1. ಸುದ್ದಿಗಳು

STIHL ಇಂಡಿಯಾ ವಾರ್ಷಿಕ ಡೀಲರ್ ಸಮ್ಮೇಳನದಲ್ಲಿ ಕೃಷಿ ಸಲಕರಣೆಗಳ ಹೊಸ ವೈಶಿಷ್ಟ್ಯದ ಉತ್ಪನ್ನ ಬಿಡುಗಡೆ

Hitesh
Hitesh
New feature product launch of agricultural equipment at STIHL India Annual Dealer Conference

STIHL ಇಂಡಿಯಾ ಇತ್ತೀಚೆಗೆ ತನ್ನ ವಾರ್ಷಿಕ ಡೀಲರ್ ಸಮ್ಮೇಳನವನ್ನು ಅಂದರೆ ಜನವರಿ 22-23 (2023)ರಂದು ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ನಡೆಸಿತು.

ಎರಡು ದಿನಗಳ ಈವೆಂಟ್ ಅನ್ನು STIHL ಬ್ರ್ಯಾಂಡ್‌ ರಾಯಭಾರಿ, ಸೋನು ಸೂದ್ ಅವರು ಭಾಗವಹಿಸಿದ್ದರು ಮತ್ತು ಭಾರತದ 200 ಡೀಲರ್‌ಗಳು ಈ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಶ್ವದ ಪ್ರಸಿದ್ಧ ಕೃಷಿ ಸಲಕರಣೆಗಳ ಬ್ರ್ಯಾಂಡ್, ತಾಂತ್ರಿಕವಾಗಿ ಸುಧಾರಿತ ಸಾಧನಗಳಿಗೆ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

“ನಾವು ಸದಾ ಅಂತಿಮ ಬಳಕೆದಾರರ ಸೌಕರ್ಯ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಪ್ರಯತ್ನಿಸುತ್ತೇವೆ.

ಹೊಸ ಉತ್ಪನ್ನಗಳನ್ನು ಎಚ್ಚರಿಕೆಯಿಂದ ಯೋಜನೆಯೊಂದಿಗೆ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ.

ಅಲ್ಲದೇ ದೇಶದಾದ್ಯಂತ ಕೃಷಿ ಯಾಂತ್ರೀಕರಣದ ಸಂವಾದವನ್ನು ಅಭಿವೃದ್ಧಿಪಡಿಸುವುದು  ನಮ್ಮ ಧ್ಯೇಯವಾಗಿದೆ.

ನಮ್ಮ  ಘೋಷಾವಾಕ್ಯದಂತೆ “STIHL ಉಪಕರಣ ತನ್ನಿ ಪರಿವರ್ತನೆ” ಎಂದು ಹೇಳುವಂತೆ ಪರಿವರ್ತನೆಯನ್ನು ತರುವುದರ ಮೇಲೆ

ಗಮನ ಕೇಂದ್ರೀಕರಿಸಿದೆ ಮತ್ತು ನಾವು ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಿದ್ದೇವೆ ಎಂದು STIHL ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಪರಿಂದ್ ಪ್ರಭುದೇಸಾಯಿ ಹೇಳಿದರು.

ಬಿಡುಗಡೆಯಾದ ಹೊಸ ಉತ್ಪನ್ನಗಳಲ್ಲಿ ಗಮನಾರ್ಹವಾದವುಗಳೆಂದರೆ -

FS 3001 (Brush cutter) ಬ್ರಷ್‌ ಕಟ್ಟರ್‌ - ಇದು ಹೆಚ್ಚು ಇಂಧನ ದಕ್ಷ ಬ್ರಷ್‌ ಕಟ್ಟರ್‌ ಆಗಿದೆ.  (2- ಸ್ಟ್ರೋಕ್ ಚಾಲಿತ ಬ್ರಷ್ ಕಟ್ಟರ್).

ಈ ಬ್ರಷ್ ಕಟ್ಟರ್ ಕಾಂಪ್ಯಾಕ್ಟ್ ಆದರೆ ಶಕ್ತಿಯುತವಾದ ಎಂಜಿನ್ ಅನ್ನು ಹೊಂದಿದ್ದು, ಅದು ಹಗುರವಾಗಿರುವಾಗ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.  

New feature product launch of agricultural equipment at STIHL India Annual Dealer Conference

ಕೃಷಿಯಲ್ಲಿ ಬಹುಕ್ರಿಯಾತ್ಮಕ ಬಳಕೆಗೆ ಸೂಕ್ತವಾಗಿದೆ. ಬಳಕೆದಾರರ ಸ್ನೇಹಿ ಮತ್ತು ದಕ್ಷ ವಿನ್ಯಾಸದೊಂದಿಗೆ, ಬ್ರಷ್‌ಕಟರ್ ರೈತರಿಗೆ ಮತ್ತು ಬೆಳೆಗಾರರಿಗೆ ಕಠಿಣವಾದ ಹುಲ್ಲಿನೊಂದಿಗೆ ಕೆಲಸ ಮಾಡಲು ಸುಲಭಗೊಳಿಸುತ್ತದೆ.

ಇದು ಅನೇಕ ಮಾದರಿಯ ಬ್ಲೇಡ್‌ಗಳಿಗೆ ಸೂಕ್ತವಾಗಿದೆ. ಅಲ್ಲದೇ ಅವುಗಳು ಹಗುರವಾದ ಕಾರಣದಿಂದಾಗಿ ಅತ್ಯುತ್ತಮವಾದ ಸೌಕರ್ಯವನ್ನು ಹೊಂದಿವೆ.

