ಮುಂಬರುವ ವರ್ಷಗಳಲ್ಲಿ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ನಿರಂತರವಾಗಿ ಹೆಚ್ಚಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.
ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ರೈತರಿಗೆ ನೀಡಲಾಗುತ್ತಿರುವ ಬೆಳೆಗಳ ಮೇಲಿನ ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ಸೌಲಭ್ಯವು ಇನ್ನು ಮುಂದೆಯೂ ಜಾರಿಯಲ್ಲಿರುತ್ತದೆ. ಎಂಎಸ್ಪಿಯನ್ನು ಆಗಾಗ ಹೆಚ್ಚಿಸಲಾಗುತ್ತಿರುತ್ತದೆ. ಹಾಗಾಗಿ ದೇಶದ ರೈತಾಪಿ ಜನರು ಆ ಬಗ್ಗೆ ಆತಂಕಗೊಳ್ಳಬಾರದು. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ ಎಣ್ಣೆಕಾಳು ಮತ್ತು ಬೇಳೆಕಾಳುಗಳ ಮೇಲಿನ ಎಂಎಸ್ಪಿಯನ್ನು 23 ಬಾರಿ ಹೆಚ್ಚಿಸಲಾಗಿದೆ. ತಾವೂ ಸಹ ಒಬ್ಬ ರೈತನ ಮಗನಾಗಿ ಕೃಷಿ ಮಸೂದೆಗಳ ಅನುಕೂಲತೆಯನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದರು.
ಜಮೀನು ಗುತ್ತಿಗೆ ಪಡೆದ ಮಾತ್ರಕ್ಕೆ ಕೃಷಿ ಜಮೀನಿನ ಮಾಲೀಕತ್ವ ತಮ್ಮದೆಂದು ಯಾರೂ ಹೇಳಲಾಗದು. ಮಂಡಿ ವ್ಯವಸ್ಥೆಯನ್ನು ನಿಲ್ಲಿಸಲು ಮುಂದಾಗಿಲ್ಲ. ಬದಲಾಗಿ ಇನ್ನೂ ಹೆಚ್ಚಿನ ಮಂಡಿಗಳಲ್ಲಿ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಆಯ್ಕೆಗಳನ್ನು ನೀಡಲಾಗಿದೆ ಎಂದಿದ್ದಾರೆ. ಕೃಷಿ ವಲಯಕ್ಕೆ ಸಂಬಂಧಿಸಿದ ಹೊಸ ಕಾನೂನುಗಳು ರೈತರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸಂಬಂಧಿಸಿವೆ ಎಂದರು.
Share your comments