1. ಸುದ್ದಿಗಳು

ಭಾರತದ ಸರಕು ಮತ್ತು ಸೇವಾ ರಫ್ತು 750 ಶತಕೋಟಿ ಯುಎಸ್‌ ಡಾಲರ್‌ ಮುಟ್ಟುವ ಸಾಧ್ಯತೆ!

Hitesh
Hitesh
India's export of goods and services is likely to touch 750 billion US dollars!

ಪ್ರಸಕ್ತ ಸಾಲಿನಲ್ಲಿ ರಫ್ತು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಅವರು ಕಳೆದ ವರ್ಷದ ರಪ್ತಿಗಿಂತ ಹೆಚ್ಚಳವಾಗಿದೆ ಎಂದಿದ್ದಾರೆ.

ಅಂಕಿ- ಅಂಶವನ್ನು ಈಗಾಗಲೇ ಫೆಬ್ರವರಿ ತಿಂಗಳಲ್ಲಿ ದಾಟಿದೆ. ಈ ವರ್ಷ ಸರಕು ಮತ್ತು ಸೇವಾ ರಫ್ತು 750 ಶತಕೋಟಿ ಯು.ಎಸ್.‌ ಡಾಲರ್‌ ಅನ್ನು ಮುಟ್ಟುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ದೇಶದಲ್ಲಿ ಸ್ಮಾರ್ಟ್ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಕೇಂದ್ರದಿಂದ ಟಾಸ್ಕ್ ಫೋರ್ಸ್!

ಈಚೆಗೆ ನವದೆಹಲಿಯಲ್ಲಿ ನಡೆದ ರೈಸಿನಾ ಸಂವಾದದ 8ನೇ ಆವೃತ್ತಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ವರ್ಷ ಭಾರತವು ಅತ್ಯಧಿಕ ರಫ್ತು ಅಂಕಿಅಂಶವನ್ನು ಸಾಧಿಸಿದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು, ಇದು ಆಳವಾದ ವಿಶ್ಲೇಷಣೆ ಮತ್ತು ವ್ಯಾಪಕವಾದ ಯೋಜನೆಗಳ ಫಲಿತಾಂಶವಾಗಿದೆ ಎಂದು ಹೇಳಿದರು.

ಭಾರತದ ಸಾಮರ್ಥ್ಯಗಳನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡಲಾಯಿತು, ಹೊಸ ಮಾರುಕಟ್ಟೆಗಳನ್ನು ಹುಡುಕಲಾಯಿತು.

ಜಿಲ್ಲೆಗಳು, ವಿಶೇಷವಾಗಿ ರಫ್ತು ಕೇಂದ್ರಗಳಾಗಲು ಅಧಿಕಾರ ನೀಡಲಾಯಿತು ಮತ್ತು ವಿದೇಶದಲ್ಲಿರುವ ಎಲ್ಲಾ ಭಾರತೀಯ

ಮಿಷನ್‌ ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಾಡಿದ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು.

ರಾಜ್ಯದಲ್ಲಿ ಮೇಲ್ಮೈ ಬಿಸಿಗಾಳಿ ಹವಾಮಾನ ಇಲಾಖೆ ಎಚ್ಚರಿಕೆ 

ಕಳೆದ ವರ್ಷ, ಸರಕು ಮತ್ತು ಸೇವಾ ವ್ಯಾಪಾರವು 650 ಶತಕೋಟಿ ಯು.ಎಸ್.‌ ಡಾಲರ್ ಅನ್ನು ದಾಟಿದೆ ಎಂದು ಸಚಿವರು ತಿಳಿಸಿದರು.

ಕಳೆದ ದಶಕದಲ್ಲಿ ಕೇಂದ್ರ ಸರ್ಕಾರವು ಕೈಗೊಂಡ ಪರಿವರ್ತನಾ ಉಪಕ್ರಮಗಳಾದ ಸ್ವಚ್ಛ ಭಾರತ್ ಮಿಷನ್,

ಗ್ರಾಮೀಣ ಭಾರತದಲ್ಲಿ ಸುಮಾರು 35 ದಶಲಕ್ಷ ಮನೆಗಳ ವಿದ್ಯುದ್ದೀಕರಣ, ದೃಢವಾದ ನಿರಂತರ ವಿದ್ಯುತ್‌ ಪೂರೈಕೆಗಾಗಿ ಪವರ್ ಗ್ರಿಡ್ ರಚನೆ,

ಎಲ್ಲರಿಗೂ ವಸತಿ, 500 ದಶಲಕ್ಷಕ್ಕೂ ಹೆಚ್ಚು ಉಚಿತ ಆರೋಗ್ಯ ಸೇವೆಗಳು ಸಾಂಕ್ರಾಮಿಕ ರೋಗದಿಂದ ಎದುರಾದ

ಸವಾಲುಗಳನ್ನು ಜಯಿಸುವ ಮೂಲಕ ಜನರು ಭಾರತವನ್ನು ಉತ್ತಮ ಸ್ಥಾನದಲ್ಲಿರಿಸಲು ಸಾಧ್ಯವಾಯಿತು ಎಂದಿದ್ದಾರೆ.

ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಸಾಂಕ್ರಾಮಿಕ ರೋಗವನ್ನು ಜಯಿಸಲು ಮಾತ್ರವಲ್ಲದೆ

ಅದು ಒಡ್ಡಿದ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಪ್ರಧಾನಮಂತ್ರಿಯವರು ಆಲೋಚನೆಗಳನ್ನು ನಿರಂತರವಾಗಿ  ಹುಡುಕುತ್ತಿದ್ದರು ಎಂದು ಸಚಿವರು ಹೇಳಿದರು.

ಯುದ್ಧದ ಸಂಘರ್ಷದಿಂದಾಗಿ ಉಂಟಾದ ಜಾಗತಿಕ ಅನಿಶ್ಚಿತತೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಗೋಯಲ್ ಅವರು,

ಈ ಪ್ರಕ್ಷುಬ್ಧ ಸಮಯವು ಭಾರತಕ್ಕೆ ತನ್ನ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಲು ಅವಕಾಶವನ್ನು ನೀಡಿದೆ. ಆಹಾರ ಭದ್ರತೆಯು ಪ್ರಪಂಚದ ಮುಂದೆ ಗಂಭೀರ ಸವಾಲಾಗಿ ಹೊರಹೊಮ್ಮಿದೆ ಎಂದಿದ್ದಾರೆ.

ರಸಗೊಬ್ಬರಗಳ ಸಮರ್ಪಕ ಪೂರೈಕೆಯನ್ನು ಖಾತ್ರಿಪಡಿಸುವ ಮೂಲಕ ಭಾರತದ ಆಹಾರ ಭದ್ರತೆಯನ್ನು ಬಲಪಡಿಸಲು

ಮುಂದಿನ ಯೋಜನೆ ರೂಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೂರದೃಷ್ಟಿ ಹೊಂದಿದ್ದಾರೆ ಎಂದು ಹೇಳಿದರು.

ನಂದಿನಿ ಉತ್ಪನ್ನದ ಮೇಲೆ ಹಿಂದಿ ಹೆಸರು, ಸಾಮಾಜಿಕ ಮಾಧ್ಯಮದಲ್ಲಿ ವಿರೋಧ

ರಸಗೊಬ್ಬರದ ಬೆಲೆಗಳು ಗಗನಕ್ಕೇರಿದ ಸಮಯದ ಕುರಿತು ಮಾತನಾಡಿದ ಸಚಿವ ಗೋಯಲ್ ಅವರು,

ಕೇಂದ್ರ ಸರ್ಕಾರವು  ಹೆಚ್ಚಿದ ಬೆಲೆಗಳ ಹೊರೆಯನ್ನು ತಾನು ತೆಗೆದುಕೊಳ್ಳುವ ಮೂಲಕ ರೈತರು,

ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಬೆಲೆ ಏರಿಕೆಯಿಂದ ಹಾನಿಯಾಗದಂತೆ ಎಚ್ಚರ ವಹಿಸಲಾಗಿದೆ.  

ಭಾರತಕ್ಕೆ ಹೂಡಿಕೆಯನ್ನು ಆಕರ್ಷಿಸಲು ಅನುವು ಮಾಡಿಕೊಡುವ ವಾತಾವರಣವನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿದೆ.

ಭಾರತವು 1.4 ಶತಕೋಟಿ ಜನಸಂಖ್ಯೆಯ ರಾಷ್ಟ್ರವಾಗಿದೆ, ದೇಶವು ಅತ್ಯುತ್ತಮ ಕೌಶಲ್ಯಗಳು, ನಿರ್ವಹಣಾ ಕೌಶಲ್ಯಗಳು ಸೇರಿದಂತೆ

ಅಪಾರ ಯುವ ಜನಸಂಖ್ಯೆಯನ್ನು ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿದೆ.

ಸರ್ಕಾರವು ಜನರ ಜೀವನದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ.

ಜೀವನದ ದೈನಂದಿನ ಮೂಲಭೂತ ಸೌಕರ್ಯಗಳನ್ನು ಪಡೆಯಲು ಮಾಡುತ್ತಿದ್ದ ಹೋರಾಟದಿಂದ ಜನರನ್ನು ಪ್ರಧಾನಮಂತ್ರಿ ಅವರು ಮುಕ್ತಗೊಳಿಸಿದರು,

ಆ ಮೂಲಕ ಜೀವನದಲ್ಲಿ ಉತ್ತಮವಾದ ವಿಷಯಗಳನ್ನು ಆಶಿಸಲು ಅವರನ್ನು ಸಶಕ್ತಗೊಳಿಸಿದರು ಎಂದು ಸಚಿವರು ಹೇಳಿದರು.

