ಹೊಸ ವರ್ಷ ಅಂದ ತಕ್ಷಣ ಪ್ರತಿಯೊಬ್ಬರ ಮುಖದಲ್ಲಿ ಸಂತಸವಿದ್ದೇವಿರುತ್ತದೆ. ಇಂತಹ ಸಂತಸದ ಕ್ಷಣವನ್ನು ಎಲ್ಲರಿಗೂ ಹಂಚಿಕೊಳ್ಳುವ ಕುತೂಹಲವಿದ್ದೇವಿರುತ್ತದೆ.
ನಿಮ್ಮ ಪ್ರೀತಿಪಾತ್ರರಿಗೆ, ಗೆಳೆಯರಿಗೆ ಹೊಸವರ್ಷದ ಸುಭಾಷಯಗಳ ಸಂದೇಶಗಳು ಇಲ್ಲಿವೆ. ಇನ್ನೇಕೆ ತಡ ಆಯ್ಕೆ ಮಾಡಿಕೊಳ್ಳಿ ಇದರಲ್ಲಿ ಕಳಿಸಿ ನಿಮ್ಮ ಗೆಳೆಯರಿಗೆ.
* ಹೊಸ ವರ್ಷಕ್ಕೆ ಹೊಸ ಬದುಕನ್ನು ಕಟ್ಟಿಕೊಳ್ಳೋಣ. ಹಳೆಯ ಕಹಿ ನೆನಪನ್ನು ಮರೆತು ಖುಷಿಯಿಂದ ಹೆಜ್ಜೆ ಇಡೋಣ. ಸಾಧಿಸಬೇಕಾದ ಗುರಿಯನ್ನು ಮುಟ್ಟುವ ತನಕ ಶ್ರಮಿಸೋಣ. ನನ್ನೆಲ್ಲಾ ಹಿತೈಷಿಗಳಿಗೆ ಹೊಸ ವರ್ಷದ ಶುಭಾಶಯಗಳು
2020ಕ್ಕೆ ವಿದಾಯ... 2021ಕ್ಕೆ ಸ್ವಾಗತ... ಹೊಸ ಹುರುಪು, ಹೊಸ ಉಲ್ಲಾಸ, ಹೊಸ ಖುಷಿ, ಹೊಸ ಆಲೋಚನೆಗಳು, . ಕಳೆದು ಹೋದ ಕ್ಷಣ ಮತ್ತೆ ಸಿಗದು. ಬದುಕಿನ ಹೊಸ ಪುಟದಲ್ಲಿ ಯಶಸ್ಸು, ಖುಷಿ, ಶಾಂತಿ, ನೆಮ್ಮದಿಯ ನೆನಪುಗಳೇ ದಾಖಲಾಗುವಂತೆ ಮಾಡುವುದು ಮುಖ್ಯ.
2020ರ ಕಷ್ಟಗಳೆಲ್ಲಾ ಕರಗಿ ಹೋಗಲಿ... 2021 ಹರುಷದ ಹೊನಲನ್ನೇ ಹರಿಸಲಿ... ಕಾಡುತ್ತಿದ್ದ ಕೊರೊನಾ ಮಹಾಮಾರಿಯ ಅಬ್ಬರ ನಿಲ್ಲಲಿ... ನೋವೆಲ್ಲಾ ಮರೆಯಾಗಿ ಖುಷಿಯೊಂದೇ ಬಾಳಿನಲ್ಲಿ ನೆಲೆಯಾಗಲಿ... ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ನನ್ನ ಜೀವನದ ಪ್ರತಿಯೊಂದು ಹೆಜ್ಜೆಗೂ ಬೆಂಬಲವಾಗಿ ನಿಂತವರು ನೀವು. ನೀವಿಲ್ಲದೆ ನನ್ನ ಬದುಕೇ ಇಲ್ಲ. ಹೊಸ ವರ್ಷದ ಶುಭಾಶಯಗಳು ಅಪ್ಪ, ಅಮ್ಮ...
* ಕಹಿ ನೆನಪುಗಳು ಮನಸ್ಸಿನಿಂದ ದೂರವಾಗಲಿ... ಹೊಸ ಆಲೋಚನೆ, ಯೋಜನೆಗಳು ಚಿಗುರೊಡೆಯಲಿ... ಈ ಇಡೀ ವರ್ಷ ನಿಮ್ಮ ಬದುಕಿನಲ್ಲಿ ಬರೀ ಖುಷಿಯೊಂದೇ ತುಂಬಿರಲಿ... ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಶುಭಾಶಯಗಳು
* 2021 ನಿಮಗೆ ಹೆಚ್ಚು ಸಂತೋಷ, ಆನಂದವನ್ನು ತರಲಿ. ನಿಮ್ಮ ಬದುಕಿನ ಕಷ್ಟಗಳೆಲ್ಲಾ ದೂರವಾಗಲಿ. ನಿಮ್ಮ ಸಾಧನೆಯ ಪಯಣ ಹಿತಕರವಾಗಿಲಿ. ತಮಗೂ ತಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು
* ಹಳೆಯ ಸೋಲುಗಳ ಕಹಿ ನೆನಪಿಗೆ ವಿದಾಯ ಹೇಳಿ... ಹೊಸ ಭರವಸೆ, ಕನಸು ಮತ್ತು ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆ ಇಡಿ. 2021 ಸದಾ ನಿಮ್ಮ ಬಾಳಿನಲ್ಲಿ ಸಂತೋಷದ ಕಳೆಯನ್ನೇ ತುಂಬಲಿ. ನಿಮಗೆ ಹೊಸ ವರ್ಷದ ಶುಭಾಶಯಗಳು
Share your comments