1. ಸುದ್ದಿಗಳು

Indian Railways: ಭಾರತೀಯ ರೈಲ್ವೆ: ರೈಲು ಅಪಘಾತದಲ್ಲಿ ಸಾವಿರಾರು ಜಾನುವಾರು ಸಾವು!

Hitesh
Hitesh
Indian Railways: Thousands of cattle died in a train accident!

 ಭಾರತದಲ್ಲಿ ರೈಲು ಅವಘಡಗಳು ಸಂಭವಿಸುವುದು ಹಾಗೂ ಅಪಘಾತಗಳು ಸಂಭವಿಸಿ, ಜನರು ಹಾಗೂ ಜಾನುವಾರುಗಳು ಗಾಯಗೊಳ್ಳುವುದು ಮತ್ತು ಮೃತಪಡುವುದು ವರದಿ ಆಗುತ್ತಲೇ ಇರುತ್ತದೆ.

ಕೇಂದ್ರ ಸರ್ಕಾರ ಇದೀಗ ಬಿಡುಗಡೆ ಮಾಡಿರುವ ಅಂಕಿ- ಅಂಶವೊಂದು ಅಘಾತಕಾರಿ ವಿಷಯವೊಂದನ್ನು ಹೇಳಿದೆ.

ಹೌದು ಈ ಅಂಕಿ- ಅಂಶಗಳ ಪ್ರಕಾರ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಜಾನುವಾರುಗಳು ರೈಲು ಅಪಘಾತದಲ್ಲಿ ಸಾವನ್ನಪ್ಪುತ್ತಿರುವುದು ವರದಿ ಆಗಿದೆ.  

2022ರ ಒಂದೇ ಸಾಲಿನಲ್ಲಿ ಬರೋಬ್ಬರಿ 13,000 ಸಾವಿರ ಜಾನುವಾರುಗಳು ರೈಲು ಅಪಘಾತಕ್ಕೀಡಾಗಿವೆ!

ಭಾರತದಲ್ಲಿ ಈ ಹಿಂದೆಯಿಂದಲೂ ರೈಲು ಅಪಘಾತಗಳಿಂದ ಜಾನುವಾರುಗಳು ಸಾವನ್ನಪ್ಪುತ್ತಲೇ ಇವೆ.

ಆದರೆ,ಇತ್ತೀಚಿನ ದಿನಗಳಲ್ಲಿ ಈ ರೀತಿ ಜಾನುವಾರುಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿವೆ.     

ಇದರಲ್ಲಿ ಇನ್ನೂ ಗಮನಿಸಬಹುದಾದ ಮತ್ತೊಂದು ಅಂಶವೆಂದರೆ, ಈಚೆಗೆ ಭಾರತದಲ್ಲಿ ಹೊಸ ರೈಲು ಸೇವೆಗಳನ್ನು

ಪ್ರಾರಂಭಿಸಿದ ಬೆನ್ನಲ್ಲೇ ರೈಲು ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ಹೊಸ ರೈಲುಗಳನ್ನು ಪ್ರಾರಂಭಿಸುತ್ತಿದ್ದಂತೆ ಕಳೆದ ಕೆಲವು ವರ್ಷಗಳಿಂದ ಜಾನುವಾರುಗಳು ಮೃತಪಡುವುದನ್ನು

ಮಾಧ್ಯಮಗಳು ವರದಿ ಮಾಡುವ ಪ್ರಮಾಣವೂ ಹೆಚ್ಚಳವಾಗಿರುವುದನ್ನು ನೀವು ನೋಡಿಯೇ ಇರುತ್ತೀರಿ.        

ಸರ್ಕಾರ ಬಿಡುಗಡೆ ಮಾಡಿರುವ ಪ್ರಕಾರ, 2022ರ ಒಂದೇ ಸಾಲಿನಲ್ಲಿ ಬರೋಬ್ಬರಿ 13,000 ಸಾವಿರ ಜಾನುವಾರುಗಳು ರೈಲು ಅಪಘಾತಕ್ಕೀಡಾಗಿವೆ.

