ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಈ ವರ್ಷದ ಮೂರನೇ ಕಂತಿನ ಹಣ ನವೆಂಬರ್ ಅಂತ್ಯದವರೆಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಈಗಾಲೇ ಜಮೆ ಮಾಡುವ ಪ್ರಕ್ರಿಯ ಆರಂಭವಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಹಾಗೂ ಬ್ಯಾಂಕಿಗೆ ಹಣ ಜಮೆಯಾಗುವುದು ಯಾವ ಹಂತದಲ್ಲಿದೆ ಎಂಬುದನ್ನು ನೀವು ಈಗ ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ 6,000 ರೂಪಾಯಿ ಸಹಾಯ ಧನ ನಿಮ್ಮ ಖಾತೆಯಲ್ಲಿ ಜಮಾವಾಗಿದೆಯೇ ಎಂಬುದನ್ನು ನೋಡಿಕೊಳ್ಳಲು ಬ್ಯಾಂಕಿಗೆ ಹೋಗುವ ಅವಶ್ಯಕತೆಯಿಲ್ಲ. ನೋಂದಣಿ ಮಾಡಿಸಿಕೊಂಡ ರೈತರು ಇನ್ನುಮುಂದೆ ಮನೆಯಲ್ಲಿಯೇ ಕುಳಿತು ನೋಡಿಕೊಳ್ಳಬಹುದು. ಅಕೌಂಟಿಗೆ ಹಣ ಜಮೆಯಾಗದಿದ್ದರೆ ಅಕೌಂಟ್ ಜಮೆಯಾಗಲು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಪರಿಶೀಲಿಸಬಹುದು.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಈಗಲೇ ನಿಮ್ಮ ಸ್ಟೇಟಸ್ ತಿಳಿದುಕೊಳ್ಳಬಹುದು. https://pmkisan.gov.in/beneficiarystatus.aspx ಲಿಂಕ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಂ. ಅಥವಾ ನೋಂದಾಯಿಸಿದ ಮೊಬೈಲ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಈ ಮೂರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿ ಅಲ್ಲಿ ಕ್ಲಿಕ್ ಮಾಡಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮಗೆ ಇಲ್ಲಿಯವರೆಗೆ ಎಷ್ಟು ಕಂತು ಜಮೆಯಾಗಿದೆ. ಈಗಿನ ಕಂತು ಯಾವ ಹಂತದಲ್ಲಿದೆ ಎಂಬ ಮಾಹಿತಿಯೂ ಗೊತ್ತಾಗುತ್ತದೆ.
ಅಥವಾ ಗೂಗಲ್ ನಲ್ಲಿ pm kisan samman status ಅಂತ ಟೈಪ್ ಮಾಡಿ, know Beneficiary status-pm kisan ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್, ಅಕೌಂಟ್ ಅಥವಾ ಮೊಬೈಲ್ ನಂಬರ್ ಹಾಕಿ ಸಹ ಚೆಕ್ ಮಾಡಿಕೊಳ್ಳಬಹುದು.
ನೀವು 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್' ಯೋಜನೆ ಲಾಭ ಪಡೆಯಲು ನೀವು ಅರ್ಜಿ ಸಲ್ಲಿಸಿದ್ದರೆ ಮತ್ತು ಈಗ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಅವಕಾಶವಿದೆ. ಪಿಎಂ ಕಿಸಾನ್ ಸಮನ್ ನಿಧಿ ಯೋಜನೆಯ 2020ರ ಫಲಾನುಭವಿಗಳ ಹೊಸ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ pmkisan.gov.in ಮೂಲಕ ಪರಿಶೀಲಿಸಬಹುದು.
ಪಿಎಂ ಕಿಸಾನ್ ಸಮನ್ ನಿಧಿ ಯೋಜನೆ 2020ರ ಹೊಸ ಪಟ್ಟಿಯನ್ನು ಸರ್ಕಾರದ ವೆಬ್ ಸೈಟ್ pmkisan.gov.in ನಲ್ಲಿ ಪರಿಶೀಲಿಸಬಹುದು. ಇದಲ್ಲದೆ, ನೀವು ಫಲಾನುಭವಿಯಾಗಿದ್ದರೆ, ನಿಮ್ಮ ಸ್ಟೇಟಸ್ ಅನ್ನು ಆನ್ ಲೈನ್ ನಲ್ಲಿ ಪರಿಶೀಲಿಸಹುದು.
