ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಲಾಭವನ್ನು ಎಲೆಚುಕ್ಕಿ ರೋಗ ಬಾಧಿತ ಅಡಿಕೆ ತೋಟದ ಬೆಳೆಗಾರರಿಗೂ
ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರು ನೀಡಿರುವ ಪ್ರಾಥಮಿಕ ವರದಿಯ ಅನ್ವಯ 42 ಸಾವಿರ ಹೇಕ್ಟರ್
ಪ್ರದೇಶದಲ್ಲಿ ಅಡಿಕೆ ಗಿಡಗಳು ಎಲೆಚುಕ್ಕಿ ರೋಗಕ್ಕೆ ತುತ್ತಾಗಿವೆ.
Food crisis| ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ|
ಎಲೆಚುಕ್ಕಿ ರೋಗ ತಡೆಗೆ ಕೇಂದ್ರ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಿದ್ದು, ಸಮಿತಿ ಅಧ್ಯಯನ ನಡೆಸಿ ವರದಿ ನೀಡಲಿದೆ.
ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಅಲ್ಲದೇ ಎಲೆಚುಕ್ಕಿ ರೋಗ ತಡೆಗೆ ಔಷಧಿ ಸಿಂಪಡಿಸಲು ಈಗಾಗಲೇ 10 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಹಳದಿ ರೋಗವನ್ನು ಸಮರ್ಥವಾಗಿ ನಿಭಾಯಿಸಿದ ಅನುಭವ ಸರ್ಕಾರಕ್ಕೆ ಇರುವುದರಿಂದ ಎಲೆಚುಕ್ಕಿ ರೋಗವನ್ನೂ ಸಮರ್ಥವಾಗಿ ತಡೆಯಲಾಗುವುದು ಎಂದಿದ್ದಾರೆ.
Heavy Rain ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ವಿವಿಧೆಡೆ ಮೂರು ದಿನ ಮಳೆ
ಬೆಳೆ ರಕ್ಷಿಸಿಕೊಳ್ಳಲು ಲಾರಿ ಮುಂದೆ ಕುಳಿತ ಮಹಿಳೆ!
ಜಮೀನಿನಲ್ಲಿ ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಏಕಾಂಗಿಯಾಗಿ ಲಾರಿಯ ಮುಂದೆ ಕುಳಿತು ಪ್ರತಿಭಟಿಸಿದ ಘಟನೆ
ದಾವಣಗೆರೆಯ ಹರಿಹರದಲ್ಲಿ ನಡೆದಿದೆ.
ಮಣ್ಣು ಸಾಗಣೆಕೆಯ ಲಾರಿಗಳ ಧೂಳಿನಿಂದ ಬೆಳೆ ಸಂರಕ್ಷಿಸಲು ಹರಿಹರದ ಸಾರಥಿ ಗ್ರಾಮದ ಮಹಿಳೆ
ಕೊಟ್ರಮ್ಮ ಏಕಾಂಗಿಯಾಗಿ ರಸ್ತೆಯಲ್ಲಿ ಅಡ್ಡಲಾಗಿ ಕುಳಿತು ಲಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿ ಧೂಳಿನಿಂದ ಹಾಳಾಗುತ್ತಿರುವುದರಿಂದ ಧರಣಿ ಕುಳಿತರು.
ಇದರಿಂದಾಗಿ ಇಟ್ಟಿಗೆ ಭಟ್ಟಿಗೆ ಮಣ್ಣು ಸಾಗಿಸುತ್ತಿದ್ದ ಲಾರಿಗಳು ಅಲ್ಲಿಯೇ ನಿಂತವು. ವಾಹನ ಸಂಚಾರವೂ ಬಂದ್ ಆಯಿತು.
ಮೂರುಗಂಟೆಗೂ ಹೆಚ್ಚು ವಾಹನದ ಮುಂದೆ ಕುಳಿತು ಕೊಟ್ರಮ್ಮ ಅವರು ಪ್ರತಿಭಟನೆ ನಡೆಸಿದರು.
------
ರಾಜ್ಯದಲ್ಲಿ ಅತಿಯಾದ ಮಳೆ: ಕೊಬ್ಬರಿ ಬೆಲೆ ಕುಸಿತ
ರಾಜ್ಯದಲ್ಲಿ ಈಚೆಗೆ ಸುರಿದ ಮಳೆಯಿಂದ ಕೊಬ್ಬರಿ ಗುಣ್ಣಮಟ್ಟ ಕಡಿಮೆ ಆಗಿದ್ದು, ಬೆಲೆ ಕುಸಿತ ಕಂಡಿದೆ.
ಕೊಬ್ಬರಿಯಲ್ಲಿ ಹೆಚ್ಚು ತೇವಾಂಶ ಇರುವುದರಿಂದ ರಫ್ತು ಮಾಡುವುದಕ್ಕೆ ಹಿನ್ನಡೆ ಉಂಟಾಗಿದೆ.
ತಿಪಟೂರಿನಲ್ಲಿ ಕಳೆದ ಏಪ್ರಿಲ್ ಮತ್ತು ಮೇನಲ್ಲಿ ಕ್ವಿಂಟಾಲ್‌ಗೆ 16,700 ರೂಪಾಯಿ ಇದ್ದ ಬೆಲೆ ಇದೀಗ 12 ಸಾವಿರಕ್ಕೆ ಕುಸಿದಿದೆ.
ಕೊಬ್ಬರಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಖರೀದಿದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿದೆ.
ಅಲ್ಲದೇ ಕಳೆದ ಎರಡು ಮೂರು ವರ್ಷಗಳಿಂದ ಹೆಚ್ಚು ಮಳೆ ಆಗುತ್ತಿರುವುದು ಸಹ ಕೊಬ್ಬರಿ ಬೆಲೆಯ ಮೇಲೆ ಪರಿಣಾಮ ಬೀರಿದೆ.
------
ದೇಶದಲ್ಲಿ ಹಿಂಗಾರು ಬಿತ್ತನೆ ಹೆಚ್ಚಳ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ರೈತ ಮಕ್ಕಳ ವಿದ್ಯಾನಿಧಿ ಯೋಜನೆ: ಟೈಲರ್ ಮಕ್ಕಳಿಗೂ ವಿಸ್ತರಣೆ
ರಾಜ್ಯದಲ್ಲಿ ರೈತರ ಮಕ್ಕಳಿಗೆ ಜಾರಿಗೊಳಿಸಿರುವ ವಿದ್ಯಾನಿಧಿ ಯೋಜನೆ ಸೌಲಭ್ಯವನ್ನು ಇನ್ನು ಮುಂದೆ ಟೈಲರ್ ಮಕ್ಕಳಿಗೂ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಕೊಪ್ಪಾದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಟೈಲರ್ ಮಕ್ಕಳಿಗೂ ಯೋಜನೆಯನ್ನು ವಿಸ್ತರಿಸಬೇಕು ಮನವಿ ಬಂದಿರುವ ಹಿನ್ನೆಲೆಯಲ್ಲಿ ಯೋಜನೆ ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ.
Share your comments