1. ಸುದ್ದಿಗಳು

KEA-2022; ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ FDA ಹಾಗೂ SDA ನೇಮಕಾತಿ ಶುರು.. ಇಲ್ಲಿದೆ ಪೂರ್ಣ ಮಾಹಿತಿ

KJ Staff
KJ Staff
KEA FDA SDA RECRUITMENT KEA

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಗ್ರಾಮೀಣ ಮೂಕಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಸಹಾಯಕ ಅಭಿಯಂತರರು ಗ್ರೇಡ್-1. ಕಿರಿಯ ಅಭಿಯಂತರರು. ಪ್ರಥಮ ದರ್ಜೆ ಸಹಾಯಕರು. ದ್ವಿತೀಯ ದರ್ಜೆ ಸಹಾಯಕರು, ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಇದನ್ನೂ ಓದಿ:LIC BIG OFFER: ಮಾರ್ಚ 31ರ ಒಳಗೆ ಇದನ್ನು ಪಡೆದರೆ 10 ವರ್ಷದ ವರೆಗೆ 9,250 ರೂ ಪೆನ್ಷನ್‌ ಪಕ್ಕಾ..!

ಹುದ್ದೆಗಳ ವಿವರ

ಪ್ರಥಮ ದರ್ಜೆ ಸಹಾಯಕರು 5
ದ್ವಿತೀಯ ದರ್ಜೆ ಸಹಾಯಕರು 10
ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್)43
ಕಿರಿಯ ಅಭಿಯಂತರರು (ಸಿವಿಲ್) 18
ಒಟ್ಟು 76

ವಿದ್ಯಾರ್ಹತೆ

ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್): ಸಿವಿಲ್ ಇಂಜಿನಿಯರ್‌ ಪದವಿ ಪಡೆದಿರಬೇಕು..
ಕಿರಿಯ ಅಭಿಯಂತರರು (ಸಿವಿಲ್) : ಸಿವಿಲ್ ಇಂಜಿನಿಯರ್ ಪದವಿ
ಪ್ರಥಮ ದರ್ಜೆ ಸಹಾಯಕರು: ಯಾವುದೇ ಪದವಿ ಪಾಸ್.
ದ್ವಿತೀಯ ದರ್ಜೆ ಸಹಾಯಕರು : ದ್ವಿತೀಯ ಪಿಯುಸಿ / ತತ್ಸಮಾನ ವಿದ್ಯಾರ್ಹತೆ ಪಾಸ್ ಆಗಿರಬೇಕು

ಇದನ್ನೂ ಓದಿ:ದಾಖಲೆ ಸಲ್ಲಿಸಿ 80,000 ಗಳಿಸಿ! SBI ನಲ್ಲಿದೆ ಇಂಥ Golden ಅವಕಾಶ

ವಯೋಮಿತಿ

ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ವರ್ಗವಾರು ಗರಿಷ್ಠ ವಯೋಮಿತಿ


ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷ ಹಿಂದುಳಿದ ವರ್ಗದ ಅಭ್ಯರ್ಥಿಗಳು: 38 ವರ್ಷ ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳು: 40 ವರ್ಷ.

ಇದನ್ನೂ ಓದಿ:ಕೃಷಿ ಸಚಿವಾಲಯದಲ್ಲಿ ಭರ್ಜರಿ ನೇಮಕಾತಿ:  7 ನೇ ವೇತನ ಆಯೋಗದ ಪ್ರಕಾರ ಸಂಬಳ..ಇಲ್ಲಿದೆ ಮಾಹಿತಿ

ಸಂಬಳ 

ಪ್ರಥಮ ದರ್ಜೆ ಸಹಾಯಕರು : ರೂ.27650-52650.
ದ್ವಿತೀಯ ದರ್ಜೆ ಸಹಾಯಕರು : ರೂ.21400-42000.
ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್) : ರೂ.43100-83900.
ಕಿರಿಯ ಅಭಿಯಂತರರು (ಸಿವಿಲ್): ರೂ.33450-62600.

ಇದನ್ನೂ ಓದಿ:Aam Aadmi Bima Yojana:ಕೂಲಿ ಕಾರ್ಮಿಕರಿಗೆ 75 ಸಾವಿರ ವಿಮೆ..ಅರ್ಹರು ಯಾರು..?

ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳು : ರೂ.750.
ಹಿಂದುಳಿದ ವರ್ಗದ ಅಭ್ಯರ್ಥಿಗಳು: ರೂ.750.
ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳು: ರೂ.375.
ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಆದರೆ ಪ್ರೊಸೆಸಿಂಗ್ ಫೀಸ್ ಎಂದು ರೂ.250 ಪಾವತಿಸಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಮೀಸಲಾತಿ ಪ್ರಮಾಣ ಪತ್ರಗಳು
ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
ಆಧಾರ್ ಕಾರ್ಡ್
ಶೈಕ್ಷಣಿಕ ಅರ್ಹತೆಗಳ ಅಂಕಪಟ್ಟಿಗಳು

ಅಧಿಕೃತ ನೋಟಿಫಿಕೇಶನ್: ಇಲ್ಲಿ ಕ್ಲಿಕ್‌ ಮಾಡಿ
ಅರ್ಜಿ ಲಿಂಕ್:ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ:KPSC : ಅರಣ್ಯ ಇಲಾಖೆಯಿಂದ ACF ನೇಮಕಾತಿ; 62,600 ಸಂಬಳ!

Published On: 29 March 2022, 10:00 AM English Summary: KEA FDA SDA RECRUITMENT KEA

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.