ಬಸವರಾಜ ಬೊಮ್ಮಾಯಿ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರೆ, ಆರಗ ಜ್ಞಾನೇಂದ್ರ ಅವರಿಗೆ ಮಹತ್ವದ ಗೃಹ ಖಾತೆ ನೀಡಲಾಗಿದೆ.ಬಿ.ಸಿ. ನಾಗೇಶಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನೀಡಲಾಗಿದೆ. ಮುರುಗೇಶ ನಿರಾಣಿಗೆ ಬೃಹತ್ ಕೈಗಾರಿಕೆ ನೀಡಲಾಗಿದ್ದರೆ, ಸಿಸಿ ಪಾಟೀಲ ಅವರಿಗೆ ಲೋಕಪಯೋಗಿ ಇಲಾಖೆ ಕೊಡಲಾಗಿದೆ.
ಅನುಭವಿ ಸಚಿವರುಗಳಿಗೆ ಪ್ರಮುಖ ಖಾತೆಗಳಾದ ಇಂಧನ ಹಾಗೂ ಗೃಹ ಖಾತೆಯನ್ನು ನೀಡುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಸಚಿವರಾಗಿರುವ ಅರಗ ಜ್ಞಾನೇಂದ್ರ ಮತ್ತು ಸುನಿಲ್ ಕುಮಾರ್ ಅವರಿಗೆ ಈ ಮಹತ್ವದ ಖಾತೆಯನ್ನು ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಕಾಯನಿರ್ವಹಿಸಿದ್ದ ವಲಸಿಗ ಸಚಿವರೂ ಸೇರಿದಂತೆ ಬಹುತೇಕ ಸಚಿವರುಗಳಿಗೆ ಅವರ ಹಿಂದಿನ ಖಾತೆಗಳನ್ನೇ ಹಂಚಿಕೆ ಮಾಡಲಾಗಿದೆ. ಆದರೆ, ಜಲಸಂಪನ್ಮೂಲ ಖಾತೆಯನ್ನು ಗೋವಿಂದ ಕಾರಜೋಳ ಅವರಿಗೆ ನೀಡಿ ಅವರು ನಿರ್ವಹಿಸುತ್ತಿದ್ದ ಲೋಕೋಪಯೋಗಿ ಖಾತೆಯನ್ನು ಬಿಎಸ್‌ವೈ ಆಪ್ತ ಸಿ.ಸಿ ಪಾಟೀಲ್ ಅವರಿಗೆ ನೀಡಲಾಗಿದೆ.
ಶಶಿಕಲಾ ಜೊಲ್ಲೆ ಅವರಿಗೆ ಖಾತೆ ಬದಲಾಗಿದ್ದು, ಅವರಿಗೆ ಮುಜರಾಯಿ, ಹಜ್ ಮತ್ತು ವಕ್ಫ್ ಖಾತೆಗಳನ್ನು ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ಯಾರಿಗೂ ಹಂಚಿಕೆ ಮಾಡಿಲ್ಲ. ಹಿರಿಯ ಸಚಿವ ಉಮೇಶ್ ಕತ್ತಿ ಅವರಿಗೂ ಬಂಪರ್ ಹೊಡೆದಿದ್ದು, ಅವರಿಗೆ ಆಹಾರ ಖಾತೆಯ ಜತೆಗೆ ಅರಣ್ಯ ಖಾತೆಯನ್ನು ನೀಡಲಾಗಿದೆ. ಜೆ.ಸಿ ಮಾಧುಸ್ವಾಮಿ ಅವರಿಗೆ ಸಣ್ಣ ನೀರಾವರಿ ಜತೆಗೆ ಸಂಸದೀಯ ವ್ಯವಹಾರ ಮತ್ತು ಕಾನೂನು ಶಾಸನ ರಚನೆ ಜವಾಬ್ದಾರಿ ನೀಡಲಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಖಾತೆಗಳನ್ನು ನಿರ್ವಹಿಸಿದ್ದರು.
ಯಾರಿಗೆ ಯಾವ ಖಾತೆ ಇಲ್ಲಿದೆ ಸಂಪೂರ್ಣ ಮಾಹಿತಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-ಹಣಕಾಸು, ಗುಪ್ತದಳ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ, ಡಿಪಿಎಆರ್ ಮತ್ತು ಯಾವುದೇ ಸಚಿವರುಗಳಿಗೆ ಹಂಚಿಕೆಯಾಗದ ಖಾತೆಗಳು.