FS 230 Brush cutter with cruise control & Backpack Brushcutter- FR 230 (ಕ್ರೂಸ್ ಕಂಟ್ರೋಲ್ ಮತ್ತು ಬ್ಯಾಕ್‌ಪ್ಯಾಕ್ ಬ್ರಷ್‌ಕಟರ್‌ನೊಂದಿಗೆ FS 230 ಬ್ರಷ್ ಕಟ್ಟರ್) FR 230- ಹುಲ್ಲು ಕತ್ತರಿಸುವ ಬ್ಲೇಡ್ ಅಥವಾ ಹುಲ್ಲು ಮತ್ತು ಪೊದೆಗಳನ್ನು ಕತ್ತರಿಸಲು ದೃಢವಾದ ಮತ್ತು ಶಕ್ತಿಯುತವಾಗಿದೆ.

 FS 230 ಮತ್ತು FR 230 ಬ್ರಷ್ ಕಟ್ಟರ್‌ಗಳು ಕ್ರೂಸ್ ಕಂಟ್ರೋಲ್ ಫಂಕ್ಷನ್, ದಕ್ಷ  ಬೈಕ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ.  

ಬಹು-ಕಾರ್ಯಕಾರಿ ನಿಯಂತ್ರಣ ಹಿಡಿತ. ರೈತರು ಮತ್ತು ಬೆಳೆಗಾರರು ಬ್ರಷ್‌ಕಟರ್ ಅನ್ನು ಅತ್ಯುತ್ತಮ ಇಂಧನ ಉಳಿತಾಯ ಎಂದು ಕಂಡುಕೊಳ್ಳುತ್ತಾರೆ. ಏಕೆಂದರೆ ಇದು 15% ಇಂಧನವನ್ನು ಉಳಿಸುತ್ತದೆ.

STIHL India

ಅಷ್ಟೇ ಅಲ್ಲ, FS 230 ಮತ್ತು FR 230 ಬ್ರಷ್ ಕಟ್ಟರ್‌ಗಳು ತಮ್ಮ ಸ್ಥಿರವಾದ ವೇಗ ನಿಯಂತ್ರಣ ಮತ್ತು ಬೈಕ್ ಹ್ಯಾಂಡಲ್‌ನ ಹೊಸದಾಗಿ ಪರಿಚಯಿಸಲಾದ ವಿನ್ಯಾಸದೊಂದಿಗೆ ಹೆಚ್ಚಿನ ಬಳಕೆದಾರರ ಸೌಕರ್ಯವನ್ನು ಒದಗಿಸುತ್ತವೆ.

WP 300/600/900 Water Pumps (WP 300/600/900 ವಾಟರ್ ಪಂಪ್‌ಗಳು)- ಈ ಶ್ರೇಣಿಯ ನೀರಿನ ಪಂಪ್‌ಗಳು ಅರೆ ಮತ್ತು ಪೂರ್ಣ-ವೃತ್ತಿಪರ ಅವಶ್ಯಕತೆಗಳನ್ನು ಪೂರೈಸುತ್ತವೆ.

ಇವುಗಳನ್ನು ಖಾಸಗಿ ಬಳಕೆದಾರರು, ರೈತರು ಮತ್ತು ಸಣ್ಣ ಮತ್ತು ಬೃಹತ್ ಭೂಮಿಯನ್ನು ಹೊಂದಿರುವ ವಾಣಿಜ್ಯ ಬೆಳೆಗಾರರು ಬಳಸಬಹುದು.

ಜಲಮೂಲಗಳಿಂದ ಭೂಮಿಗೆ ನೀರು ಪೂರೈಸಲು ರೈತರು ಈ ನೀರಿನ ಪಂಪ್‌ಗಳನ್ನು ಕೃಷಿಗೆ ಬಳಸಿಕೊಳ್ಳಬಹುದು. STIHL ವಾಟರ್ ಪಂಪ್ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.

ಅತ್ಯುತ್ತಮ ವಿನ್ಯಾಸ, ಉತ್ಕೃಷ್ಟ ಬಳಕೆ. ಇನ್ನು ಕಡಿಮೆ ಇಂಧನ ಶಕ್ತಿಯೊಂದಿಗೆ ಅತ್ಯುತ್ತಮ ಬಳಕೆಯನ್ನು ಮಾಡಬಹುದಾಗಿದೆ.  

ಇದನ್ನೂ ಓದಿರಿ: PM Kisan ಇಂದು ಮಧ್ಯಾಹ್ನ ಬೆಳಗಾವಿಯಿಂದ ಪಿ.ಎಂ ಕಿಸಾನ್‌ ಬಿಡುಗಡೆ ಮಾಡಲಿದ್ದಾರೆ: ಪ್ರಧಾನಿ ಮೋದಿ

7th pay commission 7ನೇ ವೇತನ ಆಯೋಗ ಅನುಷ್ಠಾನಕ್ಕೆ ಆಗ್ರಹಿಸಿ ಸರ್ಕಾರಿ ನೌಕರರಿಂದ ಮಾ. 1ರಿಂದ ಕೆಲಸಕ್ಕೆ ಗೈರು!

Published On: 27 February 2023, 05:30 PM English Summary: New feature product launch of agricultural equipment at STIHL India Annual Dealer Conference

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.