ನಮ್ಮ ಕರ್ನಾಟಕದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗುಂಡಮನತ್ತ ಗ್ರಾಮದ ಎ.ವಿ ರತ್ನಮ್ಮ ಅವರಿಗೆ ಕೃಷಿ ಜಾಗರಣ ಸಂಸ್ಥೆ ಪ್ರದಾನ ಮಾಡುವ ಮಹೀಂದ್ರ ಟ್ರಾಕ್ಟರ್ಸ್ ಪ್ರಯೋಜಿಸುವ ಬಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ 2023 RFOI Award ಪ್ರಶಸ್ತಿ (Billionaire Farmer of India 2023 Award) ಸಂದಿದೆ.
ಕೃಷಿಜಾಗರಣವು ರೈತರು ಸಹ ಶ್ರೀಮಂತರಾಗಬಹುದು. ಕೋಟಿಗಳಲ್ಲಿ ಮಾತನಾಡಬಹುದು ಎನ್ನುವುದನ್ನು ನಂಬುತ್ತದೆ. ದೇಶಕ್ಕೆ ಅನ್ನ ನೀಡುವ ಕೈಗಳನ್ನು ಗುರುತಿಸುವ ಪ್ರಯತ್ನ ನಮ್ಮದಾಗಿದೆ. ಇದೇ ಕಾರಣಕ್ಕಾಗಿ ಮಿಲಿಯೇನರ್ ಫಾರ್ಮರ್ ಆಫ್ ಇಂಡಿಯಾ 2023ಅನ್ನು ಆಯೋಜಿಸಲಾಗಿದೆ. ಇದಕ್ಕೆ ಮಹೀಂದ್ರ ಟ್ರಾಕ್ಟರ್ಸ್ ಮುಖ್ಯ ಪ್ರಾಯೋಜಿಕತ್ವ ವಹಿಸಿದ್ದು, ಹಲವು ಸಂಸ್ಥೆಗಳು ಸಹಕಾರ ನೀಡಿವೆ. RFOI ಅಂದರೆ ರಿಚೆಸ್ಟ್ ಫಾರ್ಮರ್ ಆಫ್ ಇಂಡಿಯಾ ಹಾಗೂ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ 2023ರನ್ನು ನಾವು ಪರಿಚಯಿಸಿದ್ದೇವೆ. ರೈತರಿಗೆ ಪ್ರಶಸ್ತಿ ನೀಡುವ ಕೃಷಿ ಜಾಗರಣದ ಈ ಪ್ರಯತ್ನ ದೇಶದಲ್ಲೇ ಮೊದಲು ಎನ್ನುವುದು ನಮ್ಮ ಹೆಮ್ಮೆ.
ಎಂ.ಸಿ ಡೊಮಿನಿಕ್ ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಮುಖ್ಯ ಸಂಪಾದಕ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್ ಡೈರೆಕ್ಟರ್ ಶೈನಿ ಡೊಮಿನಿಕ್.
ದೇಶದ ಹಲವು ಜಿಲ್ಲೆಗಳಿಂದ ಈ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರೈತ ಮಹಿಳೆಗೆ ಈ ಪ್ರಶಸ್ತಿ ಪ್ರದಾನವಾಗಿದೆ.
ಕೃಷಿ ಜಾಗರಣ ಸಂಸ್ಥೆಯು ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಹಾಗೂ ಬಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ 2023
ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಕೃಷಿ ಜಾಗರಣ ಸಂಸ್ಥೆಯ (Awarding Millionaire Farmer of India and Billionaire Farmer of India 2023) ಪ್ರಶಸ್ತಿ
ಪ್ರದಾನಕ್ಕೆ ದೇಶದ ಹಲವು ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪ್ರಶಸ್ತಿ ಪ್ರದಾನದ ಮುಖ್ಯ ಉದ್ದೇಶವು ರೈತರು ಸಹ ಶ್ರೀಮಂತರಾಗಬಹುದು. ಅಲ್ಲದೇ ಕೃಷಿ ಮಾಡುವ ಮೂಲಕವೂ ಮಿಲಿಯನೇರ್ ಹಾಗೂ ಬಿಲಿಯನೇರ್
ಮಟ್ಟದಲ್ಲಿ ಅಂದರೆ ಕೋಟಿಗಳಲ್ಲಿ ಮಾತನಾಡಬಹುದು ಎನ್ನುವುದು ಇದರ ಆಶಯವಾಗಿದೆ. ಕೃಷಿ ಜಾಗರಣ ಸಂಸ್ಥೆಯ ಪ್ರದಾನ
ಸಂಪಾದಕ ಹಾಗೂ ಮುಖ್ಯಸ್ಥರಾದ ಎಂ ಸಿ ಡೊಮಿನಿಕ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶೈನಿ ಡೊಮಿನಿಕ್ ಅವರ ಆಶಯವಾಗಿದೆ.
