ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕೆಲವೇ ನಿಮಿಷಗಳ ಕೆಲಸ.
ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಪ್ರಕ್ರಿಯೆಯನ್ನು ಮಾರ್ಚ್ 31ರ ಒಳಗಾಗಿ ಮಾಡದೆ ಇದ್ದರೆ,
ನೀವು ಬರೋಬ್ಬರಿ 10,000 ಸಾವಿರ ದಂಡ ಪಾವತಿ ಮಾಡಬೇಕು.
ಆನ್ಲೈನ್ನ ಮೂಲಕ ನೀವು ಕೆಲವೇ ಕ್ಷಣಗಳಲ್ಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದಾಗಿದೆ.
ಆನ್ಲೈನ್ನಲ್ಲಿ ಪ್ಯಾನ್-ಆಧಾರ್ ಲಿಂಕ್ ಮಾಡುವ ಸುಲಭವಾದ ವಿಧಾನ ಇಲ್ಲಿದೆ.
- ನೀವು ಮೊದಲಿಗೆ ಇದಕ್ಕೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ಗೆ ಭೇಟಿ ನೀಡಬೇಕು.
- ಅದಕ್ಕೆ ಈ ಲಿಂಕ್ ಬಳಸಿ: https://incometaxindiaefiling.gov.in/
- ಇದಕ್ಕೆ ಪ್ಯಾನ್ ಸಂಖ್ಯೆ (PAN) ನಿಮ್ಮ ಬಳಕೆದಾರ ID ಎಂದು ಪರಿಗಣಿಸುತ್ತದೆ.
- ಇದಾದ ನಂತರದಲ್ಲಿ ಬಳಕೆದಾರ ಐಡಿ, ಪಾಸ್ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿದ ಲಾಗಿನ್ ಆಗಬೇಕು.
- PANನಲ್ಲಿ ಹುಟ್ಟಿದ ದಿನಾಂಕ ಮತ್ತು ಲಿಂಗ ವಿವರಗಳನ್ನು ದಾಖಲಿಸಬೇಕು
- ಈ ಪ್ರಕ್ರಿಯೆಗಳು ಮುಗಿದ ನಂತರದಲ್ಲಿ ಈ ವಿವರಗಳನ್ನು ನಿಮ್ಮ ಆಧಾರ್ ವಿವರಗಳೊಂದಿಗೆ ಹೊಂದಿಸಬೇಕು.
- ಈ ಹಂತದಲ್ಲಿ ನಿಖರವಾದ ಮಾಹಿತಿಯನ್ನು ಹಾಕಬೇಕು. ಒಂದೊಮ್ಮೆ ಎರಡೂ ದಾಖಲೆಯಲ್ಲಿನ ಅಂಶಗಳು ಸರಿಯಾಗಿ ಕೂಡದೇ ಇದ್ದರೆ,
- ನಿಖರವಾದ ಮಾಹಿತಿಯನ್ನು ದಾಖಲಿಸಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಂಪರ್ಕಿಸಿ ಬಟನ್ನ ಮೇಲೆ ಕ್ಲಿಕ್ ಮಾಡಬೇಕು.
- ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಆಗಿದೆ ಎಂಬ ಪಾಪ್-ಅಪ್ ಸಂದೇಶ ಕಾಣಿಸುತ್ತದೆ.
- ಪ್ಯಾನ್ ಕಾರ್ಡ್ ಆಧಾರ್ನೊಂದಿಗೆ ಲಿಂಕ್ ಮಾಡಲು
- https://www.utiitsl.com/ ಅಥವಾ https://www.egov-nsdl.co.in/ ಗೆ ಭೇಟಿ ನೀಡಬೇಕು.
- ಕೇಂದ್ರ ಸರ್ಕಾರವು ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆಗೆ ಅಂತಿಮ ಗಡುವು ನೀಡಿದೆ.
ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ಅನ್ನು ಮಾರ್ಚ್ 31ರ ಒಳಗಾಗಿ ಲಿಂಕ್ ಮಾಡದಿದ್ದರೆ, ಬರೋಬ್ಬರಿ 10,000 ಸಾವಿರ ರೂ. ದಂಡ ಪಾವತಿ ಮಾಡಬೇಕಾಗುತ್ತದೆ.
ಅಲ್ಲದೇ ಲಿಂಕ್ ಮಾಡದೆ ಇದ್ದರೆ ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ನ ನಂಬರ್ ಸಹ ನಿಷ್ಕ್ರೀಯವಾಗಲಿದೆ.
ಹೊಸ ಪ್ಯಾನ್ ಕಾರ್ಡ್ ಮಾಡಬೇಕಾದರೂ 10,000 ಸಾವಿರ ರೂಪಾಯಿ ಪಾವತಿ ಮಾಡಿಯೇ ಹೊಸ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ಯಾನ್-ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕ ಸಮೀಪಿಸುತ್ತಿದೆ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 1000 ರೂಪಾಯಿ ದಂಡದೊಂದಿಗೆ 31 ಮಾರ್ಚ್ 2023 ರ ಗಡುವನ್ನು ನೀಡಲಾಗಿದೆ.
ಒಂದೊಮ್ಮೆ ನೀವು ಮಾರ್ಚ್ 31, 2023ರ ಒಳಗಾಗಿ ಪ್ಯಾನ್ ಕಾರ್ಡ್-ಆಧಾರ್ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.
Share your comments