ರೈತರು ಮೊದಲನೆಯಾದಾಗಿ pmkisan.gov.in ವೆಬ್ ಸೈಟ್ ಗೆ ಲಾಗ್ ಆನ್ ಆಗಬೇಕು. ನಂತರ 'ಫಾರ್ಮರ್ ಕಾರ್ನರ್' ವಿಭಾಗದಲ್ಲಿ ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿಗಳ ಪಟ್ಟಿ) ಟ್ಯಾಬ್ ಕ್ಲಿಕ್ ಮಾಡಬೇಕು.
ಇಲ್ಲಿ ಸರಕಾರದಿಂದ ಯೋಜನೆಯ ಪ್ರಯೋಜನ ಪಡೆದ ರೈತರ ಹೆಸರುಗಳನ್ನು ಪ್ರಕಟಿಸುತ್ತದೆ. ರಾಜ್ಯ / ಜಿಲ್ಲೆ / ತಾಲೂಕು/ ಗ್ರಾಮವಾರು ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಆಯಾ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮಗಳನ್ನು ಕ್ಲಿಕ್ ಮಾಡುವ ಮೂಲಕ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನ ನೋಡಬಹುದು. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದು.
ಪ್ಲೇಸ್ಟೋರ್‍ನಿಂದ (playstore) ಪಿಎಂ ಕಿಸಾನ್ ಆ್ಯಪ್ ಡೌಲ್ಡೋಡ್:
ಈ ಮೊಬೈಲ್ ಆ್ಯಪ್‍ನ್ನು ಗೂಗಲ್ ಪ್ಲೇಸ್ಟೋರ್ (Google play store) ನಿಂದ ಡೌನ್‍ಲೌಡ್ ಮಾಡಿಕೊಂಡು ಸ್ವಯಂ ದೃಢೀಕರಣ ಪತ್ರದಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಮೊಬೈಲ್ ಮೂಲಕವೇ ಮಾಹಿತಿ ಅಪ್‍ಲೋಡ್ ಮಾಡಬಹುದು. ಮತ್ತು ಪರಿಶೀಲಿಸಬಹುದು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಫಲಾನುಭವಿಗಳಾಗಲು ಈ ಲಿಂಕ್
https://www.pmkisan.gov.in/RegistrationForm.aspx
ಕ್ಲಿಕ್ ಮಾಡಿ ತಮ್ಮ ಹೆಸರು ಸೇರಿದಂತೆ ಇತರ ಮಾಹಿತಿಯನ್ನು ನೀಡಿ ನೋಂದಾಯಿಸಿಕೊಳ್ಳಿ.
ಈ ತಂತ್ರಾಂಶದಲ್ಲಿ ತಮ್ಮ ಜಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಗ್ರಾಮವನ್ನು ಆಯ್ಕೆ ಮಾಡಿ ನಂತರ ತಮ್ಮ ಮೊಬೈಲ್ ನಂಬರ್ ಅನ್ನು ದಾಖಲಿಸಿ ಮುಂದುವರಿಯಬೇಕು. ಮುಂದಿನ ಹಂತದಲ್ಲಿ ನಾಲ್ಕು ಸಂಖ್ಯೆಯ ಪಾಸ್‍ವರ್ಡ್ ನಂಬರ್ ದಾಖಲಿಸಬೇಕು. ನಂತರ ಗ್ರಾಮವನ್ನು ಆಯ್ಕೆ ಮಾಡಿ ಅಪ್‍ಲೋಡ್ ಎಂಬ ಬಟನ್ ಒತ್ತಬೇಕು.