ಎ.ವಿ ರತ್ನಮ್ಮ ಅವರು ಅಳವಡಿಸಿಕೊಂಡ ಕೃಷಿ ಪದ್ಧತಿ:
ಎ.ವಿ ರತ್ನಮ್ಮ ಅವರು ವಿಭಿನ್ನವಾದ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ರತ್ನಮ್ಮ ಅವರು 2 ಎಕರೆಯಲ್ಲಿ ಮಾವಿನ ಕೃಷಿಯನ್ನು ಮಾಡುತ್ತಿದ್ದಾರೆ. ಒಂದು ಎಕರೆ ವ್ಯಾಪ್ತಿಯಲ್ಲಿ ಸಿರಿಧಾನ್ಯಗಳ ಬೆಳೆ ಬೆಳೆಯುತ್ತಿದ್ದಾರೆ.
ಮತ್ತೊಂದು ಎಕರೆಯಲ್ಲಿ ರೇಷ್ಮೆ ಕೃಷಿ ಸೇರಿದಂತೆ ಹಲವು ಮಿಶ್ರ ಕೃಷಿಯನ್ನು ಮಾಡುತ್ತಿದ್ದಾರೆ.
ಅಲ್ಲದೇ ಕೋಲಾರದ ICAR-KVK ನೀಡಿದ ಅತ್ಯುತ್ತಮವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ.
ಕೋಲಾರದ ಕೆವಿಕೆಯಿಂದ ಆಯೋಜಿಸಿದ್ದ ಕ್ಯಾಂಪಸ್ ತರಬೇತಿಯಲ್ಲಿ ಐದು ದಿನಗಳ ವೃತ್ತಿಪರ ತರಬೇತಿಯನ್ನು ಅವರು ಪಡೆದಿದ್ದಾರೆ.
ಮಾದರಿ ಕೃಷಿ ರೈತ ಮಹಿಳೆ
ಎ.ವಿ ರತ್ನಮ್ಮ ಅವರು ಸಿರಿಧಾನ್ಯದ ಕೃಷಿಯ ಮೂಲಕ ಮನ್ನಣೆ ಗಳಿಸಿದ್ದಾರೆ. ಇರುವ ನಾಲ್ಕು ಎಕರೆ ಕೃಷಿ ಜಮೀನಿನ ವ್ಯಾಪ್ತಿಯಲ್ಲಿ ಹಲವು ಸಾಧನೆ
ಮಾಡಿದ್ದು, ಹಲವು ರೈತರಿಗೆ ಮಾದರಿಯಾಗಿದ್ದಾರೆ. ಮೌಲ್ಯಾಧರಿತ ಕೃಷಿಯ ಮೂಲಕ ಮಹಿಳಾ ಸಬಲೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಸಿರಿಧಾನ್ಯಗಳ ಉಪಯುಕ್ತತತೆ ಹಾಗೂ ಅದರ ಮಹತ್ವವನ್ನು ಎಲ್ಲ ರೈತರಿಗೂ ಪರಿಚಯಿಸುತ್ತಿದ್ದಾರೆ.
