ದೇಶದಲ್ಲೇ ಪ್ರಥಮ ಬಾರಿಗೆ ಈ ವರ್ಷ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮಾಡುವ ಜವಾಬ್ದಾರಿಯನ್ನು ರೈತರಿಗೆ ನೀಡಿದೆ.
ಬೆಳೆ ಸಮೀಕ್ಷೆ ಆ್ಯಪ್ (Crop survey App) ಮೂಲಕ ಅವಕಾಶ ನೀಡಿದೆ. ಆದರೆ, ಬಳಕೆ ಹೊತ್ತಿನಲ್ಲಿ ರೈತ ಬಾಂಧವರಿಗೆ ಒಂದಿಷ್ಟು ಕಿರಿಕಿರಿ, ಗೊಂದಲಗಳ ಜೊತೆಗೇ ಕಷ್ಟವಾಗುತ್ತಿದೆ..ಕೆಲವೆಡೆ ಮಾಹಿತಿ ಕೊರತೆ, ಹಲವೆಡೆ ನೆಟ್ವರ್ಕ್ (Network), ಜಿಪಿಎಸ್ (GPS) ಹೀಗೆ ಹೀಗೆ ಕೆಲವು ಸಮಸ್ಯೆಗಳಿಂದ ಇನ್ನೂ ಹಲವಾರು ರೈತರು ನೋಂದಣಿ ಮಾಡಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ಸ್ಮಾರ್ಟ್ ಮೊಬೈಲ್‌ನಲ್ಲಿ ಬೆಳೆ ದಾಖಲಿಸಲು ಬೆಳೆಗಾರ ಮುಂದಾದರೆ ಆರಂಭದಲ್ಲೇ ಹಲವು ವಿಘ್ನ ಉಂಟಾಗುತ್ತಿವೆ. ಜಿಪಿಎಸ್ , ನೆಟ್ವರ್ಕ್ ಸಮಸ್ಯೆಯಿಂದಾಗಿ ರೈತರು ಬೆಳೆ ಸಮೀಕ್ಷೆ ದಾಖಲಿಸಲು ಹರಸಾಹಸ ಪಡುತ್ತಿದ್ದಾರೆ. ಬೆಳೆ ದಾಖಲಿಸಿದ ಬಳಿಕ ಒಟಿಪಿ ಬರುತ್ತದೆ. ಕೆಲವು ಸಲ ನೆಟ್ವರ್ಕ್ ಸಮಸ್ಯೆಯಿಂದಾಗಿ ಓಟಿಪಿ ಬರಲು ತಡವಾಗುತ್ತದೆ. ನೆಟ್ವರ್ಕ್ ಗಾಗಿ ಹೊಲದ ಸುತ್ತ ಅಲೆದಾಡುವ ಸಂದರ್ಭವೂ ಬರುತ್ತಿದೆ.. ಕೆಲವು ಸಲ ಜಿಪಿಎಸ್ ಲಿಂಕ್ ಸಿಗದೇ ಕಷ್ಟಅನುಭವಿಸುತ್ತಿದ್ದಾರೆ. ಇದೇನಪಾ ಕಿರಿಕಿರಿ ಎಂದು ಕೆಲವು ರೈತರು ನಿರಾಶೆಗೊಂಡು ನೋಂದಣಿ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ.
ಅರ್ಹ ಫಲಾನುಭವಿ ಗುರಿತುಸಲು ಬೆಳೆ ಸಮೀಕ್ಷೆ ಆ್ಯಪ್ ಸಹಾಯ
ಪ್ರಕೃತಿ ವಿಕೋಪದ ಸಂದರ್ಭ ಬೆಳೆ ಹಾನಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅನ್ವಯ ಪರಿಹಾರ ನೀಡಲು, ಬೆಳೆ ಯೋಜನೆಯಡಿ ಬೆಳೆ ಪರಿಶೀಲನೆ ನಡೆಸಲು, ಕನಿಷ್ಠ ಬೆಂಬಲ ಬೆಲೆ ನಿಗದಿ ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿಗಳ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಮತ್ತು ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲೆಗಾಗಿ ಈ ಬೆಳೆ ಸಮೀಕ್ಷೆ ವಿವರಗಳನ್ನು ಬಳಸಿಕೊಳ್ಳಬಹುದು.
