ಹಿರಿಯ ವಿಜ್ಞಾನಿ ಹಿಮಾಂಶು ಪಾಠಕ್ ( Himanshu Pathak ) ಅವರನ್ನು ಗುರುವಾರ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ (DARE, Secretary) ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (Indian Council of Agriculture Research) ಪ್ರಧಾನ ನಿರ್ದೇಶಕರಾಗಿ (DG) ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಿದೆ.
ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಪಾಠಕ್ ಅವರನ್ನು ಕಾರ್ಯದರ್ಶಿ, ಡೇರ್-ಕಮ್-ಡಿಜಿ , ಐಸಿಎಆರ್ ಆಗಿ ನೇಮಕ ಮಾಡಲು ಅನುಮೋದಿಸಿದೆ. ಅವರು ಹುದ್ದೆಯ ಪ್ರಭಾರವನ್ನು ವಹಿಸಿಕೊಂಡ ದಿನಾಂಕದಿಂದ 60 ವರ್ಷ ವಯಸ್ಸಿನವರೆಗೆ ಜಾರಿಗೆ ಬರುವಂತೆ ಆದೇಶದಲ್ಲಿ ತಿಳಿಸಲಾಗಿದೆ.
Dr. Himanshu Pathak, Congratulations 💐🌹🌷💐 for your new responsibilities and wish you success as Secretary- DARE- cum- DG, ICAR).@icarindia, @nstomar, @PRupala, @KailashBaytu, @narendramodi, @PMOIndia @ShobhaBJP @AgriGoI @PIB_India @mygovindia @drsanjeevbalyan @kjkrishimedia pic.twitter.com/NVaK1Zu1pq
— M C Dominic (@dominickrishi) July 28, 2022
ಹಿಮಾಂಶು ಪಾಠಕ್ ಪ್ರಸ್ತುತ ICAR-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಬಿಯೋಟಿಕ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್, ಬಾರಾಮತಿ , ಮಹಾರಾಷ್ಟ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ (DARE) ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR), ಮೀನುಗಾರಿಕೆ ತೋಟಗಾರಿಕೆ, ಮತ್ತು ಕೃಷಿ ಸೇರಿದಂತೆ ಕೃಷಿಯಲ್ಲಿ ಸಂಶೋಧನೆ ಮತ್ತು ಶಿಕ್ಷಣವನ್ನು, ಮಾರ್ಗದರ್ಶನ ಮತ್ತು ಮಾಹಿತಿಯನ್ನು ನೀಡಡುವ ಜವಾಬ್ದಾರಿಯನ್ನು ಹೊಂದಿದೆ.
ಹಾಗೂ ದೇಶಾದ್ಯಂತ ಪ್ರಾಣಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ನಿರ್ವಹಣೆಯ ಉನ್ನತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
Share your comments