ಉಪ್ಪಿನಕಾಯಿ ಹಾಗೂ ಮಸಾಲಾ ಪುಡಿ ಉತ್ಪನ್ನ
ಎ.ವಿ ರತ್ನಮ್ಮ ಅವರು ಕೃಷಿಯೊಂದಿಗೆ ಉಪಕಸುಬುಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ಕೃಷಿಯೊಂದಿಗೆ ಸಿರಿಧಾನ್ಯಗಳ ಬೆಳೆ ಹಾಗೂ ಸಂಸ್ಕರಣೆ, ಮಾವಿನ ಕಾಯಿ, ಅಲೋನ ಹಾಗೂ ಟೊಮಾಟೊಗಳನ್ನು ಬಳಸಿ ಉಪ್ಪಿನಕಾಯಿ ತಯಾರಿಕೆ
ಹಾಗೂ ಮಸಾಲಾ ಪುಡಿ ಉತ್ಪನ್ನಗಳು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಅವರು ICAR-IIHR, ಬೆಂಗಳೂರು, ICAR-IIMR ಹೈದರಾಬಾದ್
ಮತ್ತು UHS ಬಾಗಲಕೋಟೆಯಿಂದ ಹಲವು ಉಪಯುಕ್ತ ಹಾಗೂ ಮಾಹಿತಿಗಳನ್ನು ಅವರ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದಾರೆ.
ರೈತರ ಉದ್ಯಮಶೀಲತೆ ಮತ್ತು ಬಿಲಿಯನೇರ್ ವಾರ್ಷಿಕ ಆದಾಯ ಸೃಷ್ಟಿಸಿ:
ಐಸಿಎಆರ್-ಕೆವಿಕೆ ಕೋಲಾರ (ICAR-KVK, Kolar)ದ ಸಲಹೆಯ ಆಧಾರದ ಮೇಲೆ ಕಡಿಮೆ ವೆಚ್ಚದಲ್ಲಿ (Ripening Chamber) ರೈಪನಿಂಗ್ ಚೇಂಬರ್
ಅಳವಡಿಸಿಕೊಳ್ಳುವ ಸಲಹೆಯನ್ನು ಪಡೆದಿದ್ದಾರೆ. ತಮ್ಮ ಸ್ವಂತ ತೋಟದ ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣಾಗಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿಕೊಂಡಿದ್ದಾರೆ.
ಎಫ್‌ಪಿಒ, ಎಸ್‌ಎಚ್‌ಜಿ ಸದಸ್ಯರಿಂದ ಕಚ್ಚಾ ಮಾವಿನ ಹಣ್ಣುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ.
3 ಕೆಜಿ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಬ್ರ್ಯಾಂಡಿಂಗ್ ಮಾಡಿದ ನಂತರ ಮಾಗಿದ ಮಾವಿನಹಣ್ಣುಗಳನ್ನು ಬೆಂಗಳೂರಿನಲ್ಲಿ
ಅಪಾರ್ಟ್ಮೆಂಟ್ ಮತ್ತು ಆನ್‌ಲೈನ್ ಮಾರ್ಕೆಟಿಂಗ್ ಮೂಲಕ ಮಾರಾಟ ಮಾಡುವುದರ ಮೂಲಕ ಪ್ರಸಿದ್ಧಿ ಗಳಿಸಿದ್ದಾರೆ.
ಎ.ವಿ ರತ್ನಮ್ಮ ಅವರು 2018-19ರಿಂದ ಸಿರಿಧಾನ್ಯಗಳ ಸಂಸ್ಕರಣೆಯನ್ನು ಪ್ರಾರಂಭಿಸಿದರು.
ಈ ಹಂತದಲ್ಲಿ ಸರ್ಕಾರದ ನೆರವನ್ನೂ ಸಹ ಪಡೆದುಕೊಂಡರು. ಕೃಷಿ ಇಲಾಖೆಯು ಸಹ ಆರ್ಥಿಕವಾಗಿ ಸಹಕಾರ ನೀಡಿದೆ.
ಆದಾಯ ಸೃಷ್ಟಿಗೆ ಹಲವು ಮಾರ್ಗ !
ಎ.ವಿ ರತ್ನಮ್ಮ ಅವರು ವಾರ್ಷಿಕ 1.18 ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ.
