1. ಸುದ್ದಿಗಳು

ಕರ್ನಾಟಕದ ಕೊಡುಗೆಗಳಿಲ್ಲದೆ ಭಾರತದ ಅಸ್ಮಿತೆ ವ್ಯಾಖ್ಯಾನಿಸಲು ಸಾಧ್ಯವಿಲ್ಲ: ಮೋದಿ!

Hitesh
Hitesh
India's identity cannot be defined without the contributions of Karnataka: Modi!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ  ‘ಬಾರಿಸು ಕನ್ನಡ ಡಿಂಡಿಮವ’ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದರು.

ನಂತರ ವಸ್ತು ಪ್ರದರ್ಶನವನ್ನು ಸಹ ವೀಕ್ಷಿಸಿದರು. ಈ ಉತ್ಸವವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿದೆ.

ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಸಂಭ್ರಮಿಸುತ್ತದೆ. ದೆಹಲಿ-ಕರ್ನಾಟಕ ಸಂಘವು ಭವ್ಯ ಪರಂಪರೆಯನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು.

ದೇಶವು ಸ್ವಾತಂತ್ರ್ಯ ಪಡೆದು 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ 75ನೇ ವಾರ್ಷಿಕೋತ್ಸವದ ಆಚರಣೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

75 ವರ್ಷಗಳ ಹಿಂದಿನ ಸನ್ನಿವೇಶಗಳನ್ನು ನಾವು ವಿಶ್ಲೇಷಿಸಿದಾಗ ಭಾರತದ ಅಜರಾಮರ ಚೈತನ್ಯವನ್ನು ನೋಡಬಹುದು.

ಕರ್ನಾಟಕದ ಕೊಡುಗೆಗಳಿಲ್ಲದೆ ಭಾರತದ ಅಸ್ಮಿತೆ, ಸಂಪ್ರದಾಯಗಳು ಮತ್ತು ಸ್ಫೂರ್ತಿಗಳನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು.

ಪೌರಾಣಿಕ ಕಾಲದ ಹನುಮಂತನ ಪಾತ್ರದ ದೃಶ್ಯವನ್ನು ವಿವರಿಸಿದ ಪ್ರಧಾನಿ, ಭಾರತದಲ್ಲಿ ಕರ್ನಾಟಕವು ಅದೇ ರೀತಿಯ ಪಾತ್ರವನ್ನು ವಹಿಸಿದೆ.

ಬದಲಾವಣೆಯ ಪರ್ವ ಅಯೋಧ್ಯೆಯಲ್ಲಿ ಪ್ರಾರಂಭವಾಗಿ ರಾಮೇಶ್ವರದಲ್ಲಿ ಕೊನೆಗೊಂಡರೂ ಅದು ಕರ್ನಾಟಕದಲ್ಲಿ ತನ್ನ ಶಕ್ತಿಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.

ಭಾರತವು ಜಿ-20 ರಂತಹ ಜಾಗತಿಕ ಸಂಘಟನೆಯ ಅಧ್ಯಕ್ಷತೆಯನ್ನು ವಹಿಸಿರುವಾಗ ಪ್ರಜಾಪ್ರಭುತ್ವದ

ತಾಯಿಯ ಆದರ್ಶಗಳಿಂದ ಭಾರತವು ಮಾರ್ಗದರ್ಶನ ಪಡೆಯುತ್ತದೆ ಎಂದು ಪ್ರಧಾನಿ ಹೇಳಿದರು.

‘ಅನುಭವ ಮಂಟಪʼದ ಮೂಲಕ ಭಗವಾನ್ ಬಸವೇಶ್ವರರ ವಚನಗಳು ಮತ್ತು ಪ್ರಜಾಸತ್ತಾತ್ಮಕ ಪ್ರವಚನಗಳು ಭಾರತಕ್ಕೆ ಬೆಳಕಿನ ಕಿರಣವಿದ್ದಂತೆ ಎಂದು ಅವರು ಹೇಳಿದರು.

ಲಂಡನ್‌ನಲ್ಲಿ ಹಲವಾರು ಭಾಷೆಗಳಲ್ಲಿ ಅವರ ವಚನಗಳ ಸಂಕಲನದೊಂದಿಗೆ ಭಗವಾನ್ ಬಸವೇಶ್ವರರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಅವಕಾಶ ಸಿಕ್ಕಿತ್ತು.

ಇದು ಕರ್ನಾಟಕದ ಸಿದ್ಧಾಂತ ಮತ್ತು ಅದರ ಪರಿಣಾಮಗಳ ಅಮರತ್ವಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಕರ್ನಾಟಕವು ಸಂಪ್ರದಾಯಗಳು ಮತ್ತು ತಂತ್ರಜ್ಞಾನದ ನಾಡು. ಇದು ಐತಿಹಾಸಿಕ ಸಂಸ್ಕೃತಿಯೋದಿಗೆ ಆಧುನಿಕ ಕೃತಕ ಬುದ್ಧಿಮತ್ತೆಯನ್ನೂ ಹೊಂದಿದೆ.

