1. ಸುದ್ದಿಗಳು

Kisan Credit Card: ಕಿಸಾನ್ ಕ್ರೆಡಿಟ್ ಕಾರ್ಡ್‌ ಎಂದರೇನು, ಯಾರೆಲ್ಲ ಇದಕ್ಕೆ ಅರ್ಹರು ಇಲ್ಲಿದೆ ಸಂಪೂರ್ಣ ಮಾಹಿತಿ!

Hitesh
Hitesh
Kisan Credit Card: What is Kisan Credit Card, Who is Eligible Here is complete information!

ರೈತರಿಗೆ ಉಪಯೋಗವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪರಿಚಯಿಸಿದೆ.

ರೈತರನ್ನು ಗಮನದಲ್ಲಿ ಇರಿಸಿಕೊಂಡು ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪೈಕಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮಹತ್ವದಾಗಿದೆ.

ಅತಿವೃಷ್ಟಿ ಹಾಗೂ ಅನಾವೃಷ್ಟಿ ಸೇರಿದಂತೆ ವಿವಿಧ ಸಮಸ್ಯೆಗಳು ಅಲ್ಲದೇ ಬೆಳೆ ಹಾನಿಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರ ಸಮಸ್ಯೆಗೆ ಸ್ಪಂದಿಸಲು ಈ ಯೋಜನೆಯು ಸಹಕಾರಿ ಆಗಿದೆ. 

ಈ ರಾಜ್ಯದಲ್ಲಿ ನಿರುದ್ಯೋಗಿ ಯುವಕರಿಗೆ ಸಿಗಲಿದೆ ಮಾಸಿಕ 2,500 ಸಾವಿರ!

ಪ್ರತಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಮೂರು ವರ್ಷಗಳ ಕಾಲ ಮಾನ್ಯವಾಗಿರುತ್ತದೆ. ಬೆಳೆಯ ಕಟಾವಿನ ಬಳಿಕ ಸಾಲದ ಮರುಪಾವತಿ ಮಾಡಬೇಕಾಗುತ್ತದೆ. ಈ ಯೋಜನೆಯಡಿ ರೈತರು ಯಾವುದೇ ಅಡಮಾನ ಇಲ್ಲದೆ 1.6 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಬಹುದು ಎನ್ನುವುದು ವಿಶೇಷವಾಗಿದೆ.

ರೈತರು ತಮ್ಮ ಹೊಲಗಳಿಗೆ ಬಿತ್ತನೆ ಮಾಡುವುದು, ಬೆಳೆ ಪೋಷಣೆ, ಬೆಳೆಗಳಿಗೆ ರಸಗೊಬ್ಬರ ಹಾಕುವುದು ಮೊದಲಾದ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಲು ಕಿಸಾನ್ ಕ್ರೆಡಿಟ್‌ ಕಾರ್ಡ್‌(ಕೆಸಿಸಿ) ಬಳಸಬಹುದು.

ಬಜೆಟ್ 2023: ಮಹಿಳೆಯರಿಗೆ ಉಳಿತಾಯ ಖಾತೆಯ ಮೂಲಕ 7.5% ಬಡ್ಡಿ! 

ಕೆಸಿಸಿಯು ಅಂದಾಜು 50 ಸಾವಿರದವರೆಗೆ ವಿಮೆಯನ್ನು ಕಲ್ಪಿಸುತ್ತದೆ . ವ್ಯಕ್ತಿಯು ಮರಣ ಹೊಂದಿದಾಗ ಅಥವಾ ಅಂಗಾಂಗ ಹಾನಿಯಾದರೆ ವಿಮೆ ಸೌಲಭ್ಯ ಸಿಗುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಹೇಗೆ ಅರ್ಜಿ ಸಲ್ಲಿಸುವುದು, ಯಾವೆಲ್ಲ ದಾಖಲೆಗಳು ಬೇಕು, ಬಡ್ಡಿದರ ಎಷ್ಟಿದೆ ?

  • ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾದ ಅರ್ಹತೆ
  • ಕಿಸಾನ್‌ ಕಾರ್ಡ್ ಪಡೆಯಲು, ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು.
  • ಕೃಷಿ ಮಾಡುವವರೇ ಭೂಮಿಯ ಮಾಲೀಕರು, ರೈತರು ಆಗಿರಬೇಕು. ಹಾಗೆಯೇ ಗುಂಪಿನ ಸದಸ್ಯರು ಸಹ ಆಗಿರಬೇಕು.  
  • ಗುಂಪಲ್ಲಿ ಮಾಲೀಕರು ಮತ್ತು ರೈತರು ಇರಬೇಕು.
  • ಸೆಲ್ಫ್ ಹೆಲ್ಪ್ ಗ್ರೂಪ್ (ಎಸ್‌ಎಚ್‌ಜಿ) ಅಥವಾ ಜಾಯಿಂಟ್ ಲಯಿಬಿಲೆಟಿ ಗ್ರೂಪ್ (ಜೆಎಲ್‌ಜಿ) ರೈತರನ್ನು ಹೊಂದಿರಬೇಕು.
  • ಈ ಕಾರ್ಡ್ ಅನ್ನು ರೈತರು, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಪಡೆಯಬಹುದು.

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದೇನು,ಬಜೆಟ್‌ ಹೈಲೆಟ್ಸ್‌ ಇಲ್ಲಿದೆ!

ಕಿಸಾನ್‌ ಕಾರ್ಡ್‌ಗೆ ಅಗತ್ಯವಿರುವ ದಾಖಲೆಗಳು

  • ಗುರುತಿನ ಚೀಟಿಯಾದಂತಹ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ಕಾರ್ಡ್.
  • ಅದೆ ರೀತಿ, ವಿಳಾಸ ಪುರಾವೆಯಾಗಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ನೀಡಬೇಕು.
  • ರೈತರು ಸಾಗುವಳಿ ಮಾಡುವ ಜಮೀನಿನ ದಾಖಲೆ
  • ಅರ್ಜಿದಾರರ ಒಂದು ಪಾಸ್‌ಪೋರ್ಟ್‌ ಗಾತ್ರದ ಫೋಟೊ
  • ಬ್ಯಾಂಕ್ ದಾಖಲೆಯಂತಹ ಇತರೆ ಪ್ರಮುಖ ದಾಖಲೆ
  • ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ಇರಬೇಕು 

ಕೇಂದ್ರ ಬಜೆಟ್‌ 2023 ಮಹಿಳೆಯರಿಗೆ ಕಹಿಸುದ್ದಿ: ಚಿನ್ನ, ಬೆಳ್ಳಿ ದರ ತುಟ್ಟಿ! ಯಾವೆಲ್ಲ ವಸ್ತುಗಳ ಬೆಲೆ ಏರಿಕೆ, ಇಳಿಕೆ ಇಲ್ಲಿದೆ ವಿವರ

ಕೆಸಿಸಿಗೆ ಅರ್ಜಿ ಸಲ್ಲಿಕೆಯ ಹಂತಗಳು ಇಲ್ಲಿವೆ

  • ಹಂತ 1: ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಹಂತ 2: ಕಿಸಾನ್ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಮಾಡಿಕೊಳ್ಳಿರಿ.
  • ಹಂತ 3: ಅರ್ಜಿ ಸಲ್ಲಿಸುವ ಪೇಜ್‌ಗೆ ರಿಡೈರೆಕ್ಟ್ ಆಗಲಿದೆ, ಅಲ್ಲಿ Apply  ಎಂಬ ಆಯ್ಕೆ ಮಾಡಿ.
  • ಹಂತ 4: ನಂತರ ಬೇಕಾದ ದಾಖಲೆಗಳನ್ನು ಭರ್ತಿ ಮಾಡಿ, Submit ಕ್ಲಿಕ್ ಮಾಡಿರಿ.
  • ಹಂತ 5: ಅರ್ಜಿ ಸಲ್ಲಿಕೆಯಾದ ಬಳಿಕ ರೆಫೆರೆನ್ಸ್ ಸಂಖ್ಯೆ ಸಿಗಲಿದೆ.
  • ಹಂತ 6: ಇತರೆ ಪ್ರಕ್ರಿಯೆಗಾಗಿ ಬ್ಯಾಂಕ್ ನಿಮ್ಮನ್ನು  ಸಂಪರ್ಕಿಸಲಿದೆ. 

 

ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್‌: ಕೃಷಿ ಕ್ಷೇತ್ರಕ್ಕೆ ಉತ್ತೇಜನದ ನಿರೀಕ್ಷೆ   

Published On: 02 February 2023, 11:39 AM English Summary: Kisan Credit Card: What is Kisan Credit Card, Who is Eligible Here is complete information!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.