್ಲಿ ಚಿನ್ನ ಖರೀದಿಸಲು ಇಚ್ಛಿಸುವವರಿಗೆ ಇದು ಶುಭ
ಸುದ್ದಿಯೆಂದೇ ಹೇಳಬಹುದಾಗಿದೆ. ಚಿನ್ನದ ಬೆಲೆ ವಾರಾಂತ್ಯದಲ್ಲಿ ಸ್ಥಿರವಾಗಿದ್ದು, ಖರೀದಿದಾರರಲ್ಲಿ ನಿರಾಳತೆ ಮೂಡಿಸಿದೆ.
ಇನ್ನು ಸಾಮಾನ್ಯವಾಗಿ ಭಾರತದಲ್ಲಿ ಚಿನ್ನದ ಖರೀದಿಗೆ ಬೇಡಿಕೆ ಹೆಚ್ಚಾಗುತ್ತಲ್ಲೇ ಇರುತ್ತದೆ.
ಅಲ್ಲದೇ, ವಿಶ್ವದಲ್ಲಿ ಅನಿರೀಕ್ಷಿತ ಅಥವಾ ನಿರೀಕ್ಷೆ ಮಾಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಚಿನ್ನದ ಬೆಲೆಯಲ್ಲಿ
ಹೆಚ್ಚಳವಾಗುವುದನ್ನು ನಾವು ನೋಡಬಹುದು.
ನೆನ್ನೆ, (Gold price 4th November ) ಇಂದು ಹಾಗೂ ಬೆಲೆಯ ವ್ಯತ್ಯಾಸವನ್ನು ನೀವಿಲ್ಲಿ ನೋಡಬಹುದು.
ಚಿನ್ನ ಗ್ರಾಂ |
ಇಂದಿನ 22 ಕ್ಯಾರಟ್ ಬೆಲೆ |
ನೆನ್ನೆಯ 22 ಕ್ಯಾರಟ್ ಬೆಲೆ |
ಬೆಲೆ ವ್ಯತ್ಯಾಸ |
1 ಗ್ರಾಂ |
5,650 |
5,650 |
0 |
8 ಗ್ರಾಂ |
45,200 |
45,200 |
0 |
10 ಗ್ರಾಂ |
56,500 |
56,500 |
0 |
100 ಗ್ರಾಂ |
5,65,000 |
5,65,000 |
0 |
ಚಿನ್ನದ 24 ಕ್ಯಾರಟ್ (24 carat of gold) ಬೆಲೆಯನ್ನು ನೋಡುವುದಾದರೆ,
ಚಿನ್ನ ಗ್ರಾಂ |
ಇಂದಿನ 22 ಕ್ಯಾರಟ್ ಬೆಲೆ |
ನೆನ್ನೆಯ 22 ಕ್ಯಾರಟ್ ಬೆಲೆ |
ಬೆಲೆ ವ್ಯತ್ಯಾಸ |
1 ಗ್ರಾಂ |
6,164 |
6,164 |
0 |
8 ಗ್ರಾಂ |
49,312 |
49,312 |
0 |
10 ಗ್ರಾಂ |
61,640 |
61,640 |
0 |
100 ಗ್ರಾಂ |
6,16,400 |
6,16,400 |
1600 |
ಇನ್ನು ವಿಶ್ವದ ಎರಡು ಪ್ರಮುಖ ಭಾಗದಲ್ಲಿ ಯುದ್ಧ ನಡೆಯುತ್ತಿರುವುದು ಹಾಗೂ ಅನಿಶ್ಚಿತತೆ ಕೂಡಿರುವುದರಿಂದ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿರುವುದು
ಕಂಡುಬರುತ್ತಿದೆ. ಆದರೆ, ಅಕ್ಟೋಬರ್ ತಿಂಗಳ ಅಂತ್ಯ ಹಾಗೂ ನವೆಂಬರ್ ಮಾಸದ ಪ್ರಾರಂಭದಲ್ಲಿ ಚಿನ್ನದ ಬೆಲೆಯು ಕುಸಿತ ಕಂಡಿದ್ದು, ಕಡಿಮೆ ಬೆಲೆ ಇದೆ.
Share your comments