ರೈಲ್ವೆ ಇಲಾಖೆಯ ಚೆನ್ನೈನ ಇಂಟಿಗ್ರೆಲ್ ಕೋಚ್ ವಿಭಾಗದಲ್ಲಿ ಖಾಲಿ ಇರುವ 1000 ಟ್ರೇಡ್ ಅಪ್ರೆಂಟಿಸ್ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. .
ಕರ್ನಾಟಕ, ಆಂಧ್ರ, ಕೇರಳ ಸೇರಿದಂತೆ ತಮಿಳುನಾಡು ರಾಜ್ಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದು ನೇರ ನೇಮಕಾತಿಯಾಗಿರುತ್ತದೆ. ಆಸಕ್ತರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು
ಖಾಲಿ ಹುದ್ದೆಗಳ ವಿವರ
ಕಾರ್ಪೆಂಟರ್ |
80 |
ಇಲೆಕ್ಟ್ರೀಷಿಯನ್ |
200 |
ಫಿಟ್ಟರ್ |
260 |
ಮೆಕ್ಯಾನಿಸ್ಟ್ |
80 |
ಪೇಂಟರ್ |
80 |
ವೆಲ್ಡರ್ |
290 |
ಎಂಎಲ್ಟಿ ರೇಡಿಯೋಲಜಿ |
04 |
ಎಂಎಲ್ಟಿ ಪ್ಯಾಥೋಲಜಿ |
04 |
Pasaa |
02 |
ಒಟ್ಟು ಹುದ್ದೆಗಳ ಸಂಖ್ಯೆ |
1000 |
ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಕಾರ್ಪೆಂಟರ್ / ಇಲೆಕ್ಟ್ರೀಷಿಯನ್ / ಫಿಟ್ಟರ್ / ಮೆಕ್ಯಾನಿಸ್ಟ್ / ಪೇಂಟರ್ / ವೆಲ್ಡರ್ / ಎಂಎಲ್ಟಿ ರೇಡಿಯೋಲಜಿ / ಎಂಎಲ್ಟಿ ಪ್ಯಾಥೋಲಜಿ / ಟ್ರೇಡ್ನಲ್ಲಿ ಐಟಿಐ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.
ತರಬೇತಿ ಭತ್ಯೆ:
ಭಾರತ ಸರ್ಕಾರದ ನಿಯಮಗಳ ಅನ್ವಯ ತರಬೇತಿ ಭತ್ಯೆ ನೀಡಲಾಗುವುದು. ಮಾಸಿಕ 6,000 ರಿಂದ 7,000 ಭತ್ಯೆ ನೀಡಲಾಗುವುದು.
ವಯೋಮಿತಿ ಸಡಿಲಿಕೆ:
2020ಕ್ಕೆ ಅನ್ವಯವಾಗುವಂತೆ ಕನಿಷ್ಠ 15, ಗರಿಷ್ಠ 24 ವರ್ಷದರಾಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ನೇಮಕಾತಿ ವಿಧಾನ: ಎಸ್ಎಸ್ಎಲ್ಸಿ ಹಾಗೂ ಐಟಿಐ, ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅಪ್ಲಿಕೇಶನ್ ಶುಲ್ಕ:
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪ್ರೋಸೆಸಿಂಗ್ ಫೀಸ್ ರೂ.100 ಪಾವತಿಸಬೇಕು. ಆನ್ಲೈನ್ ಮೂಲಕ ಸರ್ವೀಸ್ ಚಾರ್ಜ್ ಅನ್ನು ಪಾವತಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನ: 25 ಸೆಪ್ಟೆಂಬರ್ 2020
ವೆಬ್ಸೈಟ್: https://indianrailwayrecruitment.in ಅಧಿಸೂಚನೆಯಲ್ಲಿ ಹುದ್ದೆಗಳ ವಿವರ, ಅರ್ಜಿಸಲ್ಲಿಸುವ ವಿಧಾನ ಸೇರಿದಂತೆ ಇತರ ಮಾಹಿತಿಗಳನ್ನು ನೋಡಬಹುದು.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು. ಅಧಿಕೃತ ವೆಬ್ಸೈಟ್ https://indianrailwayrecruitment.in ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸುವ ಮಾಹಿತಿಯನ್ನು ಪಡೆಯಬಹುದು. ಇತರೆ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
Share your comments