ಗೋವಿಂದ ಎಂ. ಕಾರಜೋಳ-ಜಲಸಂಪನ್ಮೂಲ
ಕೆ.ಎಸ್ ಈಶ್ವರಪ್ಪ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಆರ್.ಅಶೋಕ್-ಕಂದಾಯ
ಬಿ. ಶ್ರೀರಾಮುಲು-ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ.
ಅರಗ ಜ್ಞಾನೇಂದ್ರ-ಗೃಹ ಇಲಾಖೆ
ವಿ. ಸೋಮಣ್ಣ-ವಸತಿ,
ಉಮೇಶ್‌ಕತ್ತಿ-ಆಹಾರ ಮತ್ತು ಅರಣ್ಯ ಇಲಾಖೆ.
ವಿ. ಸುನಿಲ್ ಕುಮಾರ್-ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬಿ.ಸಿ ನಾಗೇಶ್- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮತ್ತು ಸಕಾಲ
ಡಾ. ಸಿ.ಎನ್ ಅಶ್ವತ್ಥ ನಾರಾಯಣ-ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ
ಜೆ.ಸಿ ಮಾಧುಸ್ವಾಮಿ-ಸಣ್ಣ ನೀರಾವರಿ, ಸಂಸದೀಯ ವ್ಯವಹಾರ ಮತ್ತು ಕಾನೂನು, ಶಾಸನ ರಚನೆ
ಸಿ.ಸಿ ಪಾಟೀಲ್-ಲೋಕೋಪಯೋಗಿ ಇಲಾಖೆ
ಆನಂದ್‌ಸಿಂಗ್-ಜೀವಿಶಾಸ್ತ್ರ, ಪರಿಸರ ಮತ್ತು ಪ್ರವಾಸೋದ್ಯಮ
ಕೋಟಾಶ್ರೀನಿವಾಸ ಪೂಜಾರಿ -ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ
ಪ್ರಭುಚೌಹಾಣ್-ಪಶುಸಂಗೋಪನೆ
ಮುರುಗೇಶ್ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಎ. ಶಿವರಾಂ ಹೆಬ್ಬಾರ್-ಕಾರ್ಮಿಕ
ಎಸ್.ಟಿ ಸೋಮಶೇಖರ್-ಸಹಕಾರ
ಬಿ.ಸಿ ಪಾಟೀಲ್-ಕೃಷಿ
ಭೈರತಿ ಬಸವರಾಜು-ನಗರಾಭಿವೃದ್ಧಿ ಇಲಾಖೆ
ಡಾ. ಕೆ. ಸುಧಾಕರ್-ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
ಕೆ. ಗೋಪಾಲಯ್ಯ-ಅಬಕಾರಿ
ಶಶಿಕಲಾ ಜೊಲ್ಲೆ-ಮುಜರಾಯಿ, ಹಜ್ ಮತ್ತು ವಕ್ಫ್
ಎಂ.ಟಿ.ಬಿ ನಾಗರಾಜ್-ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ
ಕೆ.ಸಿ ನಾರಾಯಣಗೌಡ-ರೇಷ್ಮೆ, ಕ್ರೀಡೆ ಮತ್ತು ಯುವ ಜನ ಸಬಲೀಕರಣ
ಹಾಲಪ್ಪ ಆಚಾರ್-ಗಣಿ ಮತ್ತು ಭೂವಿಜ್ಞಾನ
ಶಂಕರ್ ಪಾಟೀಲ್ ಮುನೇನಕೊಪ್ಪ-ಜವಳಿ ಮತ್ತು ಕೈಮಗ್ಗ, ಸಕ್ಕರೆ ಇಲಾಖೆ
ಮುನಿರತ್ನ-ತೋಟಗಾರಿಕೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ಎಸ್. ಅಂಗಾರ-ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
ಹೊಸ ಬದಲಾವಣೆ ತರುವ ದಿಸೆಯಲ್ಲಿ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಎಲ್ಲ ಸಚಿವರುಗಳು ತಮಗೆ ನೀಡಿರುವ ಖಾತೆಗಳಲ್ಲಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Share your comments