1. ಸುದ್ದಿಗಳು

Milk Controversy ಕೇರಳದಲ್ಲಿ ನಂದಿನಿ ಹಾಲಿನ ಅಪಪ್ರಚಾರ; ನಂದಿನಿ Vs ಅಮುಲ್‌, ಈಗ ನಂದಿನಿ Vs ಮಿಲ್ಮಾ!

Hitesh
Hitesh
Nandini Milk Controversy in Kerala; Nandini Vs Amul, Now Nandini Vs Milma!

ನಂದಿನಿ ಹಾಲಿನ ಬಗ್ಗೆ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ವಿವಾದಗಳು ಸೃಷ್ಟಿಯಾಗುತ್ತಲ್ಲೇ ಇವೆ. ಇದೀಗ ಕೇಳರದ ಸಚಿವೆ ಚಿಂಚುರಾಣಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ನಂದಿನಿ ಹಾಲಿನ ಬಗ್ಗೆ ಕೇರಳದಲ್ಲಿ ವ್ಯವಸ್ಥಿತವಾದ ಅಪಪ್ರಚಾರ ನಡೆಯುತ್ತಿದೆ.

ಕೇರಳದ ಪಶುಸಂಗೋಪನೆ ಸಚಿವೆಯೇ ನಮ್ಮ ನಂದಿನಿ ಹಾಲಿನ ಬಗ್ಗೆ ಲಘುವಾಗಿ ಮಾತನಾಡಿರುವುದರಿಂದ ವಿಷಯ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.

ಈ ಬಗ್ಗೆ ಕಿಡಿಕಾಡಿರುವ ರಾಜ್ಯ ಸರ್ಕಾರ, ಕೇರಳದಲ್ಲಿ ನಂದಿನಿ ಹಾಲಿನ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದರೂ ಈಗ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದೆ.  

ಪರಂಪರೆ, ಇತಿಹಾಸ ಇರುವ ಏನನ್ನೇ ಆದರೂ ವ್ಯವಸ್ಥಿತವಾಗಿ ನಾಶಪಡಿಸುವುದು ಕಾಂಗ್ರೆಸ್‌ ಪಕ್ಷದ ಅಸ್ತಿತ್ವವಾದ.

ಆ ಸ್ವಾರ್ಥಕ್ಕೆ ದುರಾದೃಷ್ಟವಶಾತ್‌ ಬಲಿಯಾಗಬೇಕಾಗಿ ಬಂದಿರುವುದು ನಮ್ಮ ರಾಜ್ಯದ ಹೆಮ್ಮೆಯ ನಂದಿನಿ ಎಂದಿದೆ.

ತನಗೆ ಸುದ್ದಿಯ ಕೊರತೆಯಾದಾಗ ಅಮುಲ್‌ ವಿರುದ್ಧ ಎತ್ತಿಕಟ್ಟಿ ನಂದಿನಿ ಬ್ರ್ಯಾಂಡನ್ನು ಸಂಕುಚಿತಗೊಳಿಸಿತು.

ಪರಿಣಾಮವಾಗಿ ಇಂದು ಹೊರ ರಾಜ್ಯಗಳಲ್ಲಿ ನಂದಿನಿ ಬ್ರ್ಯಾಂಡ್‌ಗೆ ಹೊಡೆತ ಬೀಳುತ್ತಿದೆ.

ಈಗಾಗಲೇ ನಂದಿನಿಯ ಬಗ್ಗೆ ಕೇರಳ ಅಪಸ್ವರ ಎತ್ತಿದೆ. ಇಡೀ ದೇಶದ ಬಗ್ಗೆಯೇ ಮಾತನಾಡುವ ಕೇರಳದ ವಯನಾಡು ಮಾಜಿ

ಸಂಸದ ರಾಹುಲ್‌ ಗಾಂಧಿ ಈ ಬಗ್ಗೆ ತುಟಿಪಿಟಿಕ್‌ ಎನ್ನುತ್ತಿಲ್ಲ ಯಾಕೆ?

ಕೇರಳದ ಶಾಸಕರು ನಂದಿನಿಯ ಗುಣಮಟ್ಟವನ್ನೇ ಪ್ರಶ್ನಿಸುತ್ತಿರುವಾಗ ರಾಜ್ಯ ಸರ್ಕಾರವೇಕೆ ಆ ಬಗ್ಗೆ ಮೌನವಾಗಿದೆ ಸಿದ್ದರಾಮಯ್ಯರವರೇ?

ಈಗ ಪ್ರತಿ ಲೀಟರ್‌ಗೆ ₹5 ಹೆಚ್ಚು ಮಾಡುವ ಮೂಲಕ ನಂದಿನಿಯ ಮಾರುಕಟ್ಟೆ ಗಾತ್ರವನ್ನೇ ಭಾರಿ ಪ್ರಮಾಣದಲ್ಲಿ ಕುಗ್ಗಿಸಲಿದ್ದೀರಿ.

ನಿಮಗೆ ನಿಜಕ್ಕೂ ಹೈನುಗಾರರ ಮೇಲೆ ಕಾಳಜಿ ಇದ್ದರೆ ಪಶು ಆಹಾರವನ್ನು ಅಗ್ಗವಾಗಿ ಒದಗಿಸಿ, ಅಥವಾ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಿ.

ಲಕ್ಷಾಂತರ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಹುನ್ನಾರವೇಕೆ? ಎಂದು ಪ್ರಶ್ನೆ ಮಾಡಿದೆ. 

