ರಾಜ್ಯದಲ್ಲಿ ಈಚೆಗೆ ಅಲ್ಪ ಪ್ರಮಾಣದಲ್ಲಿ ಟೊಮೇಟೊ (Tomato Price) ಬೆಲೆ ಇಳಿಕೆ ಆಗಿತ್ತು. ಇದೀಗ ಕಳೆದ 10 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು,
ಟೊಮೇಟೊ ಬೆಲೆ ಮತ್ತಷ್ಟು ಹೆಚ್ಚಳವಾಗುವ ಮುನ್ಸೂಚನೆ ಸಿಕ್ಕಿದೆ.
ಟೊಮೇಟೊವು ಒಂದು ಕೆ.ಜಿ 100ರಿಂದ 130ರ ವರೆಗೆ ತಲುಪಿದ ನಂತರ ಕಳೆದ ಕೆಲವು ದಿನಗಳಿಂದ ಟೊಮೇಟೊ ಬೆಲೆಯಲ್ಲಿ ಇಳಿಕೆ ಆಗಿತ್ತು.
ಇದೀಗ ಟೊಮೆಟೊ ಬೆಲೆ ಮತ್ತೆ ಗಗನಮುಖಿ ಆಗುವ ಲಕ್ಷಣಗಳು ಗೋಚರಿಸಿವೆ.
ಏಪ್ರಿಲ್ ಹಾಗೂ ಮೇನಲ್ಲಿ ಸುಡುವ ಬೇಸಿಗೆಯಿಂದಾಗಿ ಬೆಳೆ ಹಾನಿಯಾಗಿತ್ತು.
ಆದರೆ, ಇದೀಗ ತದ್ಧಿರುದ್ಧವಾಗಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಹೀಗಾಗಿ, ಟೊಮೇಟೊ ಉತ್ಪಾದನೆಯ ಮೇಲೂ ಭಾರೀ ಪ್ರಭಾವ ಬೀರುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಖಾರಿಫ್ ಬೆಳೆಯ ಬಿತ್ತನೆ ಕಾರ್ಯವು ಪ್ರಾರಂಭವಾಗುತ್ತದೆ.
ಇದರಿಂದಾಗಿ ಆಗಸ್ಟ್ ಮೂರನೇ ವಾರದ ಒಳಗಾಗಿ ಟೊಮೇಟೊ ಬೆಳೆಯು ಮಾರುಕಟ್ಟೆಗೆ ಬರಲಿದೆ ಎಂದು ಅಂದಾಜಿಸಲಾಗಿದೆ.
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ರಾಜ್ಯದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಾದ್ಯಂತ
ಅಂದಾಜು ಶೇ 70ರಷ್ಟು ಟೊಮೇಟೊ ಬೆಳೆಗೆ ಹಾನಿಯಾಗಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಅತಿಯಾದ ಬಿಸಿಲು ಮತ್ತು ಮಳೆ ಮತ್ತು ಕೀಟಗಳಿಂದ ಅಪಾರ ನಷ್ಟ ಎದುರಿಸಿದ್ದಾರೆ.
ರಾಜ್ಯದಲ್ಲಿ 81,000 ಹೆಕ್ಟೇರ್ ಪ್ರದೇಶದಲ್ಲಿ ಟೊಟೇಟೊ ಬೆಳೆಯನ್ನು ಬೆಳೆಯಲಾಗುತ್ತದೆ.
ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ.
ಇನ್ನು ಕೋಲಾರ ಜಿಲ್ಲೆಯಲ್ಲಿ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೇಟೊ ಭಿತ್ತನೆ ಮಾಡಲಾಗಿದ್ದು,
ಇನ್ನು ಕೆಲವೇ ದಿನಗಳಲ್ಲಿ ಫಸಲು ಕೊಯ್ಲಿಗೆ ಬರುವ ಸಾಧ್ಯತೆ ಇದೆ.
25 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಉತ್ತಮ ವಾತಾವರಣವಿದೆ.
ಆದರೆ ಕಳೆದ 10 ದಿನಕ್ಕೂ ಹೆಚ್ಚು ಅವಧಿಯಿಂದ ಮಳೆಯಿಂದ ಬೆಳೆ ಹಾನಿ ಆಗುತ್ತಿದೆ.
ಖಾರಿಫ್ ಬಿತ್ತನೆ ಜೂನ್ ಎರಡನೇ ವಾರದಲ್ಲಿ ಕೊನೆಯಾಗಿದೆ ಹಾಗೂ ಆಗಸ್ಟ್ ಎರಡು ಇಲ್ಲವೇ
ಮೂರನೇ ವಾರದಲ್ಲಿ ಟೊಮೇಟೊ ಕೊಯ್ಲಿಗೆ ಬರಲಿದೆ.
ಇದರಿಂದ ಬೆಲೆಯಿಂದ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗುವ ಸಾಧ್ಯತೆಯೂ ಇದೆ.
Share your comments