1. ಸುದ್ದಿಗಳು

ನಾಳೆ International Yoga Day : ಈ ವರ್ಷದ ಥೀಮ್‌ ಏನು..?

Maltesh
Maltesh
International Yoga Day : What Is the Theme

ಯೋಗದ ಮಹತ್ವವನ್ನು ಗುರುತಿಸಿ ವಿಶ್ವಸಂಸ್ಥೆಯು ಜೂನ್ 21 ನೇ ತಾರೀಖನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿತು. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಾ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯ ಪ್ರಸ್ತಾಪವನ್ನು ಮುಂದಿಟ್ಟರು.  ಯೋಗಾಭ್ಯಾಸದ ಪ್ರಯೋಜನಗಳು ಮತ್ತು ಅದರ ಬಗ್ಗೆ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಯೋಗ ದಿನ ಒಂದು ಉತ್ತಮ ಅವಕಾಶವಾಗಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸಲು ಸಹ ಒಂದು ಉತ್ತಮ ಸಮಯವಾಗಿದೆ.

ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ 'ವಸುಧೈವ ಕುಟುಂಬಕ್ಕೆ ಯೋಗ' ಎಂಬುದಾಗಿದೆ. 'ಯೋಗ ಫಾರ್ ವಸುಧೈವ ಕುಟುಂಬಕಂ' ಎಂಬ ವಿಷಯದ ಅಡಿಯಲ್ಲಿ ಈ ವರ್ಷದ ಅಂತಾರಾಷ್ಟ್ರೀಯ ಯೋಗದ ದಿನವು ಏಕತೆ ಮತ್ತು ಪರಸ್ಪರ ಸಂಬಂಧದ ಮಹತ್ವವನ್ನು ವ್ಯಕ್ತಿಗಳು ಮತ್ತು ಸಮುದಾಯಗಳ ಸಮನ್ವಯತೆಯ ಗುರಿಯನ್ನು ಹೊಂದಿದೆ. ಯೋಗ ಒಂದು ಸಮಗ್ರ ಅಭ್ಯಾಸದ ರೂಢಿಯಾಗಿದ್ದು, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮ, ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ.

Free Smartphones : ಮಹಿಳೆಯರಿಗೆ ಸ್ಮಾರ್ಟ್‌ ಫೋನ್‌ ಖರೀದಿಗೆ ಹಣ

ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗಳ ಭಾಗವಾಗಿ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಬೆಂಗಳೂರು ಕಚೇರಿಯು ಎಂ.ಎಸ್. ರಾಮಯ್ಯ ಅನ್ವಿಕ ವಿಜ್ಞಾನದ ವಿಶ್ವವಿದ್ಯಾಲಯ(MSRUAS), ಜೂನ್ 21ರಂದು  ಅಂತಾರಾಷ್ಟ್ರೀಯ ಯೋಗ ದಿನ 2023 ನ್ನು ಆಚರಿಸುತ್ತಿದೆ.

ಜೂನ್ 21, 2023 ರಂದು ಬೆಂಗಳೂರಿನ ಎಂ ಎಸ್ ರಾಮಯ್ಯ ವಿಶ್ವ ವಿದ್ಯಾಲಯದ ದ್ವಾರಕಾ ಸಭಾಂಗಣದಲ್ಲಿ ಬೆಳಗ್ಗೆ 8 ರಿಂದ 10 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು 500ಕ್ಕೂ ಹೆಚ್ಚು ಯೋಗಾಸಕ್ತರು ನೋಂದಣಿ ಮಾಡಿಕೊಂಡಿದ್ದಾರೆ.

ಡಾ. ಕಂಬಂಪತಿ ಸುಬ್ರಹ್ಮಣ್ಯಂ, ಕುಲಪತಿಗಳ ಸಲಹೆಗಾರರು, -ವ್ಯಾಸ (ಯೋಗ ವಿಶ್ವವಿದ್ಯಾಲಯ), ಶ್ರೀ. ಮೊಹಮ್ಮದ್ ಫಾರೂಕ್ ಪ್ರವಾಸೋದ್ಯಮ ಸಚಿವಾಲಯದ ನಿರ್ದೇಶಕ, ಪ್ರೊ.ಕುಲದೀಪ್ ಕುಮಾರ್ ರೈನಾ, ಉಪ ಕುಲಪತಿ, ಆರ್ ಯುಎಎಸ್ ಮತ್ತು ಪ್ರವಾಸೋದ್ಯಮ ಇಲಾಖೆಗೆ ಸಂಬಂಧಪಟ್ಟ ಪದಾಧಿಕಾರಿಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ.

ನಿಮ್ಮ ಅಕೌಂಟ್‌ಗೆ ಪಿಎಂ ಕಿಸಾನ್‌ 14 ನೆ ಕಂತು ಬರುತ್ತದೆಯೇ? ಈಗಲೇ ತಿಳಿದುಕೊಳ್ಳಿ

Published On: 20 June 2023, 10:54 AM English Summary: International Yoga Day : What Is the Theme

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.