1. ಸುದ್ದಿಗಳು

ಇನ್ನೆರಡು ದಿನಗಳಲ್ಲಿ ದೆಹೆಲಿಯಲ್ಲಿ ಭಾರೀ ಮಳೆ ಸಾಧ್ಯತೆ

Mansoon

ರಾಷ್ಟ್ರದ ರಾಜಧಾನಿ ದಿಲ್ಲಿಗೆ ಎರಡು-ಮೂರು ದಿನಗಳಲ್ಲಿ ನೈಋತ್ಯ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದೆಹಲಿಯಲ್ಲಿ ಸತತ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಮುಂಗಾರು ಚುರುಕಾಗಿರುವುದರಿಂದ ಮೋಡ ಕವಿದ ವಾತಾವರಣ ಹಾಗೂ ನಿರಂತರ ಮಳೆ ಸಾಮಾನ್ಯವಾಗಿರಲಿದೆ.

ನೈಋುತ್ಯ ಮುಂಗಾರು ದೇಶದ ಉತ್ತರದ ಭಾಗಗಳನ್ನು ಆವರಿಸುವ ಮೂಲಕ ದೇಶವನ್ನು ಸಂಪೂರ್ಣವಾಗಿ ವ್ಯಾಪಿಸಿದೆ. ಸುಮಾರು ಏಳು ವರ್ಷಗಳ ಬಳಿಕ ನೈರುತ್ಯ ಮುಂಗಾರು ಮಾರುತ ಇದೇ ಮೊದಲ ಬಾರಿಗೆ ವಾಡಿಕೆಗಿಂತ ಎರಡು ವಾರಗಳ ಮೊದಲೇ ಇಡೀ ದೇಶಾದ್ಯಂತ ವ್ಯಾಪಿಸಿದೆ. ರಾಜಸ್ಥಾನ, ಹರಿಯಾಣ, ಪಂಜಾಬಗೂ ಶುಕ್ರವಾರದ ವೇಳೆಗೆ ನೈರುತ್ಯ ಮುಂಗಾರು ವಿಸ್ತರಿಸಿದೆ.  ಜೂ27 ರಂದು ಕೇರಳ ಉತ್ತರಾಖಂಡ, ಜಮ್ಮು- ಕಾಶ್ಮೀರ, ಲಡಾಖ್‌ ಮತ್ತಿತರ ಪ್ರದೇಶಗಳನ್ನು ಕೂಡ ಸದ್ಯವೇ ಮುಂಗಾರು ಪ್ರವೇಶಿಸಲಿದೆ. ಇದರೊಂದಿಗೆ ಇಡೀ ದೇಶಾದ್ಯಂತ ಮುಂಗಾರು ಆವರಿಸಿದಂತಾಗಿದೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಮುಂಗಾರು ಚಲನೆಗೆ ವೇಗ ನೀಡಿದೆ ಎಂದು ಇಲಾಖೆ ತಿಳಿಸಿದೆ.

Published On: 27 June 2020, 12:28 PM English Summary: Heavy rains are likely in Delhi in the next two days

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.