ನಂದಿನಿ – ಅಮೂಲ್‌ ನಂತರ ಈಗ ನಂದಿನಿ- ಮಿಲ್ಮಾ

ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ನಂದಿನಿ ಹಾಗೂ ಅಮುಲ್‌ ಹಾಲಿನ ಬಗ್ಗೆ ವಿವಾದ ಸೃಷ್ಟಿಯಾಗಿತ್ತು.

ರಾಜ್ಯದಲ್ಲಿ ವ್ಯಾಪಾರ ವೃದ್ಧಿ ಮಾಡಲು ಬಂದಿದ್ದ ಅಮುಲ್‌ ಹಾಗೂ ಒಳಸಂಚಿನ ಕುರಿತು ತೀವ್ರವಾದ ಆಕ್ಷೇಪ ವ್ಯಕ್ತವಾಗಿತ್ತು.

ಆದರೆ, ನಂದಿನಿ ಉತ್ಪನ್ನಗಳನ್ನು ಕೇರಳದಲ್ಲಿ ನ್ಯಾಯಯುತವಾಗಿ ಮಾರಾಟ ಮಾಡುವುದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ. 

ಈಚೆಗಷ್ಟೇ ರಾಜ್ಯದಲ್ಲಿ ಅಮೂಲ್‌ ಮಾರಾಟ ವಿಚಾರವಾಗಿ ತೀವ್ರ ವಿವಾದ ಸೃಷ್ಟಿಯಾಗಿತ್ತು.

ಗುಜರಾತ್‌ ಮೂಲದ ಅಮೂಲ್‌ ಅನ್ನು ರಾಜ್ಯದಲ್ಲಿ ಮಾರಾಟ ಮಾಡಬಾರದು.

ಇದರಿಂದ ನಮ್ಮ ರೈತರಿಗೆ ಸಮಸ್ಯೆ ಆಗಲಿದೆ ಎಂದು ಹೋರಾಟ ನಡೆದಿತ್ತು.

ಇದರ ಬೆನ್ನಲ್ಲೇ ನಂದಿನಿ ಹಾಲಿನ ಬಗ್ಗೆ ಕೇರಳದ ಪಶುಸಂಗೋಪನಾ ಸಚಿವೆ ಜೆ.ಚಿಂಚುರಾಣಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

Nandini Milk Controversy in Kerala; Nandini Vs Amul, Now Nandini Vs Milma!

ನಂದಿನಿಯ ಉತ್ಪನ್ನಗಳು ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ, ಕೇರಳಿಗರು ನಂದಿನಿ ಉತ್ಪನ್ನಗಳನ್ನು ಖರೀದಿಸಿಬೇಡಿ ಎಂದಿದ್ದಾರೆ.

ಅಲ್ಲದೇ ಕೇರಳದ ಮಿಲ್ಮಾ ದೇಶದಲ್ಲೇ ಅತ್ಯುತ್ತಮ ಹಾಲನ್ನು ನೀಡುತ್ತದೆ. ನಂದಿನಿ ಗುಣಮಟ್ಟದಿಂದ ಕೂಡಿಲ್ಲ.

ಹೀಗಾಗಿ, ನಂದಿನಿ ಬಗ್ಗೆ ಮಾತನಾಡುವುದು ಬೇಡ. ಇನ್ನು ನಂದಿನಿ ವಿರುದ್ಧದ ಹೋರಾಟಕ್ಕೆ ತಾವು ಸಿದ್ಧ ಎಂದಿದ್ದಾರೆ.

ಈಚೆಗೆ ರಾಜ್ಯದ  ಹಾಲು ಒಕ್ಕೂಟವಾದ ನಂದಿನಿ ಉತ್ಪನ್ನಗಳನ್ನು ಕೇರಳದಲ್ಲಿ ಮಾರಾಟ ಮಾಡುವುದಕ್ಕೆ ವಿರೋಧ ವ್ಯಕ್ತವಾಗಿತ್ತು.

ಈ ಸಂಬಂಧ ಪ್ರತಿಕ್ರಿಯಿಸಿರುವ ಚಿಂಚುರಾಣಿ, ಯಾವುದೇ ಒಂದು ಘಟಕ ಬೇರೆ ರಾಜ್ಯದಲ್ಲಿ ತನ್ನ ಮಳಿಗೆಗಳನ್ನು ಸ್ಥಾಪಿಸಲು ಅಧಿಕಾರಿಗಳಿಂದ

ಅಗತ್ಯ ಅನುಮತಿಗಳನ್ನು ಪಡೆಯಬೇಕು ಎಂದಿದ್ದಾರೆ.  ಇನ್ನು ಮಲಪ್ಪುರಂ ಜಿಲ್ಲೆಯ ಮಂಚೇರಿ ಮತ್ತು ತಿರೂರ್,

ಎರ್ನಾಕುಲಂ ಜಿಲ್ಲೆಯ ಕೊಚ್ಚಿ ಹಾಗೂ ಪತ್ತನಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ನಂದಿನಿ ಉತ್ಪನ್ನದ ಮಳಿಗೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ.   

ಇದನ್ನೂ ಓದಿರಿ: Heavy Rain ರಾಜ್ಯದ ಹಲವು ಜಿಲ್ಲೆಯಲ್ಲಿ ಇಂದು, ನಾಳೆ ಧಾರಾಕಾರ ಮಳೆ: ಹವಾಮಾನ ಇಲಾಖೆ

Published On: 26 June 2023, 10:38 AM English Summary: Nandini Milk Controversy in Kerala; Nandini Vs Amul, Now Nandini Vs Milma!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.