ಈ ವರ್ಧಿತ ಮಹತ್ವಾಕಾಂಕ್ಷೆ ಮಟ್ಟಗಳು, ಹೂಡಿಕೆದಾರರಿಗೆ ಬೃಹತ್ ಮಾರುಕಟ್ಟೆ ಅವಕಾಶವನ್ನು ಕೂಡಾ ಒದಗಿಸಿದೆ.

ಜನರು ಹೆಚ್ಚು ಶ್ರಮಿಸಬೇಕು ಮತ್ತು ಭಾರತದ ಬೆಳವಣಿಗೆಯ ಕಥೆಗೆ ಹೆಚ್ಚಿನ ಕೊಡುಗೆ ನೀಡಬೇಕು

ಎಂಬ ಇಚ್ಛೆಯಿಂದಾಗಿ ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕ ಅಂಚನ್ನು ತೀಕ್ಷ್ಣಗೊಂಡಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ವ್ಯವಹಾರವನ್ನು ಸುಲಭಗೊಳಿಸುವುದು, ಅನುಸರಣೆ ಹೊರೆಯನ್ನು ಕಡಿಮೆ ಮಾಡುವುದು, ಅನುಪಯುಕ್ತ ಕಾನೂನುಗಳನ್ನು ನಿರುಪಯುಕ್ತಗೊಳಿಸುವುದು,

ನಿರ್ಣಾಯಕ ವಲಯಗಳಲ್ಲಿ ಪಿ.ಎಲ್.ಐ ಯೋಜನೆಯನ್ನು ಜಾರಿಗೊಳಿಸುವುದು, ಸ್ಟಾರ್ಟ್ಅಪ್ ಗಳನ್ನು ಉತ್ತೇಜಿಸುವ ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸುವುದು,

ಮುಂತಾದ ಸಕಾರಾತ್ಮಕ ಕ್ರಮಗಳಿಂದಾಗಿ, ಜಗತ್ತು ಭಾರತದಂತಹ ಉತ್ತಮ ಇನ್ನೊಂದು ಸ್ನೇಹಿತ ಮತ್ತು ವಿಶ್ವಾಸಾರ್ಹ ಪಾಲುದಾರನನ್ನು ಖಂಡಿತಾ ಪಡೆಯುವುದಿಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಕಾಫಿ, ತಿಂಡಿಗೆ 200 ಕೋಟಿ ರೂಪಾಯಿ ಖರ್ಚು, ಏನಿದು ಚರ್ಚೆ ?

ಗುಣಮಟ್ಟ ನಿಯಂತ್ರಿತ ಆದೇಶ(ಕ್ವಾಲಿಟಿ ಕಂಟ್ರೋಲ್ ಆರ್ಡರ್ಸ್ – ಕ್ಯೂ.ಸಿ.ಒ.) ನಂತಹ ವಿವಿಧ ಉಪಕ್ರಮಗಳ ಮೂಲಕ ಗುಣಮಟ್ಟದ ಪ್ರಜ್ಞೆಯನ್ನು ಮೂಡಿಸಲು ಕೇಂದ್ರ ಸರ್ಕಾರವು ವ್ಯಾಪಕವಾಗಿ ಗಮನ ಕೇಂದ್ರೀಕರಿಸುತ್ತಿದೆ.

ಈಗಾಗಲೇ ಕ್ಯೂ.ಸಿ.ಒ.ಗಳ ಮಾನದಂಡದ ಸಂಖ್ಯೆಯು ನಾಲ್ಕು ಪಟ್ಟು ಹೆಚ್ಚು ಬೆಳೆದಿದೆ ಮತ್ತು ಈಗ ಸುಮಾರು 440 ಉತ್ಪನ್ನಗಳಷ್ಟಿದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಇದು 2000 ವರೆಗೆ ಬೆಳೆಯುತ್ತದೆ ಎಂದು ಸಚಿವರು ಗುಣಮಟ್ಟದ ಉತ್ಪಾದನೆ ಕುರಿತು ಪ್ರಸ್ತಾಪಿಸಿದರು.

ಭಾರತದ ಗುಣಮಟ್ಟದ ಉತ್ಪನ್ನಗಳ ಸುಸ್ಥಿರತೆಯ ಕುರಿತು ಮಾತನಾಡಿದ ಸಚಿವರು 'ಶೂನ್ಯ ದೋಷ, ಶೂನ್ಯ ಪರಿಣಾಮ' ಗುರಿ

ಸಾಧಿಸುವ ಭಾರತದ ಆಶಯವನ್ನು ಸಾಧಿಸಲು ಇಂತಹ ಪ್ರಕ್ರಿಯೆಗಳು ಸಹಾಯ ಮಾಡುತ್ತವೆ ಎಂದು ಹೇಳಿದರು.

Char Dham Yatra ಚಾರ್ ಧಾಮ್ ಯಾತ್ರಾರ್ಥಿಗಳಿಗೆ ಆರೋಗ್ಯ ಸೇವೆ

Published On: 07 March 2023, 03:17 PM English Summary: India's export of goods and services is likely to touch 750 billion US dollars!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.