1. ಸುದ್ದಿಗಳು

ಮನೆಯಲ್ಲಿಯೇ ಕುಳಿತು ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಈ ರೀತಿ ಅಪ್ಡೇಟ್ ಮಾಡಿ

Adharcard

ಇತ್ತೀಚೆಗೆ ಪ್ರತಿಯೊಂದು ಕೆಲಸಕ್ಕೂ ಆಧಾರ್ ಪ್ರಮುಖ ದಾಖಲೆಯಾಗಿದೆ. ಬ್ಯಾಂಕಿಂಗ್ ಕೆಲಸವಾಗಲಿ, ಚುನಾವಣೆಯಲ್ಲಾಗಲು, ಸಾಲ ಪಡೆಯುವುದಕ್ಕಾಗಿಯಾಗಲಿ, ಶಾಲಾ ದಾಖಲಾತಿ, ಸ್ಕಾಲರ್ ಶಿಪ್ ಹೀಗೆ ಹತ್ತು ಹಲವಾರು ಕೆಲಸಗಳಿಗೆ ಆಧಾರ್ ಅಗತ್ಯವಿದೆ.

ಆಧಾರ್ ನಲ್ಲಿನ ಮಾಹಿತಿ ವಿವರಗಳನ್ನು ಅಪ್ಡೇಟ್ ಮಾಡದಿದ್ದರೆ ಸರ್ಕಾರದ ಪ್ರಯೋಜನಗಳನ್ನು ಪಡೆಯೋದು ಕಷ್ಟವಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಬೇಕಾದರೆ ನೀವು ಪೋಸ್ಟಾಫೀಸಿಗೆ ಅಥವಾ ಬ್ಯಾಂಕುಗಳಿಗೆ ಹೋಗಲೇಬೇಕಾಗಿತ್ತು. ಮತ್ತು ಅವರು ಯಾವಾಗ ಕೆಲಸ ಮಾಡುತ್ತಾರೋ ಅವಾಗ ನೀವು ಹೋಗಬೇಕಾಗಿತ್ತು,  ಆದರೆ ಈಗ ಮನೆಯಲ್ಲಿಯೇ ಕುಳಿತು ಅಪ್ ಡೆಟ್ ಮಾಡಬಹುದು.

ನಿಮ್ಮ ಆಧಾರ್‌ನಲ್ಲಿ ತಪ್ಪು ಸಂಖ್ಯೆ ಅಥವಾ ಹಳೆಯ ಸಂಖ್ಯೆ ಲಿಂಕ್ ಆಗಿದ್ದರೆ ನಿಮಗೆ ಯಾವುದೇ ಅಪ್ಡೇಟ್  ಸಿಗುವುದಿಲ್ಲ. ಆದ್ದರಿಂದ ಇಂದು ನೀವು ನಿಮ್ಮ ಆಧಾರ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಸುಲಭ ಮಾರ್ಗ ಇಲ್ಲಿದೆ.

https://ask.uidai.gov.in/. ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಫೋನ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಿಮ್ಮ ಮುಂದೆ ತೆರೆದ ಪುಟದಲ್ಲಿ ಭರ್ತಿ ಮಾಡಬೇಕು. ಇದರ ನಂತರ ನಿಮ್ಮ ಫೋನ್ ಸಂಖ್ಯೆಯಲ್ಲಿ OTP ಕಳುಹಿಸಿ ಮತ್ತು OTP ಗಾಗಿ ಮುಂದುವರಿಯಿರಿ ಬಟನ್ ಕ್ಲಿಕ್ ಮಾಡಬೇಕು. ನಿಮ್ಮ ಫೋನ್‌ನಲ್ಲಿ ಬಂದ ಒಟಿಪಿಯನ್ನು ಬಲಭಾಗದಲ್ಲಿರುವ ಪೆಟ್ಟಿಗೆಯಲ್ಲಿ ಸಲ್ಲಿಸಬೇಕು.

ನಿಮ್ಮ ಮುಂದೆ ತೆರೆದಿರುವ ಹೊಸ ಪುಟದಲ್ಲಿ ಆಧಾರ್ ಸೇವೆಯನ್ನು ಬರೆಯಲಾಗುತ್ತದೆ. ಅಪ್‌ಡೇಟ್ ಆಧಾರ್ ಆಯ್ಕೆಯನ್ನು ಇಲ್ಲಿ ಕ್ಲಿಕ್ ಮಾಡಬೇಕು.  ನೊಂದಣಿ ಮಾಡಿಕೊಂಡಿರುವ ಮೊಬೈಲ್ ಐಡಿ ಕಡ್ಡಾಯವಾಗಿದೆ. ಅಥವಾ ಮೊಬೈಲ್ ನಂಬರ್ ಏತಕ್ಕೆ ಅಂದರೆ ನಿಮ್ಮ ಅಪ್ಡೇಟ್ ಮಾಡುವ ಸಮಯದಲ್ಲಿ ಓಟಿಪಿ ನಿಮ್ಮ ನಂಬರ್ ಗೆ ಬರಲಿದೆ.

ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು :

ಇದಲ್ಲದೆ ನಿಮಗೆ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ನೀವು ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡಬಹುದು. ಇದರೊಂದಿಗೆ ನೀವು help@uidai.gov.in ನಲ್ಲಿಯೂ ಇಮೇಲ್ ಮಾಡಬಹುದು.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ

Published On: 27 December 2020, 06:51 PM English Summary: How to change your mobile number in aadharcard

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.