ಈ ಪ್ರಮಾಣವು ಕಳೆದ ವರ್ಷಗಳಿಗೆ ಹೋಲಿಕೆ ಮಾಡಿ ನೋಡಿದರೆ, ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ವರದಿ ಆಗಿದೆ.

ಕಳೆದ ಮೂರು ವರ್ಷದಲ್ಲಿ ಅಂದರೆ, 2019ನೇ ಸಾಲಿನಿಂದ ನೋಡುವುದಾದರೆ, ಶೇ 24 ಪ್ರತಿಶತ ಹೆಚ್ಚು ಅಪಘಾತ ಪ್ರಕರಣಗಳು ವರದಿ ಆಗಿವೆ. 

ಭಾರತದಲ್ಲಿ ಸಾವಿರಾರು ರೈತರು ಜಾನುವಾರುಗಳನ್ನು ರೈಲ್ವೇ ಹಳಿಗಳ ಪಕ್ಕದಲ್ಲಿರುವ ಹುಲ್ಲಿನ ಮೇಲೆ ಮೇಯಲು ಕರೆದುಕೊಂಡು ಹೋಗುತ್ತಾರೆ.

ಅನೇಕ ಜಾನುವಾರು ಮಾಲೀಕರು ಹಳ್ಳಿಗಳಲ್ಲಿ ವಾಸಿಸುತ್ತಾರೆ ಅಥವಾ ತಮ್ಮ ಜಾನುವಾರುಗಳನ್ನು ರೈಲ್ವೆ ಹಳಿಗಳಿಗೆ ಅಡ್ಡಲಾಗಿ

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತ್ವರಿತವಾಗಿ ಹೋಗಲು ಬಳಸುವುದು ಸಹ ವಾಡಿಕೆಯಾಗಿದೆ.

ಇನ್ನೂ ರೈಲ್ವೆ ಹಳಿಗಳ ಮೇಲೆ ಜಾನುವಾರುಗಳು ಓಡಾಡುವುದನ್ನು ತಪ್ಪಿಸುವ ಉದ್ದೇಶದಿಂದ ಸ್ಥಳೀಯ ಸರ್ಕಾರಗಳು ಸಹ ಭಿನ್ನವಾದ ಕ್ರಮಗಳನ್ನು ಅನುಸರಿಸಿಕೊಂಡೇ ಬರುತ್ತಿವೆ.

ಅವುಗಳಲ್ಲಿ ರೈಲ್ವೆಯು 386 ಮೈಲಿ ಉದ್ದದ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ದನಕರುಗಳನ್ನು ಓಡಿಸುವುದನ್ನು ತಡೆಯಲು

ಲೋಹದ ಕಿರಣದ ಬೇಲಿಯನ್ನು ನಿರ್ಮಿಸಿ ಪ್ರಯೋಗವನ್ನು ಮಾಡಲಾಗಿದೆ. ಇದರಿಂದ ರೈಲುಗಳು ಸುಗಮವಾಗಿ ಚಲಿಸುತ್ತವೆ.

ಆದಾಗ್ಯೂ, ಭಾರತೀಯ ರೈಲ್ವೆಯ ಸರ್ಪಗಾಮಿ ಜಾಲಕ್ಕೆ ಬೇಲಿ ಹಾಕುವುದು ಅಸಾಧ್ಯವೆಂದೇ ಹೇಳಲಾಗಿದೆ.

ರೈಲ್ವೆ ಹಳಿಗಳನ್ನು ಬ್ಯಾರಿಕೇಡ್ ಮಾಡುವುದು ಅಥವಾ ಬೇಲಿ ಹಾಕುವುದು ಸಮಸ್ಯೆಗೆ ಕಾರ್ಯಸಾಧ್ಯವಾದ ಪರಿಹಾರವಲ್ಲ ಮತ್ತು ರೈಲ್ವೇಗೂ ತಿಳಿದಿದೆ.

