ಹಣ ನಮ್ಮ ಹಿಡಿತದಲ್ಲಿದ್ದಾಗ ಮಾತ್ರ ಶಾಂತಿ. ಅದೇ ಹಣ ನಮ್ಮನ್ನು ನಿಯಂತ್ರಿಸಲು ಆರಂಭಿಸಿದರೆ ನರಕಯಾತನೆ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಇತ್ತೀಚಿಗೆ ಕೇರಳದಲ್ಲಿ ಲಾಟರಿ ಗೆದ್ದ ಆಟೋ ಚಾಲಕನೇ ಉದಾಹರಣೆ. ಹೌದು ಲಾಟರಿಯಲ್ಲಿ 25 ಕೋಟಿ ಬಹುಮಾನ ಬಂದಿರುವುದು ಇದೀಗ ಅವರಿಗೆ ಶಾಪವಾಗಿ ಪರಿಣಮಿಸಿದೆ ಅಂದ್ರೆ ನೀವು ನಂಬಲಧೇ ಬೇಕು.
ಕೋಟ್ಯಾಂತರ ರೈತರಿಗೆ ಸಿಹಿಸುದ್ದಿ: ಇದೀಗ ಈ ಬ್ಯಾಂಕ್ನಿಂದ ರೈತರ ಖಾತೆಗೆ ನೇರವಾಗಿ ಸೇರಲಿದೆ 50 ಸಾವಿರ ರೂ
ಕೇರಳ ಸರ್ಕಾರ ಮಾರಾಟ ಮಾಡಿದ ಲಾಟರಿ ಟಿಕೆಟ್ ಖರೀದಿಸಿದ ಆಟೋ ಚಾಲಕ ಅನುಪ್ 25 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ. ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಿದ್ದಕ್ಕೆ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂತು.
ಸುಮಾರು ರೂ. 15 ಕೋಟಿ 75 ಲಕ್ಷ ಹಣ ಎಲ್ಲ ತೆರಿಗೆಗಳ ನಂತರ ಅವರಿಗೆ ಲಭ್ಯವಾಗಲಿದೆ ಎಂದು ವರದಿಗಳಾಗಿವೆ. ಈ ವೇಳೆ ಅವರು ಈ ಹಣದಿಂದ ಸ್ವಲ್ಪ ಮಟ್ಟಿಗೆ ಬಡವರಿಗೆ ಮನೆ ಕಟ್ಟಿಸಿ ಸಹಾಯ ಮಾಡುವುದಾಗಿ ಹೇಳಿದರು. ಸಂದರ್ಶನದ ವೇಳೆ ಹೇಳಿದ ಈ ಮಾತುಗಳು ವೈರಲ್ ಆದ ನಂತರ ಅವರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ..
ಚಿಕಿತ್ಸಾ ವೆಚ್ಚ ಮತ್ತು ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡು ಅನೇಕರು ಅವರ ಮನೆಗೆ ಬರುತ್ತಿದ್ದಾರಂತೆ. ಇನ್ನು ಕೆಲವರು ಮುಂದೆ ಬಂದು ಹಣದ ಬೆದರಿಕೆ ಹಾಕತೊಡಗಿದ್ದಾರೆ ಎನ್ನಲಾಗಿದೆ. ಇದರಿಂದ ಭಯಭೀತಗೊಂಡ ಅನೂಪ್ ತಮ್ಮ ತಂಗಿಯ ಮನೆಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ, ಇಂದಿನ ಬೆಲೆ ಎಷ್ಟೇಂದು ಮನೆಯಲ್ಲಿ ಕುಳಿತು ತಿಳಿಯಿರಿ
ತಲೆಮರೆಸಿಕೊಂಡ ಜೀವನ ಕುರಿತು ವಿಡಿಯೋ ಬಿಡುಗಡೆ ಮಾಡಿದ ಅವರು ಇದರಲ್ಲಿ 25 ಕೋಟಿ ಬಹುಮಾನ ಗೆದ್ದಾಗ ತುಂಬಾ ಖುಷಿಯಾಯಿತು. ಆದರೆ ಆ ಬಹುಮಾನದ ಮೊತ್ತ ಇನ್ನೂ ಬಂದಿಲ್ಲ.
ಅಷ್ಟೊತ್ತಿಗಾಗಲೇ ಎಲ್ಲರೂ ಹಣ ಕೇಳಿ ನನಗೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಹೊರಗೆ ಹೋದಾಗ, ಎಲ್ಲರೂ ನನ್ನನ್ನು ಗುರುತಿಸುತ್ತಾರೆ ಮತ್ತು ಹಣ ಕೇಳುತ್ತಾರೆ. ಇದು ನನ್ನ ವೈಯಕ್ತಿಕ ಶಾಂತಿಯನ್ನು ಹಾಳು ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ..
ಲಾಟರಿಯಲ್ಲಿ 3ನೇ ಅಥವಾ 4ನೇ ಬಹುಮಾನ ಬಂದರೆ ಚೆನ್ನಾಗಿರುತ್ತಿತ್ತು. ಈಗ ನನ್ನ ನೆಮ್ಮದಿ ಇಲ್ಲವಾಗಿದೆ. ಇಷ್ಟು ದೊಡ್ಡ ಮೊತ್ತಕ್ಕೆ ತೆರಿಗೆ ಕಟ್ಟುವುದು ಹೇಗೆ? ಅದನ್ನು ಹೇಗೆ ನಿರ್ವಹಿಸುವುದು? ಅದು ನನಗೂ ಗೊತ್ತಿಲ್ಲ. ಇದಕ್ಕಾಗಿ ವೃತ್ತಿಪರರ ಸಲಹೆ ಕೇಳಿದ್ದೇನೆ. ಇದನ್ನು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಏತನ್ಮಧ್ಯೆ, ಮೊದಲ ಬಹುಮಾನ ವಿಜೇತರಿಗೆ ಬಹುಮಾನದ ಹಣವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ತರಬೇತಿ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.
Share your comments