ನಮ್ಮ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಇದೀಗ ಹಲವು ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ.
ನಂದಿನಿಯ ಈ ಹೊಸ ಉತ್ಪನ್ನಗಳು ರೈತರಿಗೆ ಹಾಗೂ ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲಿದೆ.
ರಾಜ್ಯದ ಹೈನುಗಾರರಿಗೆ ಹೊಸ ಉತ್ಪನ್ನಗಳ ಮೂಲಕ ಹೆಚ್ಚು ಆದಾಯ ಸಿಗಲಿದೆ.
ಎಮ್ಮೆಯನ್ನು ಸಾಕುವವರಿಗೂ ಸಿಹಿಸುದ್ದಿಯಾಗಿದೆ.
ಹೈನುಗಾರ ರೈತರಿಗೆ ಈ ಉತ್ಪನ್ನಗಳ ಮಾರಾಟದಿಂದ ಪರೋಕ್ಷ ಆದಾಯ ವೃದ್ಧಿಯಾಗಲಿದೆ.
ಗ್ರಾಹಕರಿಗೂ ಹೊಸ ಅನುಭೂತಿ ಸಿಗಲಿದೆ.
ಈಗಾಗಲೇ ಕರ್ನಾಟಕದ ಹೆಮ್ಮೆಯ ನಂದಿನಿಯು ಹಲವು ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ.
ಇದೀಗ ಹೊಸದಾಗಿ ಎಮ್ಮೆಯ ಹಾಲು, ಸಿರಿಧಾನ್ಯ ಲಡ್ಡು, ತಿಳಿ(ಲೈಟ್) ಮೊಸರು ಹಾಗೂ ಏಲಕ್ಕಿ ಪೇಡ ಪರಿಚಯಿಸಲಾಗಿದೆ.
ಹೊಸ ವಿನ್ಯಾಸ; ಹೊಸ ಸ್ವಾದ
ನಂದಿನಿ ಬ್ರ್ಯಾಂಡ್‌ನ ಹೊಸ ಮಾದರಿಯ ಸ್ವಾದ, ನವ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ನಂದಿನಿ ಉತ್ಪನ್ನಗಳ ವಿವರ ಈ ರೀತಿ ಇದೆ.
ಮೈಸೂರು ಪಾಕ್, ಹಾಲಿನ ಪೇಡ, ಧಾರವಾಡ ಪೇಡ, ಕಾಜು ಕಟ್ಲಿ, ಸಿರಿಧಾನ್ಯ ಲಡ್ಡು, ಕೇಸರಿ ಪೇಡ,
ಏಲಕ್ಕಿ ಪೇಡ ಹಾಗೂ ಬೇಸನ್ ಲಡ್ಡು ಹೊಸ ನಂದಿನಿ ಉತ್ಪನ್ನಗಳಾಗಿವೆ.
ಹೊಸ ನಂದಿನಿ ಲೈಟ್ ಮೊಸರು
ಕಡಿಮೆ ಜಿಡ್ಡಿನಾಂಶ; ಅಧಿಕ ಪ್ರೋಟಿನ್ ಹಾಗೂ ಅತಿಹೆಚ್ಚು ಪೋಷಕಾಂಶ ಹೊಸ ನಂದಿನಿ ಲೈನ್‌ನ ವಿಶೇಷವಾಗಿದೆ.
ಇನ್ನು ನಂದಿನಿ ಮೊಸರಿನ ವಿಶೇಷತೆಗಳೆಂದರೆ, ಜೀರ್ಣಕ್ರಿಯೆ ಸುಧಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಳ, ಮೂಳೆಗಳ ಸದೃಢತೆಗೆ ಸಹಾಯಕವಾಗಿದೆ.
ಇದರೊಂದಿಗೆ ಸಂಧಿವಾತ ನಿವಾರಣೆಗೆ ಸಹಾಯಕ ಹಾಗೂ ರಕ್ತದೊತ್ತಡ ನಿವಾರಣೆಗೆ ಸಹಾಯಕವಾಗಲಿದೆ.
