1. ಸುದ್ದಿಗಳು

Good News: ಸೆಣಬು ಪ್ಯಾಕೇಜಿಂಗ್‌; ಕೇಂದ್ರದ ನಿರ್ಧಾರದಿಂದ ಸೆಣಬು ಬೆಳೆವವರಿಗೆ ಬಂಪರ್‌ !

Hitesh
Hitesh
ಸೆಣಬು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಬಂಪರ್‌ ಗಿಫ್ಟ್‌

ಮೋದಿ ಸರ್ಕಾರವು ಸೆಣಬು ಪ್ಯಾಕೇಜಿಂಗ್‌ ಮೇಲೆ ಮೀಸಲಾತಿ ಘೋಷಿಸಿದ್ದು, ಸೆಣಬು ಬೆಳೆದಾರರಿಗೆ ಇದು ವರದಾನವಾಗಲಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸೆಣಬು ಬೆಳೆಯುವ ರೈತರಿಗೆ ಬಂಪರ್‌ ವರದಾನ ಸಿಕ್ಕಂತಾಗಿದೆ.

ಈ ನಿರ್ಧಾರವು ಸೆಣಬಿನ ವಲಯವನ್ನು ಪುನಶ್ಚೇತನಗೊಳಿಸಲು ಕೊಡುಗೆ ನೀಡುತ್ತದೆ.

ಅಲ್ಲದೇ ನಮ್ಮ ಕುಶಲಕರ್ಮಿಗಳು ಮತ್ತು ರೈತರಿಗೆ ಪ್ರಮುಖ ಉತ್ತೇಜನ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2023-24ನೇ ಸಾಲಿನಲ್ಲಿ ಪ್ಯಾಕೇಜಿಂಗ್ ವಸ್ತುಗಳಿಗೆ ಸೆಣಬಿನ ಮೀಸಲಾತಿ ಮಾನದಂಡಗಳಿಗೆ ಮೋದಿ ಸರ್ಕಾರ ಅನುಮೋದ ನೀಡಿದೆ.

ಸೆಣಬಿನ  ಕ್ಷೇತ್ರವನ್ನು ಬಲಪಡಿಸುವ ಮತ್ತು ನಮ್ಮ ವಿಶ್ವಕರ್ಮರನ್ನು ಬೆಂಬಲಿಸುವ ಮಹತ್ವದ ಹೆಜ್ಜೆಯಾಗಿದೆ

ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಾಲ್‌ ತಿಳಿಸಿದ್ದಾರೆ.

ಸೆಣಬು ಕ್ಷೇತ್ರದ ಬಲವರ್ಧನೆ

100% ಆಹಾರ ಧಾನ್ಯಗಳು ಮತ್ತು 20% ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ಪ್ಯಾಕ್ ಮಾಡುವುದನ್ನು ಕಡ್ಡಾಯಗೊಳಿಸುವ

ನಿರ್ಧಾರವು 4 ಲಕ್ಷ ಸೆಣಬಿನ ಕಾರ್ಮಿಕರಿಗೆ ಗಣನೀಯ ಪರಿಹಾರವನ್ನು ವಿಸ್ತರಿಸುತ್ತದೆ.

ಅಲ್ಲದೇ ದೇಶದ 40 ಲಕ್ಷ ರೈತ ಕುಟುಂಬಗಳಿಗೆ ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಸೆಣಬು ಕ್ಷೇತ್ರಕ್ಕೆ ಬಂಪರ್‌; ಪ್ರಮುಖ ಅಂಶಗಳು

* 2023-24 ಸೆಣಬಿನ ವರ್ಷ; ಪ್ಯಾಕೇಜಿಂಗ್‌ನಲ್ಲಿ ಸೆಣಬಿನ ಕಡ್ಡಾಯ ಬಳಕೆಯನ್ನು ಅನುಮೋದನೆ.

