1. ಸುದ್ದಿಗಳು

Southwest Monsoon ರೈತರಿಗೆ ಸಿಹಿಸುದ್ದಿ ಕೇರಳಕ್ಕೆ ಬಂತು ನೈರುತ್ಯ ಮುಂಗಾರು…

Hitesh
Hitesh
Good news for farmers: Southwest Monsoon has come to Kerala...

ನೈರುತ್ಯ ಮುಂಗಾರು ಗುರುವಾರ ಕೇರಳಕ್ಕೆ ಪ್ರವೇಶಿಸಿದೆ  ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

ಮಾನ್ಸೂನ್ ಅರಬ್ಬಿ ಸಮುದ್ರದ ಉಳಿದ ಭಾಗಗಳಿಗೆ ತಲುಪಿದ್ದು, ಮುಂಗಾರು ಮಧ್ಯ ಅರಬ್ಬಿ ಸಮುದ್ರದ ಭಾಗಗಳು,

ಸಂಪೂರ್ಣ ಲಕ್ಷದ್ವೀಪ ಪ್ರದೇಶಗಳು, ಕೇರಳದ ಹೆಚ್ಚಿನ ಭಾಗಗಳು (ತಿರುವನಂತಪುರದಿಂದ ಕಣ್ಣೂರು), ದಕ್ಷಿಣ ತಮಿಳುನಾಡಿನ ಬಹುತೇಕ ಭಾಗಗಳು,

ಕೊಮೊರಿನ್ ಪ್ರದೇಶ, ಮನ್ನಾರ್ ಕೊಲ್ಲಿ,ನೈಋತ್ಯ, ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯನ್ನು ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.  

ಇನ್ನು ಮುಂದಿನ 48 ಗಂಟೆಗಳಲ್ಲಿ ಮುಂಗಾರು ಕಾಸರಗೋಡು ಜಿಲ್ಲೆಗೆ ಆಗಮಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.   

ಅಲ್ಲದೇ ಮಧ್ಯ ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ಗಂಟೆಗೆ 135 ರಿಂದ 145 ಕಿ.ಮೀ ವೇಗದಲ್ಲಿ ಗಾಳಿಯ ವೇಗವಾಗಿ

ಹಾಗೂ ಮುಂದುವರಿದು  ಗಂಟೆಗೆ 160 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.  

ಸಮುದ್ರ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 145 ರಿಂದ 155 ಕಿ.ಮೀ ಮತ್ತು ಕೆಲವು ಸಂದರ್ಭಗಳಲ್ಲಿ

ಗಂಟೆಗೆ 170 ಕಿ.ಮೀ ವರೆಗೆ ಬದಲಾಗುವ ಸಾಧ್ಯತೆಯಿದೆ.

ದಕ್ಷಿಣ ಅರೇಬಿಯನ್ ಸಮುದ್ರದ ಪ್ರದೇಶಗಳಲ್ಲಿ ಸಾಂದರ್ಭಿಕವಾಗಿ 60 ಕಿಮೀ ಗಂಟೆಗೆ 40 ರಿಂದ 50 ಕಿಮೀ

ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.

ಮಧ್ಯ ಅರೇಬಿಯನ್ ಸಮುದ್ರದ ಮೇಲೆ 145 ರಿಂದ 155 kmph ಮತ್ತು ಕೆಲವು ಸಂದರ್ಭಗಳಲ್ಲಿ

170 kmph ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.

ದಕ್ಷಿಣ ಅರೇಬಿಯನ್ ಸಮುದ್ರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ

ವೇಗದಲ್ಲಿ ಮತ್ತು ಸಾಂದರ್ಭಿಕವಾಗಿ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಎಂದು ಅಂದಾಜಿಸಲಾಗಿದೆ.

11-06-2023 : 135 ರಿಂದ 145 kmph ವೇಗದ ಗಾಳಿ ಮತ್ತು ಸಾಂದರ್ಭಿಕವಾಗಿ 160 kmph ವೇಗದ ಗಾಳಿಯು

ಉತ್ತರ ಅರೇಬಿಯನ್ ಸಮುದ್ರದ ಮಧ್ಯ ಭಾಗಗಳು ಮತ್ತು ಪಕ್ಕದ ಪ್ರದೇಶಗಳಲ್ಲಿ ಸಾಧ್ಯತೆ ಇದೆ.

ಅಂಡಮಾನ್ ಸಮುದ್ರ, ಮಧ್ಯ-ಪೂರ್ವ ಮತ್ತು ಪಕ್ಕದ ಮಧ್ಯ-ಪಶ್ಚಿಮ ಬಂಗಾಳ ಕೊಲ್ಲಿ, ಆಗ್ನೇಯ ಮತ್ತು ಪಕ್ಕದ

ನೈಋತ್ಯ ಬಂಗಾಳ ಕೊಲ್ಲಿ, ಶ್ರೀಲಂಕಾ ಕರಾವಳಿಯ ಮೇಲೆ ಸಾಂದರ್ಭಿಕ 55 ಕಿಮೀ ವೇಗದಲ್ಲಿ

ಗಂಟೆಗೆ 40 ರಿಂದ 45 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

ಸಮುದ್ರ ಭಾಗದಲ್ಲಿ ಭಾರೀ ಗಾಳಿ ಹಾಗೂ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ

ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.  

Published On: 09 June 2023, 02:10 PM English Summary: Good news for farmers: Southwest Monsoon has come to Kerala...

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.