ಕಳೆದ ವಾರ ಬಿಡುವು ನೀಡಿದ್ದ ಮುಂಗಾರು ಮಳೆ ಮತ್ತೆ ಚುರುಕುಗೊಳ್ಳುವ ಸಾಧ್ಯತೆಯಿದೆ. ಪಂಜಾಬ್, ರಾಜಸ್ಥಾನ, ತಮಿಳುನಾಡು, ಪುದಚೆರಿ, ಬಿಹಾರ, ಪಶ್ಚಿಮಬಂಗಾಳ ,ಕರ್ನಾಟಕದ ಕರಾವಳಿ ದಕ್ಷಿಣ ಮತ್ತು ಒಳನಾಡು ಪ್ರದೇಶಗಳಲ್ಲಿ ಮಂಗಳಾವಾರ ಭಾರಿಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ತಿಂಗಳು ಸುರಿದ ಮಳೆಯಿದಾಗಿ ಅಸ್ಸಾಂ, ಬಿಹಾರ, ಕರ್ನಾಟಕ ಸೇರಿದಂತೆ ವಿವಿಧೆಡೆ ಪ್ರವಾಹದ ಆತಂಕ ಸೃಷ್ಟಿಸಿತ್ತು. ಅಸ್ಸಾಂನಲ್ಲಿ ಭೀಕರ ಪ್ರವಾಹ ಬಂದು ಅಪಾರ ಪ್ರಮಾಣ ಆಸ್ತಿ,ಪಾಸ್ತಿ, ಬೆಳೆ ಹಾನಿಯಾಗಿತ್ತು. ಸೆಪ್ಚೆಂಬರ್ ತಿಂಗಳ ಮೊದಲ ದಿನದಿಂದಲೇ ಮತ್ತೆಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗಲಿದೆ.ಇನ್ನೂ ಕೆಲವು ರಾಜ್ಯಗಳಲ್ಲಿ ಸೆ.4 ರವರೆಗೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಸುರಿದ ಭಾರಿ ಮಳೆಗೆ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಹಲವು ಗ್ರಾಮಗಳು ಜಲಾವೃತ್ತವಾಗಿವೆ. ಗುಜರಾತಿನ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಗಳಲ್ಲಿ ಗಂಗಾನದಿಯತೀರದಲ್ಲಿ ಮಣ್ಣಿನ ಸವೆತದಿಂದಾಗಿ 50ಕ್ಕೂ ಹೆಚ್ಚು ಮನೆಗಳು ಕೊಚ್ಚಿಕೊಂಡು ಹೋಗಿವೆ.
Share your comments