ಕಾವೇರಿ ನದಿಯೆಂದರೆ ಬಹುಪಾಲು ಜನರ ಜೀವನಾಡಿ. ಅದೆಷ್ಟೊ ಅಸಂಖ್ಯಾತ ಜನರಿಗೆ ಕುಡಿಯಲು ನೀರನ್ನು ಒದಗಿಸುವ ಮೂಲಕ ಹರಿಯುತ್ತಿರುವ ನದಿ. ಜನಗಳ ಜೊತೆಗೆ ಅದೆಷ್ಟೊ ತರದ ಜಲಚರ ಜೀವರಾಶಿಗಳಿಗೂ ತನ್ನ ಒಡಲಲ್ಲಿ ಜಾಗ ನೀಡಿತ್ತು. ಇಂತಹ ನದಿಯ ನೀರು ಇದೀಗ ಮೈಕ್ರೋಪ್ಲಾಸ್ಟಿಕ್ನ (Micro plastic) ಕೆಟ್ಟ ಅಂಶದಿಂದಾಗಿ ಜನ ಹಾಗೂ ನದಿಯಲ್ಲಿನ ಮೀನುಗಳಿಗೆ ದುಷ್ಪರಿಣಾಮ ಬೀರಲಿದೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.
ಇದನ್ನು ಓದಿರಿ:
ಮೀನುಗಾರರು ಹಾಗೂ ನೇಕಾರರ ಸಮುದಾಯಕ್ಕೆ ಬಂಪರ್ ಗಿಫ್ಟ್ ನೀಡಿದ ಸಿಎಂ ಬೊಮ್ಮಾಯಿ..!
ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!
ಮೈಕ್ರೊಪ್ಲಾಸ್ಟಿಕ್ನಂತಹ (Micro plastic) ಮಾಲಿನ್ಯಕಾರಕ ವಸ್ತುಗಳು ಕಾವೇರಿ ನದಿಯಲ್ಲಿರುವ ಮೀನುಗಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (IISC) ಹೊಸ ಸಂಶೋಧನಾ ಅಧ್ಯಯನ ಬಹಿರಂಗಪಡಿಸಿದೆ. 'ಇಕೋಟಾಕ್ಸಿಕಾಲಜಿ' ಮತ್ತು 'ಎನ್ವಿರಾನ್ಮೆಂಟಲ್ ಸೇಫ್ಟಿ' (Eco toxicology and Environmental Safety) ಜರ್ನಲ್ನಲ್ಲಿ ಪ್ರಕಟವಾದ ಈ ಸಂಶೋಧನಾ ವರದಿ, ಕಾವೇರಿ ನದಿಯಲ್ಲಿರುವ ಮೀನುಗಳ ಬೆಳವಣಿಗೆಗೆ ಮೈಕ್ರೋಪ್ಲಾಸ್ಟಿಕ್ (Micro plastic) ಹೇಗೆ ತೊಡಕಾಗಿದೆ ಎಂಬುದನ್ನು ವಿಸ್ತೃತವಾಗಿ ವಿವರಿಸಿದೆ.
ಈ ಹಾನಿಕಾರಕ ಅಂಶ ನೀರಿನ ಗುಣಮಟ್ಟ ಮತ್ತು ಮೀನುಗಳ ದೈಹಿಕ ವಿಕಾರಕ್ಕೆ ಸಂಬಂಧವಿದ್ದು, -ಮೈಕ್ರೋಪ್ಲಾಸ್ಟಿಕ್ (Micro plastic) ಮಾಲಿನ್ಯ ಮೀನುಗಳ ಬೆಳವಣಿಗೆಯನ್ನೇ ಕುಂಠಿತಗೊಳಿಸುತ್ತಿದೆ ಎಂದು ಈ ಸಂಶೋಧನಾ ವರದಿ ಎಚ್ಚರಿಸಿದೆ.
EPFO ಹೊಸ ಮಾರ್ಗಸೂಚಿ ರಿಲೀಸ್.. ಇಲ್ಲಿದೆ ಟ್ಯಾಕ್ಸ್ ಲೆಕ್ಕಾಚಾರ
ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !
