ಹತ್ತಿ ಬೆಳೆಗೆ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ರೈತರಿಗೆ ವರವಾಗಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಬೆಂಬಲ ಬೆಲೆಯಿದ್ದರಿಂದ ರೈತರು ಸಂತಸರಾಗಿದ್ದಾರೆ. ಹತ್ತಿ ಮಾರಾಟದ ವಹಿವಾಟು ಸಹ ಜೋರಾಗಿ ನಡೆದಿದೆ.
ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಹತ್ತಿಗೆ 5500 ರೂಪಾಯಿ ಬೆಂಬಲ ಬೆಲೆ ಘೋಷಿಸಿದೆ. ಸದ್ಯ ಮಾರುಕಟ್ಟೆಯಲ್ಲಿ 3300 ರಿಂದ ಗರಿಷ್ಠ 5000 ರೂಪಾಯಿಯವರೆಗೆ ದರವಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪ್ರಮಾಣದ ಬೆಂಬಲ ಬೆಲೆ ಸಿಕ್ಕಿದ್ದರಿಂದ ರೈತರು ಖುಷಿಯಿಂದಲೇ ಹತ್ತಿ ಮಾರಿದ್ದಾರೆ.
ಕಲಬುರಗಿ ಜಿಲ್ಲೆಯ ಎಪಿಎಂಸಿಗಳಲ್ಲಿ ಸದಾ ತೊಗರಿ, ಜೋಳ ಮಾರಾಟ ಭರ್ಜರಿಯಾಗುತ್ತಿತ್ತು. ಆದರೆ ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಹೇರಿದ್ದ ಲಾಕ್ಡೌನ್ ನಿಂದಾಗಿ ಜಿಲ್ಲೆಯ ರೈತರು ಈ ಬಾರಿ ಎಪಿಎಂಸಿಯಲ್ಲಿ ದಾಖಲೆ ಪ್ರಮಾಣದ ಹತ್ತಿ ಮಾರಾಟಮಾಡಿದ್ದಾರೆ. ಜಿಲ್ಲೆಯಲ್ಲಿ ಎರಡೇ ಹತ್ತಿ ಮಿಲ್ಗಳಿದ್ದು, ರೈತರಿಗೆ ಖರೀದಿಸಿದ ಹತ್ತಿಯನ್ನು ಇವುಗಳಿಗೆ ಪೂರೈಸಲಾಗಿದೆ.
ಹತ್ತಿ ಬೆಳೆಗಾರರು ಹೊರಗಿನ ಮಾರುಕಟ್ಟೆ-ಮದ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದರು. ಆದರೆ ಲಾಕ್ಡೌನ್ ಪರಿಣಾಮವಾಗಿ ಹೊರಗಿನವರು ಖರೀದಿಗೆ ಬರಲಿಲ್ಲ. ಹಾಗಾಗಿ ಸ್ಥಳೀಯ ಎಪಿಎಂಸಿಯಲ್ಲಿ ಹತ್ತಿ ಮಾರಾಟ ಉತ್ತಮವಾಗಿ ನಡೆಯುತ್ತಿದೆ. ಸರ್ಕಾರ ಉತ್ತಮ ಬೆಂಬಲ ಬೆಲೆ ಘೋಷಿಸಿದ್ದು, ರೈತರಿಗೆ ಅನುಕೂಲವಾಗಿದೆ.
Share your comments