ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಎ.ಬಿ. ಡಿವಿಲಿಯರ್ಸ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ವಿರುದ್ಧ ಆರ್ ಸಿಬಿ 38 ರನ್ ಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಐಪಿಎಲ್ ನಲ್ಲಿ ಆರ್ ಸಿಬಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಹೊಸ ಹುರುಪು ಕಂಡುಕೊಳ್ಳುವ ಮೂಲಕ ಬ್ಯಾಕ್ ಟು ಬ್ಯಾಕ್ ಜಯ ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೀಗ ಹೊಸ ಹುರುಪು ಕಾಣುತ್ತಿದೆ. ಗ್ಲೇನ್ ಮ್ಯಾಕ್ಸವೆಲ್ ಹಾಗೂ ಎಬಿ ಡಿವಿಲಿಯರ್ಸ್ ಉತ್ತಮ ಫಾಮ್ನಲ್ಲಿರುವುದರಿಂದ ಜಯದ ಮೇಲೆ ಜಯ ಗಳಿಸುತ್ತಿದೆ. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿದೆ.
ಭಾನುವಾರ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 204 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ಆರ್ಭಟಿಸಿದ ಮ್ಯಾಕ್ಸ್‌ವೆಲ್, ಎಬಿಡಿ
ಹತ್ತು ರನ್ ಗಳಿಸಸೋ ಮೊದಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್‌ಸಿಬಿ ತಂಡ ಎಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುತ್ತದೆಯೋ ಎಂಬ ಆತಂಕ ಅಭಿಮಾನಿಗಳದ್ದಾಗಿತ್ತು. ಆದರೆ, ಆಸರೆಯಾಗಿ ನಿಂತ 'ಬಿಗ್ ಶೋ' ಗ್ಲೆನ್ ಮ್ಯಾಕ್ಸ್‌ವೆಲ್ 49 ಎಸೆತಗಳಲ್ಲಿ 9 ಫೋರ್ ಮತ್ತು 3 ಸಿಕ್ಸರ್ ಬಾರಿಸಿ ತಂಡಕ್ಕೆ ಬೃಹತ್ ಮೊತ್ತ ತಂದುಕೊಟ್ಟರು. ಎಬಿ ಡಿಲಿವಿಲಿಯರ್ಸ್ 34 ಎಸೆತಗಳಲ್ಲಿ 9 ಬೌಂಡರಿ ಮೂರು ಸಿಕ್ಸರ್ ಸಿಡಿಸಿ ಅಜೇಯ 76 ರನ್ ಗಳಿಸಿದರು. ಪಡಿಕ್ಕಲ್ 25 ರನ್ ಗಳಿಸಿದರು.
ಬೃಹತ್ ಮೊತ್ತದ ಸವಾಲಿನ ಬೆನ್ನಹತ್ತಿದ ಕೆಕೆ ಅರ್ 20 ಟವರ್ ಗಳಲ್ಲಿ ಎಂಟು ವಿಕೆಟ್ ಗೆ 166 ರನ್ ಗಳಿಸಿಸೋಲೊಪ್ಪಿಕೊಂಡಿತು. ಆಂಡ್ರಿ ರಸೆಲ್ 31, ಮಾರ್ಗನ್ 29, ರಾಹುಲ್ ತ್ರಿಪಾಠಿ 25 ಹಾಗೂ ಶಕೀಬ್ ಹಸನ್ 26 ರನ್ ಗಳಿಸಿದರು. ಆದರೆ ಗೆಲುವಿಗೆ ಅಗತ್ಯವಿದ್ದ ಆಟವನ್ನು ಕೆಕೆಆರ್ ಆಡಲಿಲ್ಲ.
Share your comments