ರಾಜ್ಯದಲ್ಲಿ ಕೊರೋನಾ ಸೋಂಕು ಗುರುವಾರವೂ ಸ್ಪೋಟಗೊಂಡಿದೆ. ಒಂದೇ ದಿನ 48781 ಜನರಿಗೋಕೊರೋನಾ ಸೋಂಕು ತಗುಲಿ 592 ಜನ ಸಾವನ್ನಪ್ಪಿದ್ದಾರೆ. ನಿನ್ನೆ ರಾಜ್ಯದಲ್ಲಿ 346 ಮಂದಿ ಸಾವನ್ನಪ್ಪಿದ್ದರು.ಆದರೆ ಇಂದು 592 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಈ ಮೂಲಕ ಮೃತರ ಸಂಖ್ಯೆ 17804 ಕ್ಕೆ ಹೆಚ್ಚಳವಾಗಿದೆ.
ಇಂದು 48,781 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ 536641 ಮಂದಿಗೆ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ 1838885 ಏರಿಕೆಯಾಗಿವೆ. ಗುರುವಾರ ಆಸ್ಪತ್ರೆಯಿಂದ 28623 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ 1284420 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಒಟ್ಟು ಶೇ30.69 ರಷ್ಟು ಖಚಿತ ಪ್ರಕರಣಗಳು ವರದಿಯಾಗಿದ್ದು ಮೃತರ ಪ್ರಮಾಣ ಶೇ. 1.21ರಷ್ಟಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಗಣನೀಯ ಏರಿಕಯಾಗಿರುವುದು ಭೀತಿಗೆ ಕಾರಣವಾಗಿದೆ. ಇಂದು ಒಂದೇ ದಿನ 346 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 7491 ಕ್ಕೆ ಏರಿದೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 21376 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 908462ಕ್ಕೆ ಏರಿಕೆ ಕಂಡಿದೆ.
ಬಾಗಲಕೋಟೆ 661, ಬಳ್ಳಾರಿ 1,284, ಬೆಳಗಾವಿ 965, ಬೆಂಗಳೂರು ಗ್ರಾಮಾಂತರ 959 ಬೆಂಗಳೂರು ನಗರ 21,376, ಬೀದರ್ 437, ಚಾಮರಾಜನಗರ 725, ಚಿಕ್ಕಬಳ್ಳಾಪುರ 734, ಚಿಕ್ಕಮಗಳೂರು 632, ಚಿತ್ರದುರ್ಗ 126, ದಕ್ಷಿಣ ಕನ್ನಡ 1,633, ದಾವಣಗೆರೆ 538, ಧಾರವಾಡ 942, ಗದಗ 248, ಹಾಸನ 2,422, ಹಾವೇರಿ 214, ಕಲಬುರಗಿ 1,722, ಕೊಡಗು 622, ಕೋಲಾರ 828, ಕೊಪ್ಪಳ 523, ಮಂಡ್ಯ 1,110, ಮೈಸೂರು 2,246, ರಾಯಚೂರು 762, ರಾಮನಗರ 501, ಶಿವಮೊಗ್ಗ 563, ತುಮಕೂರು 3,040, ಉಡುಪಿ 976, ಉತ್ತರ ಕನ್ನಡ 833, ವಿಜಯಪುರ 445 ಮತ್ತು ಯಾದಗಿರಿಯಲ್ಲಿ 715 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಕೋವಿಡ್ 19: ಖ್ಯಾತ ಗಾಯಕ ಜಿ. ಆನಂದ್ ಸಾವು
ಇತ್ತೀಚಿಗೆ ಕೊರೋನಾಗೆ ಚಿತ್ರ ಜಗತ್ತಿನ ಹಲವು ಗಣ್ಯರು ಬಲಿಯಾಗಿದ್ದಾರೆ. ಇದೀಗ ದಕ್ಷಿಣದ ಚಿತ್ರರಂಗ ಮತ್ತೋರ್ವ ಹಿರಿಯ ಗಾಯಕ ಜಿ ಆನಂದ್ ಮೃತಪಟ್ಟಿದ್ದಾರೆ.
ಕೊರೋನಾ ಸೋಂಕಿಗೆ ತುತ್ತಾಗಿದ್ದ 67 ವರ್ಷದ ತೆಲುಗಿನ ಖ್ಯಾತ ಗಾಯಕ ಆನಂದ್ ಅವರ ಆಕ್ಸಿಜನ್ ಪ್ರಮಾಣ 55ಕ್ಕೆ ಇಳಿಕೆಯಾಗಿತ್ತು. ಆಕ್ಸಿಜನ್ ಮತ್ತು ವೆಂಟಿಲೇಟರ್ ಗಾಗಿ ಪರದಾಡಿದ್ದರಾದರೂ ಸಿಗದ ಕಾರಣ ಆಂಧ್ರಪ್ರದೇಶದ ತಿರುಮಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯವರಾಗಿದ್ದ ಆನಂದ್ 1976 ರಲ್ಲಿ ಅಮೇರಿಕಾ ಅಮ್ಮಾಯಿ ಚಲನಚಿತ್ರದೊಂದಿಗೆ ಗಾಯನ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು, ಚಿತ್ರದಲ್ಲಿ, ಅವರು "ಓಕಾ ವೇನು ವಿನಿಪಿಂಚೆನು" ಎಂಬ ಹಿಟ್ ಹಾಡಿಗೆ ಧ್ವನಿ ನೀಡಿದರು.
Share your comments