ಕೇವಲ ಎರಡು ತಿಂಗಳ ಅಂತರದಲ್ಲಿ ಸಿಲೆಂಡರ್ ದರ ಸುಮಾರು 200 ರುಪಾಯಿ ಹೆಚ್ಚಳವಾಗಿದೆ. ಇದರಿಂದಾಗಿ ಬಳಕೆದಾರರಿಗೆ ಶಾಕ್ ನೀಡಿದಂತಾಗಿದೆ. ಇದರ ಮಧ್ಯೆ ಗ್ರಾಹಕರಿಗೆ ಬರುತಿದ್ದ ಸಬ್ಸಿಡಿ ದರ ಕೂಡ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದೆ.
ಒಂದೆಡೆ ಪೆಟ್ರೋಲ್ ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚಳವಾಗುತ್ತಿದ್ದರೆ ಮತ್ತೊಂದೆಡೆ ಸಿಲೆಂಡರ್ ಬೆಲೆ ಹೆಚ್ಚಳ. ಇನ್ನೆಂದೆಡೆ ಅಡುಗೆ ಎಣ್ಣೆ ಬೆಲೆಯೂ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ..
ಒಟ್ಟಾರೆ ಫೆಬ್ರವರಿ ತಿಂಗಳಲ್ಲೇ 100 ರೂಪಾಯಿ ಏರಿಕೆ ಕಂಡಿದೆ. ಇನ್ನೂ ಡಿಸೆಂಬರ್ ತಿಂಗಳಲ್ಲಿ 100 ರೂಪಾಯಿ ಹೆಚ್ಚಾಗಿತ್ತು.
ಫೆ. 4 ಮತ್ತು 14 ರಂದು ಅಡುಗೆ ಅನಿಲ ಸಿಲಿಂಡರ್ ದರ 50 ರೂಪಾಯಿಯಂತೆ ಎರಡು ಸಲ ಹೆಚ್ಚಳವಾಗಿತ್ತು. ಈಗ 25 ರೂಪಾಯಿ ಹೆಚ್ಚಳವಾಗಿ ದೇಶದ ಇತಿಹಾಸದಲ್ಲೇ ಅಡುಗೆ ಅನಿಲ ದುಬಾರಿಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಅಡುಗೆ ಅನಿಲ ಮತ್ತು ಪೆಟ್ರೋಲ್-ಡೀಸೆಲ್ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ದರವನ್ನು ಕಡಿಮೆ ಮಾಡುವತ್ತ ಕೇಂದ್ರ ಸರ್ಕಾರವಾಗಲಿ ಹಾಗೂ ರಾಜ್ಯಸರ್ಕಾರಗಳಾಗಲಿ ತೆರಿಗೆಗಳನ್ನು ಕಡಿಮೆ ಮಾಡುವ ಗೋಜಿಗೆ ಹೋಗುತ್ತಿಲ್ಲ.ಇದು ಪರೋಕ್ಷವಾಗಿ ಗ್ರಾಕರಿಗೆ ಹೊರೆ ಆಗಲಿದೆ.
14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ ಈಗ ದೆಹಲಿಯಲ್ಲಿ 794ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಇದರ ಬೆಲೆ 797 ರುಪಾಯಿ ಆಗಿದೆ. ಇದಕ್ಕಿಂತ ಮೊದಲು 772 ಇತ್ತು.ಒಂದೇ ತಿಂಗಳಲ್ಲಿ ಒಟ್ಟು 100 ರೂಪಾಯಿ ಏರಿಕೆಯಾಗಿದೆ.
ಸಿಲೆಂಡರ್ ದರ: ನವೆಂಬರ್ ತಿಂಗಳಲ್ಲಿ 597 ರೂಪಾಯಿ, ಡಿಸೆಂಬರ್ ತಿಂಗಳಲ್ಲಿ 697 ರೂಪಾಯಿ, ಜನವರಿ ತಿಂಗಳಲ್ಲಿ 697 ರೂಪಾಯಿ, ಫೆಬ್ರವರಿ ತಿಂಗಳಲ್ಲಿ 797 ರೂಪಾಯಿ ಹೆಚ್ಚಾಗಿದೆ.
Share your comments