ದೇಶಾದ್ಯಂತ ಅಕ್ಟೋಬರ್ 1 ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ- ಯುಜಿಸಿ ಮಾರ್ಗಸೂಚಿ ಪ್ರಕಟಿಸಿದೆ. ಇದಕ್ಕೆ ಪೂರಕವಾಗಿ ಸೆಪ್ಟೆಂಬರ್ 30ರೊಳಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆಯೋಗ ಸೂಚಿಸಿದೆ.
ಅಕ್ಟೋಬರ್ 1 ರಿಂದ ಕಾಲೇಜು ಆರಂಭಿಸಿಸಲು ಎಲ್ಲ ವಿಶ್ವವಿದ್ಯಾಲಯಗಳಿಗೆ, ಕಾಲೇಜುಗಳಿಗೆ ಯುಜಿಸಿ ಸೂಚನೆ ನೀಡಿದೆ.
ಕೊರೊನಾ ಸೋಂಕು ಸಂಖ್ಯೆ ಹೆಚ್ಚಳದಿಂದ ಬಂದ್ ಆಗಿದ್ದ ಕಾಲೇಜುಗಳು ಇದೀಗ ಅಕ್ಟೋಬರ್ 1 ರಿಂದ ತರಗತಿಗಳು ಆರಂಭವಾಗಲಿವೆ.ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಐಸಿಎಸ್ಇ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳು ಫಲಿತಾಂಶ ಪ್ರಕಟಿಸಿದ ನಂತರವೇ ಪದವಿ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸುವಂತೆ ಯುಜಿಸಿ ಸೂಚಿಸಿದೆ. ಕರ್ನಾಟಕದಲ್ಲಿ ಜುಲೈ 20 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟವಾಗಲಿದ್ದು, ಜುಲೈ 19 ಮತ್ತು 22 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ.
ಕೊರೋನೋ ಸೋಂಕಿನಿಂದಾಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹಾಜರಾಗುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ದೇಶಾದ್ಯಂತ ಸೋಂಕು ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಾಲೇಜುಗಳನ್ನು ತೆರೆಯಲು ಮಾರ್ಗಸೂಚಿ ಪ್ರಕಟಿಸಲಾಗಿದೆ.
ಆಗಸ್ಟ್ 31 ರ ಒಳಗೆ ಪರೀಕ್ಷೆ:
ವಿವಿಧ ಸೆಮಿಸ್ಟರ್ ಗಳು ಮತ್ತು ಅಂತಿಮ ವರ್ಷದ ಪದವಿ ಸೇರಿದಂತೆ ಇನ್ನಿತರೆ ಕಾಲೇಜುಗಳ ಪರೀಕ್ಷೆಯನ್ನು ಆಗಸ್ಟ್ 31ರ ಒಳಗೆ ನಡೆಸುವಂತೆಯೂ ಸೂಚನೆ ನೀಡಿದೆ . ಪರೀಕ್ಷೆ ನಡೆಸುವ ಕುರಿತಂತೆಯೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಆಂತರಿಕ ಮೌಲ್ಯಮಾಪನ ಮತ್ತು ಹಿಂದಿನ ಸೆಮಿಸ್ಟರ್ ಪರೀಕ್ಷೆಗಳ ಆಧಾರದ ಮೇಲೆ ಮಧ್ಯಂತರ ಸೆಮಿಸ್ಟರ್, ವಾರ್ಷಿಕ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಈ ನಿರ್ಧಾರವು 2020 ರಲ್ಲಿ ಅನುಸರಿಸಿದ ನಿಯಮಗಳಿಗೆ ಅನುಗುಣವಾಗಿರುತ್ತದೆ.
2020 ರಲ್ಲಿ ಪ್ರಕಟಿಸಿದ್ದ ಪರೀಕ್ಷೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಯು ಕೂಡ ಇದೇ ಸಂದರ್ಭದಲ್ಲಿ ಸೂಚಿಸಲಾಗಿದೆ. ಕಾಲೇಜುಗಳ ಮೊದಲ ವರ್ಷ ಅಥವಾ ಮೊದಲ ಸೆಮಿಸ್ಟರ್ ತರಗತಿಗಳು ಅಕ್ಟೋಬರ್ 1 ರಿಂದ ಆರಂಭವಾಗಲಿದ್ದು ಇದಕ್ಕಾಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
Share your comments