ಇಂಡಿಯನ್ ಆಯಿಲ್ ಕಂಪನಿಯ ಇಂಡೇನ್ ಅಡುಗೆ ಅನಿಲದ ಸಿಲಿಂಡರ್ಗಳನ್ನು ಈಗ ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ಬುಕ್ ಮಾಡಲು ಸಾಧ್ಯವಿದೆ. ಅಡುಗೆ ಅನಿಲದ ಹೊಸ ಕನೆಕ್ಷನ್ ಪಡೆಯಲು ಗ್ರಾಹಕರು ಈಗ ಡೀಲರ್ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು, ನಿಮ್ಮ ಮನೆ ಬಾಗಿಲಗೆ ಬಂದು ಕನೆಕ್ಷನ್ ಕೊಡಲಾಗವುದು. ಹೌದು, 84549 55555 ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟರೆ ಸಾಕು, ಇದಕ್ಕೆ ಯಾವುದೇ ಶುಲ್ಕಗಳು ಇರುವುದಿಲ್ಲ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ನ ಸಿಬ್ಬಂದಿ ಮನೆ ಬಾಗಿಗೆ ಬಂದು ಹೊಸ ಕನೆಕ್ಷನ್ ಕೊಡುತ್ತಾರೆ.
ಈ ಕುರಿತು ಭಾರತೀಯ ತೈಲ ಕಾರ್ಪೋರೇಷನ್ ಅಧ್ಯಕ್ಷ ಎಸ್.ಎಂ. ವೈದ್ಯ ಸೋಮವಾರ ಮಾಹಿತಿ ನೀಡಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿರುವ ಗ್ರಾಹಕರು ಮಿಸ್ಡ್ ಕಾಲ ಕೊಟ್ಟರೆ ಎಲ್ಪಿಜಿ ಹೊಸ ಸಂಪರ್ಕ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಯೋಜನೆಯಿಂದಾಗಿ ಹಿರಿಯ ನಾಗರಿಕರು ಮತ್ತು ಗ್ರಾಮೀಣ ಪ್ರದೇಶಗಳ ಜನರಿಗೆ ಅವರು ಇರುವಲ್ಲಿಗೆ ಹೋಗಿ ಅಡುಗೆ ಅನಿಲ ಸಂಪರ್ಕ ನೀಡಲಾಗುವುದು. ಮಿಸ್ಡ್ ಕಾಲ್ ಯೋಜನೆ ಎಲ್ಪಿಜಿ ಗ್ರಾಹಕರಿಗೆ ಸುಲಭವಾಗಿ ತಲುಪಿಸುವ ಮತ್ತು ಗ್ರಾಹಕರ ಸಂತೋಷ ಹೆಚ್ಚಿಸುವ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ವಿಶ್ವಾಸವಿದೆ ಎಂದರು.
ಗ್ರಾಹಕರ ಮನೆ ಬಾಗಿಲಿಗೆ ಡಬಲ್ ಸಿಲೆಂಡರ್ ಸಂಪರ್ಕ ಸೌಲಭ್ಯ ತರಲಾಗಿದೆ. ವಿತರಣೆ ಸಿಬ್ಬಂದಿ ಹಾಲಿ ಒಂದು ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ 2 ಸಿಲಿಂಡರ್ ಸಂಪರ್ಕಕ್ಕೆ ಬದಲಾಯಿಸಿಕೊಳ್ಳುವ ಬಗ್ಗೆ ಮಾಹಿತಿಯನ್ನು ಸಹ ನೀಡಲಿದ್ದಾರೆ. 14.2 ಕೆಜಿ ಸಿಲಿಂಡರ್ ಬದಲು ಬ್ಯಾಕ್ ಅಪ್ ಗೆ 5 ಕೆಜಿ ಸಿಲಿಂಡರ್ ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಹಾಲಿ ಗ್ರಾಹಕರು ಎಲ್ಪಿಜಿ ಸಿಲಿಂಡರ್ ರಿಫೀಲ್ ಮಾಡಿಸಿಕೊಳ್ಳಲು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ ಕೊಟ್ಟರೆ ಸಾಕು, ಎಲ್ಪಿಜಿ ರಿಫೀಲ್ ಗೆ ಸಿಬ್ಬಂದಿ ಮನೆಗೆ ಬರಲಿದ್ದಾರೆ. ಮಿಸ್ಡ್ ಕಾಲ್ ನೀಡಿದ ಗ್ರಾಹಕರಿಗೆ ಎಲ್ಪಿಜಿ ಸಿಲಿಂಡರ್ ನ ಹೊಸ ಕನೆಕ್ಷನ್ ಹಾಗೂ ಹಾಲಿ ಗ್ರಾಹಕರಿಗೆ ಸಿಲಿಂಡರ್ ಪೂರೈಸುವ ಈ ಯೋಜನೆ ಜಾರಿ ಮಾಡಿದ ದೇಶದ ಮೊದಲ ಸಂಸ್ಥೆಯಾಗಿದೆ.
ಗ್ರಾಹಕರು ರಿಫಿಲ್ ಗಾಗಿ ಬುಕ್ ಮಾಡಿ ಭಾರತ ಬಿಲ್ ಪೇಮೆಂಟ್ ಸಿಸ್ಟಿಂ, ಇಂಡಿಯನ್ Oil one App ಮೂಲಕ ಹಣ ಪಾವತಿಸಬಹುದು. ಪೇಟಿಎಂ ಮತ್ತು ಅಮೆಜಾನ್ ಮೂಲಕವೂ ಹಣ ಪಾವತಿಸಬಹುದು. 84549 55555 ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ಯಾಸ್ ರಿ-ಫಿಲ್ ಬುಕ್ಕಿಂಗ್ ಹಾಗೂ ಡಬಲ್ ಸಿಲಿಂಡರ್ ಸೌಲಭ್ಯಕ್ಕೆ ಬಡ್ತಿ ಪಡೆಯುವಂತಹ ಸೌಲಭ್ಯ ಇದೆ.
Share your comments