ಈ ಹಂತದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಭೂ ದಾಖಲೆಗಳ ವಿವರಗಳು ನೇರವಾಗಿ ಭೂಮಿ ದತ್ತಾಂಶದಿಂದ ಮೊಬೈಲ್‍ಗೆ ಡೌನ್‍ಲೋಡ್ ಆಗುತ್ತದೆ. ಸರ್ವೆ ಸಂಖ್ಯೆ ದಾಖಲಿಸಿ ಸ್ವಾಧೀನದಾರರ ಹೆಸರನ್ನು ಆಯ್ಕೆ ಮಾಡಬೇಕು. ವರ್ಗ, ಸಣ್ಣ, ಅತೀ ಸಣ್ಣ ಹಿಡುವಳಿದಾರರ ಮಾಹಿತಿಯನ್ನು ಆಯ್ಕೆ ಮಾಡಿ ದೃಢೀಕರಿಸಿದ ನಂತರ ಆಧಾರ್ ಮಾಹಿತಿಯನ್ನು ದಾಖಲಿಸಬೇಕು. ಅಥವಾ ಆಧಾರ್ ಮಾಹಿತಿಯನ್ನು ನೇರವಾಗಿ ಆಧಾರ್ ಕಾರ್ಡ್‍ನಲ್ಲಿರುವ ಕ್ಯೂ ಆರ್ ಕೋಡ್ ಅನ್ನು ಮೊಬೈಲ್‍ನಿಂದ ಸ್ಕ್ಯಾನ್ ಮಾಡುವ ಮೂಲಕವೂ ಸ್ವಯಂಚಾಲಿತವಾಗಿ ಆಧಾರ್ ವಿವರ ದಾಖಲಿಸುವ ಸೌಲಭ್ಯವೂ ಇದೆ.
ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರ, ಐಎಫ್‍ಸಿ ಸಂಖ್ಯೆ ನಮೂದಿಸುವ ಮೂಲಕ ಸ್ವಯಂ ಚಾಲಿತವಾಗಿ ಬ್ಯಾಂಕ್ ಮತ್ತು ಬ್ರಾಂಚ್ ಹೆಸರು ಆಯ್ಕೆಯಾಗುವಂತೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ದತ್ತಾಂಶವನ್ನು ಉಳಿಸಿ ಮುಂದಿನ ಸರ್ವೆ ನಂಬರ್ ದಾಖಲಿಸಬಹುದು. ಅಂತಿಮ ಹಂತದಲ್ಲಿ ಎಲ್ಲಾ ದತ್ತಾಂಶವನ್ನು ಅಪ್‍ಲೋಡ್ ಬಟನ್ ಒತ್ತುವ ಮೂಲಕ ಸಂಗ್ರಹಿಸಿದ ಮತ್ತು ಛಾಯಾಚಿತ್ರಗಳನ್ನು ಕೇಂದ್ರ ಸರ್ವರ್‍ಗೆ ರವಾನೆಯಾಗಲಿದೆ. ಪಹಣಿಯಲ್ಲಿರುವ ಜಂಟಿ ಸ್ವಾಧೀನದಾರರು ಪ್ರತ್ಯೇಕವಾಗಿಯೇ ಮಾಹಿತಿಯನ್ನು ಸಲ್ಲಿಸಬೇಕು. ರೈತರು ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಹೊಂದಿರುವ ಜಮೀನಿನ ವಿವರಗಳನ್ನು ಸಲ್ಲಿಸಬಹುದು
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಪಿಎಂ. ಕಿಸಾನ್ ಯೋಜನಾ ಹೆಲ್ಪ್ ಲೈನ್ ನಂಬರ್ 011-24300606, ಅಥವಾ ಪಿಎಂ ಕಿಸಾನ್ ಯೋಜನೆ ಟೋಲ್ ಫ್ರಿ ನಂ. 1800115526 ಗೆ ಸಂಪರ್ಕಿಸಬಹುದು.ಇದಲ್ಲದೆ ಹೆಲ್ಪ್ ಲೈನ್ 155261 ಕರೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದು ಬಿಟ್ಟು ಕೇಂದ್ರ ಕೃಷಿ ಸಚಿವಾಲಯ 011-23381092 ಗೆ ಕರೆ ಮಾಡಬಹುದು.
Share your comments