ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಡಿ 2021-22ನೇ ಸಾಲಿನಲ್ಲಿ ಆದಾಯೋತ್ಪನ್ನ, ಸೇವಾ ಹಾಗೂ ವ್ಯಾಪಾರ ಚಟುವಟಿಕೆಗಳನ್ನು ನಡೆಸಲು ಆಸಕ್ತಿಯುಳ್ಳ ಕಲಬುರಗಿ ಜಿಲ್ಲೆಯ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಶಾಸಕರ ಆಯ್ಕೆ ಸಮಿತಿ ಯೋಜನೆಗಳ ವಿವರ ಇಂತಿದೆ. ಉದ್ಯೋಗಿನಿ ಯೋಜನೆಯಡಿ 52 ಭೌತಿಕ ಗುರಿ ಹಾಗೂ 53.19 ಲಕ್ಷ ರೂ.ಗಳ ಆರ್ಥಿಕ ಗುರಿ ಇರುತ್ತದೆ. ಈ ಯೋಜನೆಯಡಿ ಎಲ್ಲಾ ವರ್ಗದ ಮಹಿಳೆಯರಿಗೆ ಬ್ಯಾಂಕಿನಿAದ ಕನಿಷ್ಟ 1 ಲಕ್ಷ ರೂ. ದಿಂದ ಗರಿಷ್ಠ 3 ಲಕ್ಷ ರೂ. ವರೆಗಿನ ಸಾಲ ಹಾಗೂ ನಿಗಮದಿಂದ ಸಹಾಯಧನ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಮಂಜೂರಾದ ಸಾಲದ ಶೇ. 50 ರಷ್ಟು ಗರಿಷ್ಟ 150000 ರೂ. ವರೆಗೆ ಹಾಗೂ ಇತರೆ ವರ್ಗದ ಮಹಿಳೆಯರಿಗೆ ಸಾಲ ಮೋತ್ತದ ಶೇ. 30 ರಷ್ಟು ಗರಿಷ್ಟ 90000 ರೂ.ಗಳ ವರೆಗಿನ ಸಹಾಯಧನ ಸೌಲಭ್ಯ ಇರುತ್ತದೆ. ವಯೋಮತಿ 18 ರಿಂದ 55 ವರ್ಷದೊಳಗಿನ ಮಹಿಳೆಯರು ಸಾಲಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಕಿರುಸಾಲ ಯೋಜನೆಯಡಿ 05 ಭೌತಿಕ ಗುರಿ ಹಾಗೂ 10 ಲಕ್ಷ ರೂ.ಗಳ ಆರ್ಥಿಕ ಗುರಿ ಇರುತ್ತದೆ. ಇಲಾಖೆಯಡಿ ರಚನೆಯಾಗಿರುವ ಸ್ತಿçÃಶಕ್ತಿ ಗುಂಪುಗಳು ಮಾತ್ರ 2 ಲಕ್ಷ ರೂ.ಗಳ ಬಡ್ಡಿರಹಿತ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಮೇಲ್ಕಂಡ ಯೋಜನೆಗಳಡಿ ನಿಗದಿತ ಅರ್ಜಿ ನಮೂನೆಗಳನ್ನು ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ವಿತರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಭAದಪಟ್ಟ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಜಿಲ್ಲಾ ಆಯ್ಕೆ ಸಮಿತಿ ಯೋಜನೆಗಳ ವಿವರ ಇಂತಿದೆ. ಚೇತನಾ ಯೋಜನೆ (ದಮನಿತ ಮಹಿಳೆಯರು) ಪುನರ್ವಸತಿ ಯೋಜನೆಯಡಿ 26 ಭೌತಿಕ ಗುರಿ ಹಾಗೂ 7.99 ಲಕ್ಷ ರೂ.ಗಳ ಆರ್ಥಿಕ ಗುರಿ ಇರುತ್ತದೆ. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ (ಟ್ರಾನ್ಸಜೆಂರ‍್ಸ) ಯಡಿ 30 ಭೌತಿಕ ಗುರಿ ಹಾಗೂ 9.22 ಲಕ್ಷ ರೂ. ಆರ್ಥಿಕ ಗುರಿ ಇರುತ್ತದೆ. ಧನಶ್ರೀ ಯೋಜನೆ (ಹೆಚ್.ಐ.ವಿ. ಸೋಂಕಿತ ಮಹಿಳೆಯರು) ಯಡಿ 23 ಭೌತಿಕ ಗುರಿ ಹಾಗೂ 7.07 ಲಕ್ಷ ರೂ. ಆರ್ಥಿಕ ಗುರಿ ಇರುತ್ತದೆ.
ಮೇಲ್ಕಂಡ ಯೋಜನೆಗಳಡಿ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಸಮುದಾಯ ಆಧಾರಿತ ಸ್ವಯಂ ಸೇವಾ ಸಂಸ್ಥೆಯಿAದ ಅಥವಾ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಪಡೆಯಬಹುದಾಗಿದೆ. ಆಸಕ್ತ ವಿಶೇಷ ವರ್ಗದವರು ನಿಗದಿತ ದಾಖಲಾತಿ ಹಾಗೂ ಅರ್ಜಿಯೊಂದಿಗೆ ಪ್ರಸ್ತಾವನೆಗಳನ್ನು ಲಗತ್ತಿಸಿ 2021ರ ಸೆಪ್ಟೆಂಬರ್ 15 ರೊಳಗಾಗಿ ಸಮುದಾಯ ಆಧಾರಿತ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
Share your comments