ಕೃಷಿ ಉತ್ಪನ್ನಗಳ ಜೊತೆಗೆ ಸಿರಿಧಾನ್ಯಗಳ ಉತ್ಪಾದನೆ ಹಾಗೂ ಸಿರಿಧಾನ್ಯಗಳ ಸಂಸ್ಕರಣೆಯಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.
ಸಿರಿಧಾನ್ಯ ಹಾಗೂ ಸಿರಿಧಾನ್ಯ ಮಾಲ್ಟ್, ಸಿರಿಧಾನ್ಯಗಳ ಉಪ ಮಿಶ್ರಣ ಹಾಗೂ ಸಿರಿಧಾನ್ಯದ ಸ್ವಚ್ಛತೆ ಮತ್ತು ಪ್ಯಾಕಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ.
ಸಿರಿಧಾನ್ಯ ದೋಸೆ ಮಿಶ್ರಣ ಮತ್ತು ಸಿರಿಧಾನ್ಯದ ಇಡ್ಲಿ ಮಿಶ್ರಣ ಮತ್ತು ಮಾವಿನ ಇತರ ಉತ್ಪನ್ನಗಳಾದ ಉಪ್ಪಿನಕಾಯಿ, ಅಲೋನ
ಉಪ್ಪಿನಕಾಯಿ, ಟೊಮೆಟೊ ಉಪ್ಪಿನಕಾಯಿ, ಮಸಾಲಾ ಪುಡಿ ಉತ್ಪನ್ನಗಳು ಮತ್ತು ಈ ಉತ್ಪನ್ನಗಳನ್ನು ತಮ್ಮ ಸ್ವಂತ ಬ್ರಾಂಡ್‌ನ
ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಎ.ವಿ ರತ್ನಮ್ಮ ಅವರು ವೇದಿಕ್ ಆಹಾರ ಉತ್ಪನ್ನಗಳ ಮೂಲಕ ದೇಶದಾದ್ಯಂತ ಅವರು ಗ್ರಾಹಕರನ್ನು ತಲುಪುತ್ತಿದ್ದಾರೆ.
ಹಲವು ಕೃಷಿ ವಿಧಾನಗಳಲ್ಲಿ ಭರ್ಜರಿ ಆದಾಯ
ಎ.ವಿ ರತ್ನಮ್ಮ ಅವರು ಹಲವು ಕೃಷಿ ವಿಧಾನದಲ್ಲಿ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಅವರಿಗೆ ಇರುವ ನಾಲ್ಕು ಎಕರೆ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳನ್ನು
ಬೆಳೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಸಿರಿಧಾನ್ಯ ಕೃಷಿ, ರೇಷ್ಮೆ ಕೃಷಿ, ಮಾವು ಬೆಳೆ
ಹಾಗೂ ಜಾನುವಾರು ಸಾಕಾಣಿಕೆ, ಮೀನುಗಾರಿಕೆ ಹಾಗೂ ವಿವಿಧ ಉದ್ಯಮದಲ್ಲೂ ಸೈ ಎನಿಸಿಕೊಂಡಿದ್ದಾರೆ.
ಇದರೊಂದಿಗೆ ಉಪ್ಪಿನಕಾಯಿ ಸಂಸ್ಕರಣಾ ಘಟಕವನ್ನೂ ಪ್ರಾರಂಭಿಸುವ ಮೂಲಕ ಕೃಷಿ ಉದ್ಯಮಿಯೂ ಆಗಿದ್ದಾರೆ.
ಎ.ವಿ ರತ್ನಮ್ಮ ಅವರಿಗೆ ಸಂದಿರುವ ಪ್ರಶಸ್ತಿ
ಕರ್ನಾಟಕದ ಕೋಲಾರದ ಅತ್ಯುತ್ತಮ ಕೃಷಿ ರೈತ ಮಹಿಳೆ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ
ಕೃಷಿ ಮಹಿಳಾ ಪ್ರಶಸ್ತಿ (UAS,GKVK) ಬೆಂಗಳೂರು (2018, 2020) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,
ಉದಯೋನ್ಮುಕ ಕೃಷಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
Share your comments