ಬೆಂಗಳೂರಿನಲ್ಲಿ ಮಹತ್ವದ ಜಿ-20 ಸಭೆಯೂ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ದೇಶವು ಅಭಿವೃದ್ಧಿ ಮತ್ತು ಪರಂಪರೆ, ಪ್ರಗತಿ ಮತ್ತು ಸಂಪ್ರದಾಯಗಳೊಂದಿಗೆ ಒಟ್ಟಾಗಿ ಮುನ್ನಡೆಯುತ್ತಿದೆ.

India's identity cannot be defined without the contributions of Karnataka: Modi!

ಒಂದೆಡೆ ಭಾರತ ತನ್ನ ಪುರಾತನ ದೇವಾಲಯಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಪುನರುಜ್ಜೀವನಗೊಳಿಸುತ್ತಿದ್ದರೆ, ಇನ್ನೊಂದೆಡೆ ಡಿಜಿಟಲ್ ಪಾವತಿಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ.

ಇಂದಿನ ಭಾರತವು ತನ್ನಲ್ಲಿಂದ ಕದಿಯಲಾಗಿದ್ದ ವಿಗ್ರಹಗಳು ಮತ್ತು ಶತಮಾನಗಳಷ್ಟು ಹಳೆಯದಾದ ಕಲಾಕೃತಿಗಳನ್ನು ವಿದೇಶಗಳಿಂದ ಮರಳಿ ತರುತ್ತಿದೆ ಮತ್ತು ಅದು ದಾಖಲೆಯ ಎಫ್‌ಡಿಐ ಅನ್ನು ಸ್ವೀಕರಿಸುತ್ತಿದೆ.

ಇದು ನವ ಭಾರತದ ಅಭಿವೃದ್ಧಿ ಪಥವಾಗಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿಯತ್ತ ನಮ್ಮನ್ನು ಕರೆದೊಯ್ಯುತ್ತದೆ ಎಂದರು.

ಜ್ಞಾನ ಮತ್ತು ಕಲೆಯ ಮೇಲೆ ಗಮನಹರಿಸಬೇಕು ಮತ್ತು ಕನ್ನಡ ಭಾಷೆಯ ಸೌಂದರ್ಯ ಮತ್ತು ಅದರ ಶ್ರೀಮಂತ ಸಾಹಿತ್ಯವನ್ನು ಎತ್ತಿ ತೋರಿಸಬೇಕು.

ಕನ್ನಡ ಭಾಷೆಯನ್ನು ಓದುವವರ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರಕಾಶಕರು ಉತ್ತಮ ಪುಸ್ತಕವನ್ನು ಪ್ರಕಟಿಸಿದ ಕೆಲವೇ ವಾರಗಳಲ್ಲಿ ಮರುಮುದ್ರಣ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕವು ಕಂಸಾಳೆಯಿಂದ ಕರ್ನಾಟಕ ಸಂಗೀತದವರೆಗೆ ಮತ್ತು ಭರತನಾಟ್ಯದಿಂದ ಯಕ್ಷಗಾನದವರೆಗೆ ಶಾಸ್ತ್ರೀಯ ಮತ್ತು ಜನಪ್ರಿಯ ಕಲೆಗಳಲ್ಲಿ ಸಮೃದ್ಧವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಯುದ್ಧ ಸ್ಮಾರಕ, ಪ್ರಧಾನಮಂತ್ರಿ ಸಂಗ್ರಹಾಲಯ ಮತ್ತು ಕರ್ತವ್ಯ ಪಥಕ್ಕೆ ಭೇಟಿ ನೀಡುವಂತೆ ಅವರು ಕಲಾವಿದರು ಮತ್ತು ವಿದ್ವಾಂಸರನ್ನು ವಿನಂತಿಸಿದರು.

2047 ರಲ್ಲಿ ಭಾರತವು ಸ್ವಾತಂತ್ರ್ಯ ಪಡೆದು 100 ವರ್ಷಗಳನ್ನು ಪೂರೈಸಿದಾಗ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ, ಭಾರತದ ವೈಭವದ

ಅಮೃತ ಕಾಲದಲ್ಲಿ ನೂರನೇ ವರ್ಷಕ್ಕೆ ಕಾಲಿಡಲಿರುವ ದೆಹಲಿ ಕರ್ನಾಟಕ ಸಂಘದ ಕೊಡುಗೆಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದರು.   

Published On: 26 February 2023, 11:42 AM English Summary: India's identity cannot be defined without the contributions of Karnataka: Modi!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.