ಮೊಬೈಲ್ ಇಲ್ಲದವರು ಏನು ಮಾಡಬೇಕು? (What to do who does not have mobile)
ರೈತರು ತಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲದೇ ಇದ್ದಲ್ಲಿ ತಮ್ಮ ಸ್ನೇಹಿತರ ಅಥವಾ ಪರಿಚಯಸ್ಥರ ಸ್ಮಾರ್ಟ್ ಪೋನ್ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಒಂದು ವೇಳೆ ಅಪರಿಚಿತರಿಂದ ಬೆಳೆಸಲು ಕೈಗೊಳ್ಳದಿದ್ದಲ್ಲಿ ಸರ್ಕಾರದಿಂದ ನಿಯೋಜಿಸಲ್ಪಟ್ಟ ಪಿಆರ್ ಗಳಿಂದ ಬೆಳೆ ಸಮೀಕ್ಷೆ ನಡೆಸಬೇಕು. ತಾಂತ್ರಿಕ ಮಾಹಿತಿ ಇರದ ರೈತರ ನೆರವಿಗಾಗಿ ಪ್ರತೀ ಗ್ರಾಮದಲ್ಲಿರುವ ಸಲಹೆಗಾರರು ಅಥವಾ ತಹಶೀಲ್ದಾರ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯವರನ್ನು ಸಂಪರ್ಕಿಸಬಹುದು.
ಸಂಪೂರ್ಣ ವಿವರ ಸಂಗ್ರಹ
ಮೊದಲಿಗೆ ರೈತರು ತಮ್ಮ ಜಮೀನು ಇರುವ ಜಿಲ್ಲೆ, ತಾಲೂಕು, ಗ್ರಾಮ, ಸರ್ವೆ ನಂಬರ್ ಇತ್ಯಾದಿ ವಿವರಗಳನ್ನು ಅದರ ಮೂಲಕ ನಮೂದಿಸಬೇಕು. ತಮ್ಮ ಗ್ರಾಮದ ಜಿಐಎಸ್ ನಕ್ಷೆಯನ್ನು ಡೌನ್‌ಲೋಡ್ ಮಾಡಿ ಜಮೀನಿನಲ್ಲಿ ಬೆಳೆದ ಬೆಳೆ ಹಾಗೂ ಇತರ ವಿವರ, ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡಬೇಕು. ರೈತರು ಒದಗಿಸಿದ ಎಲ್ಲ ವಿವರಗಳನ್ನು ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್‌ನಲ್ಲಿ ಸಂಗ್ರಹಿಸಿ ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ.
ಹೀಗೆ ಡೌನ್ಲೋಡ್ ಮಾಡಿಕೊಳ್ಳಿ (How to download crop survey app)
ಬೆಳೆ ಸಮೀಕ್ಷೆ 2020-21ಸಾಲಿನಲ್ಲಿ ರೈತ ಬಾಂಧವರು ತಮ್ಮ ಜಮೀನಿನ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ತಾವೇ ಸ್ವತಃ ಮೊಬೈಲ್ ತಂತ್ರಾಂಶದ ಮೂಲಕ ದಾಖಲಿಸಬಹುದು. ಕೆಳಗಿನ ಲಿಂಕ್ ಮೂಲಕ https://play.google.com/store/apps/details?id=com.csk.KariffTPKfarmer.cropsurvey ಮೊಬೈಲ್ ಆ್ಯಪ್ ಡೌನ್‌ಲೋಡ್ (Mobile App Download) ಮಾಡಿಕೊಂಡು ಬೆಳೆ ವಿವರ ದಾಖಲಿಸಬಹುದು.
Share your comments