ಕರಾವಳಿ ಭಾಗದ ಜನರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.
ಚಂದ್ರಗ್ರಹಣ; ಬೆಂಗಳೂರಲ್ಲಿ ಮೊಟ್ಟೆ ಬಿರಿಯಾನಿ ತಿನ್ನುವ ಪ್ರತಿಭಟನೆ!
ಕರಾವಳಿ ಭಾಗದಲ್ಲಿ ಬೆಳೆಯುವ ಕುಚಲಕ್ಕಿ ಭತ್ತವನ್ನು ರೈತರಿಂದ ನೇರವಾಗಿ ಖರೀದಿಸಿ ಕರಾವಳಿ ಜಿಲ್ಲೆಗಳ ಬಿಪಿಎಲ್ ಕಾರ್ಡ್ದಾರರಿಗೆ ಕುಚಲಕ್ಕಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಪಡಿತರದಲ್ಲಿ ಕುಚಲಕ್ಕಿ ನೀಡುವಂತೆ ಹಲವು ದಿನಗಳಿಂದ ಕರಾವಳಿ ಭಾಗದ ಜನ ಮನವಿ ಮಾಡಿದ್ದರು.
ಪಡಿತರದಲ್ಲಿ ಕುಚಲಕ್ಕಿ ಕೊಡಬೇಕು ಎಂಬ ಕರಾವಳಿಗರ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಜನರ ಬೇಡಿಕೆ ಈಡೇರಿಸಲಾಗುವುದು ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ.
Breaking: ಬರೋಬ್ಬರಿ 10 ಲಕ್ಷ ಜನರ ಪಡಿತರ ಚೀಟಿ ರದ್ದು ಮಾಡಿದ ಸರ್ಕಾರ! ಯಾಕೆ ಗೊತ್ತೆ?
ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು.
ಮುಂದಿನ ವಾರದಲ್ಲಿ ಈ ಸಂಬಂಧ ಸಭೆ ನಡೆಸಲಾಗುವುದು ಎಂದರು.
ಇನ್ನು ಆಳಸಮುದ್ರ ಮೀನುಗಾರಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೀನುಗಾರರಿಗೆ ಮೊದಲ ಹಂತದಲ್ಲಿ 100 ಹೈಸ್ಪೀಡ್ ಬೋಟ್ಗಳನ್ನು ನೀಡಲಾಗುವುದು ಎಂದರು.
ನವೆಂಬರ್ 8ಕ್ಕೆ ವಿವಿಧೆಡೆ ಪೂರ್ಣ ಚಂದ್ರಗ್ರಹಣ, ವಿಶೇಷತೆ ಗೊತ್ತೆ ?
ಮೀನುಗಾರರಿಗೆ ಹೈಸ್ಪೀಡ್ ಬೋಟ್ಗಳನ್ನು ನೀಡುವ ನಿಟ್ಟಿನಲ್ಲಿ ಈಗಾಗಲೇ ಫಲಾನುಭವಿಗಳ ಆಯ್ಕೆ ನಡೆದಿದ್ದು ಸರ್ಕಾರದಿಂದ ಶೇ 40 ಸಹಾಯಧನ ಸಿಗಲಿದೆ.
ಮೀನುಗಾರರು ಶೇ 10ರಷ್ಟು ಬಂಡವಾಳ ಹಾಕಿದರೆ ₹ 1.5 ಕೋಟಿ ಮೌಲ್ಯದ ದೊಡ್ಡ ಹೈಸ್ಪೀಡ್ ಬೋಟ್ ಸಿಗಲಿದೆ ಎಂದು ಮಾಹಿತಿ ನೀಡಿದರು.
ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರದೇಶದ ದೈನಂದಿನ ಆಹಾರದಲ್ಲಿ ಕುಚಲಕ್ಕಿಗೆ ವಿಶೇಷವಾದ ಸ್ಥಾನವಿದೆ. ಇನ್ನು ಕೇಂದ್ರ ಸರ್ಕಾರವು ಪಡಿತರದಲ್ಲಿ ಕುಚಲಕ್ಕಿ ವಿತರಣೆ ಮಾಡಲು ಆದೇಶಿಸಿದೆ.
ಕರಾವಳಿ ಭಾಗದಲ್ಲಿ ಕುಚಲಕ್ಕಿ ನೀಡುವ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದರು.
ಇದಕ್ಕೆ ಅವರು ಸ್ಪಂದಿಸಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ನೀಡುವ ಪಡಿತರ ಸಂಬಂಧಿತ ಧಾನ್ಯಗಳ ವಿತರಣೆಯಲ್ಲಿ ಕುಚಲಕ್ಕಿ ಸೇರಿಸಲು ಅವರು ಆದೇಶ ನೀಡಿದ್ದಾರೆ.
ಕರಾವಳಿ ಭಾಗದ ಜನ ಪಡಿತರದಲ್ಲಿ ಕುಚಲಕ್ಕಿ ನೀಡುವಂತೆ ಮನವಿ ಮಾಡಿದ್ದರಾಗಿದ್ದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಕರಾವಳಿ ಪ್ರದೇಶದ ಪಡಿತರದಲ್ಲಿ ಕುಚಲಕ್ಕಿ ಸೇರ್ಪಡೆಯಾಗಿರಲಿಲ್ಲ. ಅಲ್ಲಿಯೂ ಬೆಳ್ತಕ್ಕಿ ವಿತರಣೆ ಮಾಡಲಾಗುತ್ತಿತ್ತು.
ಕೇಳುವವರೇ ಇಲ್ಲ ಕೋವ್ಯಾಕ್ಸಿನ್; 50 ಮಿಲಿಯನ್ ಕೋವ್ಯಾಕ್ಸಿನ್ ನಿಷ್ಕ್ರೀಯತೆಗೆ ತಯಾರಿ!
ರಾಜ್ಯದ ಕರಾವಳಿ ಭಾಗದವರಿಗೆ ಪಡಿತರದಲ್ಲಿ ಕುಚಲಕ್ಕಿ ಸೇರಿಸುವಂತೆ ಕೇಂದ್ರ ಸರ್ಕಾರ ನೀಡಿರುವ ಆದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಡಿತರದಲ್ಲಿ ವಿತರಿಸಲು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಳೆದ ಕುಚಲಕ್ಕಿ ನೀಡಲು
ಒಪ್ಪಿಕೊಂಡಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾಕ್ಕೆ ಧನ್ಯವಾದಗಳು. ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವ ಜೊತೆಗೆ ಫಲಾನುಭವಿಗಳಿಗೆ ಅವರ ಆಯ್ಕೆಯ ಆಹಾರ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
Share your comments