ಎಸ್.ಬಿ.ಐ ಬ್ಯಾಂಕಿನಲ್ಲಿ ಖಾಲಿಯಿರುವ ಕ್ಲರಿಕಲ್ ಕೆೇಡರ್ ನ ಜೂನಿಯರ್ ಅಸೋಸಿಯೇಷನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು ಜೂನ್ 27 ರಿಂದ ಮೇ 17 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ: ಯಾವುದೇ ಅಂಗೀಕೃತ ವಿವಿಯಿಂದ ಯಾವುದೇ ವಿಭಾಗದಲ್ಲಿ ಪದವಿ ಉತ್ತೀರ್ಣರಾಗಿರಬೇಕು.
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 27-04-2021 ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17-05-2021, ಎಸ್ಬಿಐ ಕ್ಲರ್ಕ್ ಪರೀಕ್ಷೆ 2021 : 31-06-2021
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್ಲೈನ್ ಪ್ರಿಲಿಮಿನರಿ, ಮುಖ್ಯ ಪರೀಕ್ಷೆ ಮತ್ತು ಆಯಾ ರಾಜ್ಯಕ್ಕೆ ಸಂಬಂಧಪಟ್ಟ ಅಧಿಕೃತ ಭಾಷೆಗಳ ಕುರಿತು ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಸಾಮಾನ್ಯ ಅಭ್ಯರ್ಥಿಗಳ, ಹಿಂದುಳಿದ, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 750 ರೂಪಾಯಿ ಶುಲ್ಕವಿದೆ. ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.ಅರ್ಜಿ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ನೆಟ್ಬ್ಯಾಂಕಿಂಗ್, ಡೆಬಿಡ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಎಸ್ಬಿಐ ಚಲನ್ ಜೆನೆರೇಟ್ ಮಾಡಿ ಪಾವತಿಸಬಹುದು.
ವಯೋಮಿತಿ ಅರ್ಹತೆಗಳು:
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ಮೀರಿರಬಾರದು. ದಿನಾಂಕ 02-04-1993 ಕ್ಕಿಂತ ಮುಂಚಿತವಾಗಿ ಜನಿಸಬಾರದು. ಹಾಗೆ ದಿನಾಂಕ 01-04-2001 ರ ನಂತರ ಜನಿಸಿರಬಾರದು.
ವೇತನ ಶ್ರೇಣಿ: ಬೇಸಿಕ್ ಸ್ಯಾಲರಿ ರೂ.13075-60000, ಜೊತೆಗೆ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.
ನೋಟಿಫಿಕೇಷನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ: sbi-clerk-notification-2021
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ವೆಬ್ಸೈಟ್ : sbi.co.in ಲಿಂಕ್ ಕ್ಲಿಕ್ ಮಾಡಬಹುದು. ಅರ್ಜಿ ಸಲ್ಲಿಸುವುದಕ್ಕಂತ ಮುಂಚಿತವಾಗಿ ನೋಟಿಫಿಕೇಷನ್ ನಲ್ಲಿ ಚೆನ್ನಾಗಿ ಓದಿಕೊಂಡು ಭರ್ತಿ ಮಾಡಿ.
Share your comments