1. ಸುದ್ದಿಗಳು

ರಾಜ್ಯದಲ್ಲಿ ಮಾನವ- ಪ್ರಾಣಿ ಸಂಘರ್ಷ ಹೆಚ್ಚಳ: ಅಧಿಕಾರಿಗಳ ವರ್ಗಾವಣೆ

Hitesh
Hitesh
Increase in human-animal conflict in state: Transfer of officials

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯಜೀವಿ– ಮಾನವ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ.  

ಸಿಹಿಸುದ್ದಿ: ಪಡಿತರ ಚೀಟಿ 5 ಕೆ.ಜಿ ಬದಲಿಗೆ 6 ಕೆ.ಜಿ ಅಕ್ಕಿ ವಿತರಣೆ!

ಕೆಲವು ಅಧಿಕಾರಿಗಳು ಅರಣ್ಯ ಪ್ರದೇಶಕ್ಕೆ ಭೇಟಿ ನೀಡುತ್ತಿಲ್ಲ ನಗರಗಳಲ್ಲೇ ನೆಲೆಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿತ್ತು. ಮಾನವ ಮತ್ತು ಪ್ರಾಣಿ ಸಂಘರ್ಷಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಿಂದ ಆಕ್ರೋಶವೂ ವ್ಯಕ್ತವಾಗಿತ್ತು. ಹೀಗಾಗಿ, 9 ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಹಾಗೂ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಹುದ್ದೆಗಳನ್ನು ವರ್ಗಾಯಿ ಸರ್ಕಾರ ಆದೇಶ ಮಾಡಿದೆ.  

Weather Update: ರಾಜ್ಯದಲ್ಲಿ ಹೆಚ್ಚಾದ ಚಳಿ ವಾತಾವರಣ   

ಜನವಸತಿ ಪ್ರದೇಶಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಹತ್ತು ದಿನಗಳಲ್ಲೇ ರಾಜ್ಯದಲ್ಲಿ ಎಂಟು ಆನೆಗಳನ್ನು ಸೆರೆ ಹಿಡಿಯಲಾಗಿದೆ. ಚಿರತೆ ದಾಳಿಯಿಂದ ಹಲವರು ಮೃತಪಟ್ಟಿರುವುದು ಸಹ ವರದಿ ಆಗಿದೆ. ಆನೆ ಹಿಂಡಿನಿಂದ ಬೆಳೆಹಾನಿ ಆಗುತ್ತಿರುವ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿತ್ತು.

Pm Kisan| ಪಿ.ಎಂ ಕಿಸಾನ್‌ ಅಪ್ಡೇಟ್‌: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ  

ಹಿರಿಯ ಅರಣ್ಯಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಚೇರಿ ಬಿಟ್ಟು ಕಾಡಿಗೆ ತೆರಳುವಂತೆ ನಿರ್ದೇಶನ ನೀಡಿದ್ದರು. ಇನ್ನು ಪಿಸಿಸಿಎಫ್ ಹಾಗೂ ಎಪಿಸಿಸಿಎಫ್ ಹುದ್ದೆಗಳನ್ನು ಕಚೇರಿ ಮತ್ತು ಸಿಬ್ಬಂದಿ ಸಮೇತ ಶಿವಮೊಗ್ಗ, ಚಿತ್ರದುರ್ಗ, ಹಾಸನ, ಮೈಸೂರು, ಮಡಿಕೇರಿ, ಧಾರವಾಡ ಸೇರಿ ರಾಜ್ಯದ ವಿವಿಧ ಭಾಗಗಳಿಗೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಲಾಗಿದೆ.

Siddaramaiah| ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ಹಿಂಪಯಲು ಸಿದ್ದರಾಮಯ್ಯ ಆಗ್ರಹ | Apmc  

Increase in human-animal conflict in state: Transfer of officials

ಇನ್ನು ಆಡಳಿತಾತ್ಮಕ ಕಾರಣಗಳಿಂದ ಈ ಹುದ್ದೆಗಳನ್ನು ವರ್ಗಾಯಿಸಿ ಅರಣ್ಯ, ಜೀವಿಸ್ಥಿತಿ ಮತ್ತು ಪರಿಸರ ಇಲಾಖೆಯ ಜಂಟಿ ಕಾರ್ಯದರ್ಶಿ ಆರ್. ಇಂದ್ರೇಶ್  ಆದೇಶ ಮಾಡಿದ್ದಾರೆ. ಅರಣ್ಯ ಹಾಗೂ ಕಂದಾಯ ಭೂಮಿಯ
ವ್ಯಾಜ್ಯಗಳು, ಒತ್ತುವರಿಗೆ ಸಂಬಂಧಿಸಿದ ಹೆಚ್ಚಿನ ಸಂಗತಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಹೀಗಾಗಿ ಎಪಿಸಿಸಿಎಫ್ ನೇತೃತ್ವದ ಅರಣ್ಯ ಭೂ ದಾಖಲೆಗಳ ಕಚೇರಿ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡಿದೆ. ಜಿಲ್ಲೆಯ ಜನ ದಾಖಲೆಗಳನ್ನು ಅರಸಿ ಬೆಂಗಳೂರಿಗೆ ಹೋಗುವುದು ತಪ್ಪಲಿದೆ ಎನ್ನಲಾಗಿದೆ.   

  • ಸ್ಥಳಾಂತರಗೊಂಡ ಕಚೇರಿಗಳ ವಿವರ
  •  ಎಪಿಸಿಸಿಎಫ್– ಅರಣ್ಯ ಭೂ ದಾಖಲೆಗಳು– ಶಿವಮೊಗ್ಗ
  •  ಎಪಿಸಿಸಿಎಫ್– ಅರಣ್ಯ ಕಾನೂನು ಕೋಶ– ಚಿತ್ರದುರ್ಗ
  •   ಎಪಿಸಿಸಿಎಫ್ – ಆನೆ ಯೋಜನೆ– ಹಾಸನ
  •  ಎಪಿಸಿಸಿಎಫ್ – ಅರಣ್ಯ ಮೌಲ್ಯಮಾಪನ– ಮೈಸೂರು
  •  ಎಪಿಸಿಸಿಎಫ್– ಕಾಂಪಾ ಕಚೇರಿ – ಬಳ್ಳಾರಿ
  •   ಎಪಿಸಿಸಿಎಫ್– ರಾಷ್ಟ್ರೀಯ ಅರಣ್ಯ ಕ್ರಿಯಾ ಯೋಜನೆ ಕಾರ್ಯಕ್ರಮ ಹಾಗೂ ಬಿದಿರು ಯೋಜನೆ– ಧಾರವಾಡ
  •  ಎಪಿಸಿಸಿಎಫ್ – ಸಾಮಾಜಿಕ ಅರಣ್ಯ ಹಾಗೂ ಯೋಜನೆಗಳು– ಧಾರವಾಡ
  •   ಪಿಸಿಸಿಎಫ್ – ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ– ಮಡಿಕೇರಿ
  •   ಪಿಸಿಸಿಎಫ್ – ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ– ಹುಬ್ಬಳ್ಳಿ 
  • ಶ್ರೀಗಂಧದ ಮರ ಕಳವು ತಡೆಗೆ ಸರ್ಕಾರದಿಂದ ಮಾಸ್ಟರ್‌ ಪ್ಲಾನ್‌! 
Published On: 04 January 2023, 02:44 PM English Summary: Increase in human-animal conflict in state: Transfer of officials

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.