2022ರ ಸೆಪ್ಟೆಂಬರ್‌ನಲ್ಲಿ ಪ್ರಮುಖ ಖನಿಜಗಳ ಉತ್ಪಾದನಾ ಪ್ರಮಾಣ ಹೀಗಿದೆ. ತಿಳಿಯಲು ಇದನ್ನು ಓದಿರಿ
ಇನ್ನಷ್ಟು ಓದಿರಿ: ಸಿಎಂ ಬೊಮ್ಮಾಯಿಯಿಂದ ಸರ್ಕಾರಿ ನೌಕರರ ಪರಿಷ್ಕೃತ ವೇತನ ಪ್ರಕಟ; ಹಾಗಿದ್ರೆ ಇನ್ಮುಂದೆ ಎಷ್ಟಾಗಲಿದೆ ವೇತನ?
2022ರ ಸೆಪ್ಟೆಂಬರ್ ತಿಂಗಳಲ್ಲಿ ಗಣಿಗಾರಿಕೆ ಮತ್ತು ಕ್ವಾರಿ ವಲಯದ ಖನಿಜ ಉತ್ಪಾದನೆಯ ಸೂಚ್ಯಂಕವು (ಮೂಲ: 2011-12=100) 99.5ರಷ್ಟಿದ್ದು, 2021ರ ಸೆಪ್ಟೆಂಬರ್ ತಿಂಗಳ ಮಟ್ಟಕ್ಕೆ ಹೋಲಿಸಿದರೆ ಶೇ. 4.6ರಷ್ಟು ಹೆಚ್ಚಾಗಿದೆ.
ʻಇಂಡಿಯನ್ ಬ್ಯೂರೋ ಆಫ್ ಮೈನ್ಸ್ʼನ(ಐಬಿಎಂ) ತಾತ್ಕಾಲಿಕ ಅಂಕಿ-ಅಂಶಗಳ ಪ್ರಕಾರ, 2022-23ರ ಏಪ್ರಿಲ್-ಸೆಪ್ಟೆಂಬರ್ ಅವಧಿಯ ಒಟ್ಟಾರೆ ಬೆಳವಣಿಗೆಯು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 4.2 ರಷ್ಟಿದೆ.
Pensioners Welfare: ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ರಾಷ್ಟ್ರವ್ಯಾಪಿ ಅಭಿಯಾನ ಆರಂಭ!
2022ರ ಸೆಪ್ಟೆಂಬರ್‌ನಲ್ಲಿ ಪ್ರಮುಖ ಖನಿಜಗಳ ಉತ್ಪಾದನಾ ಪ್ರಮಾಣ ಹೀಗಿದೆ:
ಕಲ್ಲಿದ್ದಲು 580 ಲಕ್ಷ ಟನ್, ಲಿಗ್‌ನೈಟ್ 27 ಲಕ್ಷ ಟನ್, ನೈಸರ್ಗಿಕ ಅನಿಲ (ಬಳಕೆ) 2791 ದಶಲಕ್ಷ ಕ್ಯೂಬಿಕ್ ಮೀಟರ್, ಪೆಟ್ರೋಲಿಯಂ (ಕಚ್ಚಾ) 24 ಲಕ್ಷ ಟನ್, ಬಾಕ್ಸೈಟ್ 1667 ಸಾವಿರ ಟನ್, ಕ್ರೋಮೈಟ್ 116 ಸಾವಿರ ಟನ್,
ಸಾಂದ್ರೀಕೃತ ತಾಮ್ರ 10 ಸಾವಿರ ಟನ್, ಚಿನ್ನ 92 ಕೆಜಿ, ಕಬ್ಬಿಣದ ಅದಿರು 166 ಲಕ್ಷ ಟನ್, ಸಾಂದ್ರೀಕೃತ ಸೀಸ 22 ಸಾವಿರ ಟನ್, ಮ್ಯಾಂಗನೀಸ್ ಅದಿರು 163 ಟನ್, ಸಾಂದ್ರೀಕೃತ ಸತು 45 ಸಾವಿರ ಟನ್,
ಸುಣ್ಣದಕಲ್ಲು 305 ಲಕ್ಷ ಟನ್, ಫಾಸ್ಫೊರೈಟ್ 150 ಸಾವಿರ ಟನ್, ಮ್ಯಾಗ್ನೆಸೈಟ್ 10 ಸಾವಿರ ಟನ್ ಮತ್ತು ವಜ್ರ 70 ಕ್ಯಾರೆಟ್.
ಆಧಾರ್ ಕಾರ್ಡ್ ನವೀಕರಣದ ಕುರಿತು ಕೇಂದ್ರ ಸರ್ಕಾರದ ಮಹತ್ವದ ಮಾಹಿತಿ! ನೀವಿದನ್ನು ತಿಳಿದಿರಲೆಬೇಕು
ಸೆಪ್ಟೆಂಬರ್ 2021ಕ್ಕೆ ಹೋಲಿಸಿದರೆ 2022ರ ಸೆಪ್ಟೆಂಬರ್‌ನಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸುವ ಪ್ರಮುಖ ಖನಿಜಗಳೆಂದರೆ:
ಫಾಸ್ಫೋರೈಟ್ (87.6%), ವಜ್ರ (37.3%), ಸಾಂದ್ರೀಕೃತ ತಾಮ್ರ (18.5%), ಕಲ್ಲಿದ್ದಲು (12.1%), ಕಬ್ಬಿಣದ ಅದಿರು (9.1%), ಬಾಕ್ಸೈಟ್ (5.5%) ಮತ್ತು ಸುಣ್ಣದ ಕಲ್ಲು (4.7%).
ನಕಾರಾತ್ಮಕ ಬೆಳವಣಿಗೆಯನ್ನು ತೋರಿಸುವ ಇತರ ಪ್ರಮುಖ ಖನಿಜಗಳೆಂದರೆ:
ನೈಸರ್ಗಿಕ ಅನಿಲ (ಬಳಕೆ) (-1.7%), ಪೆಟ್ರೋಲಿಯಂ (ಕಚ್ಚಾ) (-2.3%), ಮ್ಯಾಂಗನೀಸ್ ಅದಿರು (-4.7%), ಮ್ಯಾಗ್ನೆಸೈಟ್ (-15.3%), ಕ್ರೋಮೈಟ್ (-19.6%), ಚಿನ್ನ (-20.7%), ಲಿಗ್ನೈಟ್ (-22.0%), ಸಾಂದ್ರೀಕೃತ ಸೀಸ (-30.1%), ಮತ್ತು ಸಾಂದ್ರೀಕೃತ ಸತು (-6%).
Share your comments