ಈ ಕುರಿತು ಮಾತನಾಡಿರುವ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ IISC ಯ ಡಿಪಾರ್ಟಮೆಂಟ್ ಆಫ್ ಮಾಲಿಕ್ಯುಲರ್ ರಿಪ್ರೋಡಕ್ಷನ್ ಡೆವಲಪ್ಮೆಂಟ್ & ಜೆನಿಟಿಕ್ಸ್ (Department of Molecular Reproduction Development & Genetics) ವಿಭಾಗದ ಪ್ರಾಧ್ಯಾಪಕ ಉಪೇಂದ್ರ ನೊಂಗ್ತೊಂಬಾ, KRS ಅಣೆಕಟ್ಟಿನಲ್ಲಿ ನೀರಿನ ಮಾಲಿನ್ಯ ಮತ್ತು ಮೀನಿನ ಮೇಲೆ ಅದರ ಸಂಭಾವ್ಯ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ಅದರಿಂದಾಗುವ ಪರಿಣಾಮವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಪರೀಕ್ಷಾ ವಿಧಾನ:
ನೀರಿನ ಹರಿವಿನ ವಿಭಿನ್ನ ವೇಗಗಳೊಂದಿಗೆ ಮೂರು ವಿಭಿನ್ನ ಸ್ಥಳಗಳಿಂದ ನೀರಿನ ಮಾದರಿಗಳನ್ನು ಈ ತಂಡ ಸಂಗ್ರಹಿಸಿತು. ವೇಗವಾಗಿ ಹರಿಯುವ, ನಿಧಾನವಾಗಿ ಹರಿಯುವ ಮತ್ತು ನಿಶ್ಚಲ ನೀರಿನ ಮಾದರಿಗಳನ್ನು ಸ್ಥೂಲವಾಗಿ ಅಧ್ಯಯನಕ್ಕೆ ಒಳಪಡಿಸಿದಾಗ, ನೀರಿನ ಭೌತಿಕ ಮತ್ತು ರಾಸಾಯನಿಕ ಬದಲಾವಣೆಗಳನ್ನು ವೀಕ್ಷಣೆ ಮಾಡಲಾಯಿತು.
ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?
Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್ನಲ್ಲಿ ಘೋಷಣೆ
ಬಳಿಕ ರಾಮನ್ ಸ್ಪೆಕ್ಟ್ರೋಸ್ಕೋಪಿ (Raman spectroscopy) ಎಂಬ ತಂತ್ರಜ್ಞಾನದ ಸಹಾಯದಿಂದ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ಗಳನ್ನು ಪತ್ತೆ ಹಚ್ಚಲಾಯಿತು. ಪ್ಲಾಸ್ಟಿಕ್ನ ಸೂಕ್ಷ್ಮ ತುಣುಕುಗಳು ಸಾಮಾನ್ಯವಾಗಿ ಬರಿಗಣ್ಣಿಗೆ ಕಾಣುವುದಿಲ್ಲ. ಸೈಕ್ಲೋಹೆಕ್ಸಿಲ್ ಕ್ರಿಯಾತ್ಮಕ ಗುಂಪನ್ನು ಹೊಂದಿರುವ ವಿಷಕಾರಿ ರಾಸಾಯನಿಕಗಳು, ಜಲಚರಗಳ ಬೆಳವಣಿಗೆ ಮೇಲೆ ಭಾರೀ ದುಷ್ಪರಿಣಾಮ ಬೀರಬಲ್ಲವು ಎಂದು IISC ಸಂಶೋಧನಾ ತಂಡ ಪತ್ತೆಹಚ್ಚಿದೆ.
ಒಟ್ಟಿನಲ್ಲಿ ಕಾವೇರಿ ನದಿ ನೀರು ಕಲುಷಿತಗೊಳ್ಳುತ್ತಿರುವುದು ಕೇವಲ ಮನುಷ್ಯರಿಗೆ ಮಾತ್ರವಲ್ಲದೇ, ಜಲಚರಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂಬುದು IISC ಸಂಶೋಧನಾ ತಂಡದ ವರದಿಯಿಂದ ಬಹಿರಂಗವಾಗಿದೆ.
“ಸಾವಯವ ಆಹಾರ ರಫ್ತು ಭಾರತದ ಆರ್ಥಿಕತೆ ಬದಲಾಯಿಸಬಹುದು”- ಅಮಿತ್ ಶಾ
ಗುಡ್ನ್ಯೂಸ್: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..!
Share your comments