ಇಂತಹ ಘಟನೆಗಳನ್ನು ನಾವು ನಿಲ್ಲಿಸಬೇಕಾದರೆ, ಪರ್ಯಾಯ ಚಿಂತನೆಯ ಅವಶ್ಯಕತೆ ಇದೆ. 

ಹಳಿಗಳ ಮೇಲೆ ಅತಿಕ್ರಮಣ ಮಾಡುವ ಜಾನುವಾರು ಮಾಲೀಕರ ಮೇಲೆ ಪ್ರಕರಣಗಳನ್ನು ದಾಖಲಿಸುವುದು ಮತ್ತು ದಂಡ ವಿಧಿಸುವುದು ಒಂದು ಆಯ್ಕೆಯಾಗಿದೆ.

ಇದಕ್ಕಾಗಿ ಈಗಾಗಲೇ ಕಾನೂನು ಇದೆ. ಕಾನೂನಿನ ಪ್ರಕಾರ ನಿಯಮ ಉಲ್ಲಂಘಿಸುವವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1,000 ರೂಪಾಯಿಗಳವರೆಗೆ ದಂಡ ವಿಧಿಸಬಹುದಾಗಿದೆ.

ಕೋಟ್ಯಾಂತರ ರೂಪಾಯಿ ವೆಚ್ಚ

ಭಾರತದಲ್ಲಿ ಜಾನುವಾರುಗಳಿಂದ ಅಪಘಾತಗಳು ಸಂಭವಿಸುತ್ತಿದ್ದು, ಈ ಸಂದರ್ಭದಲ್ಲಿ ರೈಲ್ವೆ ಹಳಿಗಳು ಹಾನಿಯಾಗುವ ಅಥವಾ ರೈಲುಗಳಿಗೆ ಹಾನಿಯಾಗುವುದು ಸಹ ಹೆಚ್ಚಾಗಿ ವರದಿ ಆಗುತ್ತಿದೆ.

2022ರಲ್ಲಿ ರೈಲ್ವೆಯ ಎರಡು ಪ್ರಮುಖ ವಲಯಗಳು ಹಳಿಗಳು ಮತ್ತು ರೈಲುಗಳ ರಿಪೇರಿಗಾಗಿ ಬರೋಬ್ಬರಿ 13 ಮಿಲಿಯನ್ ರೂಪಾಯಿ ವೆಚ್ಚ ಮಾಡಿರುವುದು ವರದಿ ಆಗಿದೆ.

ಭಾರತದ ಗುಣಮಟ್ಟದ ರೈಲುಗಳು ಹಾಗೂ ರೈಲು ಹಳಿಗಳಿವೆ. ಆದರೆ, ಹೊಸ ಮಾದರಿಯ ರೈಲುಗಳ ಮುಂಭಾಗವು ಜಾನುವಾರುಗಳನ್ನು ಗುದ್ದಿದಾಗ ಹಾನಿಯಾಗುವ ಸಾಧ್ಯತೆಯೇ ಹೆಚ್ಚು.

ಹೀಗಾಗಿ, ಇದಕ್ಕೆ ವೆಚ್ಚವೂ ಹೆಚ್ಚಾಗಿ ಆಗುತ್ತದೆ. 

ವೆಚ್ಚ, ಜಾನುವಾರುಗಳ ಸಾವು ಒಂದು ಕಡೆಯಾದರೆ, ಈ ರೀತಿ ಅಪಘಾತಗಳಿಂದಾಗಿ ಜನರಿಗೂ ಅಪಾಯವೇ

ಹೀಗಾಗಿ, ಇದಕ್ಕೆ ಸರ್ಕಾರ ಪರ್ಯಾಯ ಪರಿಹಾರವನ್ನು ತುರ್ತಾಗಿ ಕಂಡುಕೊಳ್ಳುವ ಅವಶ್ಯಕತೆ ಇದೆ.   

Published On: 10 April 2023, 11:20 AM English Summary: Indian Railways: Thousands of cattle died in a train accident!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.