ನಂದಿನಿ ಲೈಟ್ ಮೊಸರು ಅರ್ಧ ಲೀಟರ್‌ಗೆ 25 ರೂಪಾಯಿ ಹಾಗೂ 180 ಮಿ.ಲೀ ಪ್ಯಾಕ್‌ನ ದರ 10 ರೂಪಾಯಿಗೆ ಸಿಗಲಿದೆ.
ಎಮ್ಮೆ ಹಾಲು ಪ್ರಿಯರಿಗೆ ಸಂತಸದ ಸುದ್ದಿ
ನಂದಿನಿ ಬ್ರ್ಯಾಂಡ್‌ಗೆ ಹೊಸ ಸೇರ್ಪಡೆ ಕೆಎಂಎಫ್‌ನಿಂದ ನಂದಿನಿ ಎಮ್ಮೆ ಹಾಲು. ನಂದಿನಿಯ ಉತ್ಪನ್ನದಿಂದ ನಂದಿನಿಯ ಎಮ್ಮೆ ಹಾಲನ್ನು ಪರಿಚಯಿಸಲಾಗಿದೆ.
ಇದರ ಅರ್ಧ ಲೀಟರ್ ಪ್ಯಾಕ್‌ನ ದರವು 35 ರೂಪಾಯಿ ಆಗಿದೆ.
ನಂದಿನಿ ಎಮ್ಮೆ ಹಾಲಿನ ವಿಶೇಷತೆಗಳು ಈ ರೀತಿ ಇವೆ. ಪೌಷ್ಠಿಕಾಂಶಗಳ ಕಣಜ, ಮಕ್ಕಳು ಶಕ್ತಿವಂತರಾಗಲು ಪೂರಕ, ದಷ್ಟಪುಷ್ಟರಾಗಲು ಸಹಾಯಕ,
ಹೆಚ್ಚು ಪ್ರೋಟಿನ್, ಲವಣಾಂಶ, ಕ್ಯಾಲ್ಸಿಯಂ ಭರಿತ, ಗಟ್ಟಿ ಮೊಸರು, ಸಿಹಿ ಉತ್ಪನ್ನಗಳ ತಯಾರಿಕೆಗೆ ಸೂಕ್ತವಾಗಿದೆ.
ಹೋಟೆಲ್‌ಗಳಲ್ಲಿ ಹೆಚ್ಚು ಕಾಫಿ, ಟೀ ತಯಾರಿಕೆಗೂ ಅನುಕೂಲವಾಗಲಿದೆ.
ರೈತರ ಶ್ರಮದಿಂದ ಕಟ್ಟಿದ ಸಂಸ್ಥೆ: ಸಿ.ಎಂ
ನಮ್ಮ ನಂದಿನಿ ಬ್ರ್ಯಾಂಡ್ ನಾಡಿನ ರೈತರು ಶ್ರಮದಿಂದ ಕಟ್ಟಿರುವ ನಂದಿನಿ, ಕೆಎಂಎಫ್ ಸಂಸ್ಥೆಯನ್ನು ಯಾರದೋ
ಸ್ವಾರ್ಥಕ್ಕಾಗಿ ಹೊರರಾಜ್ಯದ ಸಂಸ್ಥೆಯ ಪಾದದಡಿ ಇಡುವವರು ನಾವಲ್ಲ.
ನಮ್ಮ ಹೆಮ್ಮೆಯ ಸಂಸ್ಥೆಯನ್ನು ಉಳಿಸಿ, ಬೆಳೆಸುವುದೊಂದೇ ನಮ್ಮ ಗುರಿ.
ನಂದಿನಿ ಬರೀ ಸಂಸ್ಥೆಯಲ್ಲ, ಕನ್ನಡಿಗರ ಭಾವನೆ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು.
ಅಲ್ಲದೇ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಕನ್ನಡಿಗರೆಲ್ಲರ ಮೊದಲ ಆಯ್ಕೆ ನಂದಿನಿ ಆಗಿರಲಿ
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
Share your comments