*  100% ಆಹಾರ ಧಾನ್ಯಗಳ ಒಟ್ಟು ಉತ್ಪಾದನೆಯನ್ನು ಸೆಣಬಿನ ಚೀಲಗಳಲ್ಲಿ ಪ್ಯಾಕ್ ಮಾಡಬೇಕು.

* ಒಟ್ಟು ಸಕ್ಕರೆ ಉತ್ಪಾದನೆಯ 20% ರಷ್ಟು ಸೆಣಬು ಪ್ಯಾಕೇಜಿಂಗ್

*  ಹೊಸ ಮಾರ್ಕೆಟಿಂಗ್ ಮಾರ್ಗವನ್ನು ಒದಗಿಸಲು GeM ಪೋರ್ಟಲ್ ಮೂಲಕ 10% ಖರೀದಿ

*  ನಮ್ಮ ರೈತರು ಉತ್ಪಾದಿಸಿದ ಕಚ್ಚಾ ಸೆಣಬಿನ 100% ಆಫ್ಟೇಕ್ ಗ್ಯಾರಂಟಿ

* 3.7 ಲಕ್ಷ ಸೆಣಬು ಕಾರ್ಮಿಕರು ಮತ್ತು 40 ಲಕ್ಷ ರೈತರ ಹಿತಾಸಕ್ತಿಗೆ ಆದ್ಯತೆ

* ವಿಶೇಷವಾಗಿ ಪೂರ್ವ ಮತ್ತು ಈಶಾನ್ಯ ಪ್ರದೇಶದಲ್ಲಿ ಆರ್ಥಿಕತೆಗೆ ಉತ್ತೇಜನ.

*  ಸೆಣಬಿನ ಉದ್ಯಮಕ್ಕೆ ಖಾತರಿಯ ಮಾರುಕಟ್ಟೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ವರ್ಷ $12,000 ಕೋಟಿ ಮೌಲ್ಯದ ಸೆಣಬಿನ ಚೀಲಗಳನ್ನು ಖರೀದಿ

ಸೆಣಬಿಗೆ ಕೇಂದ್ರ ಸರ್ಕಾರದಿಂದ ಬಂಪರ್‌
ಸೆಣಬಿಗೆ ಕೇಂದ್ರ ಸರ್ಕಾರದಿಂದ ಬಂಪರ್‌

* ರ್ಕಾರಿ ಏಜೆನ್ಸಿಗಳು ಉತ್ಪಾದಿಸಿದ ಒಟ್ಟು ಸೆಣಬಿನ ಚೀಲಗಳ 85% ರಷ್ಟು ಖರೀದಿ

ಕೇಂದ್ರ ಸರ್ಕಾರದ ಈ ನಿರ್ಧಾರಿಂದಾಗಿ ಕಚ್ಚಾ ಸೆಣಬು ಮತ್ತು ಸೆಣಬಿನ ಪ್ಯಾಕೇಜಿಂಗ್ ವಸ್ತುಗಳ ದೇಶೀಯ ಉತ್ಪಾದನೆಯನ್ನು

ಹೆಚ್ಚಿಸುವ ಮೂಲಕ ಆತ್ಮನಿರ್ಭರ್ ಭಾರತವನ್ನು ಉತ್ತೇಜಿಸುತ್ತದೆ.

* ಜೈವಿಕ ವಿಘಟನೀಯ, ನವೀಕರಿಸಬಹುದಾದ ಮತ್ತು ಮರುಬಳಕೆ ಮಾಡಬಹುದಾದ ಫೈಬರ್‌ನ ಬಳಕೆಯನ್ನು ಹೆಚ್ಚಿಸುವುದರಿಂದ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ

ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.  

ಸೆಣಬಿಗೆ ಕೇಂದ್ರ ಸರ್ಕಾರದಿಂದ ಬಂಪರ್‌
Published On: 11 December 2023, 11:55 AM English Summary: Good News: Jute Packaging; A bumper for jute growers by the decision of the center!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.