1. ಸುದ್ದಿಗಳು

ಬಿದಿರು ಕೃಷಿ ಕುರಿತು ಜೂನ್ 17ರಂದು ಆನ್ಲೈನ್ ತರಬೇತಿ ಕಾರ್ಯಾಗಾರ

ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ವಿಸ್ತರಣಾ ನಿರ್ದೇಶನಾಲಯ), ಬ್ರಹ್ಮಾವರ ನಗರದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಮತ್ತು ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಜೂನ್ 17ರಂದು ಬೆಳಗ್ಗೆ 10 ಗಂಟೆಗೆ ‘ಬಿದಿರು ಕೃಷಿ’ ಕುರಿತು ಆನ್‌ಲೈನ್ ತರಬೇತಿ ಕಾರ್ಯಾಗಾರ (ಅಂತರ್ಜಾಲ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ) ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಕೃಷಿ ಅರಣ್ಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿರುವ ಡಾ. ರಾಮಕೃಷ್ಣ ಹೆಗಡೆ ಅವರು ಭಾಗವಹಿಸಲಿದ್ದಾರೆ. ಇವರೊಂದಿಗೆ ಉಡುಪಿ ತಾಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾಗಿರುವ ಎಲ್. ಹೇಮಂತ್ ಕುಮಾರ್ ಅವರು ಕೂಡ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಜಿಲ್ಲೆಯಲ್ಲಿ ಬಿದಿರು ಬೆಳೆ ಬೆಳೆಯುವುದಕ್ಕೆ ಸಂಬAಧಿಸಿದAತೆ ರೈತರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡಲಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ ಬ್ರಹ್ಮಾವರದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾಗಿರುವ ಡಾ. ಬಿ. ಧನಂಜಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ, ಮಂಡನೆಯಾಗಲಿರುವ ವಿಷಯಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ಕಿರು ಪರಿಚಯ ಮಾಡಿಕೊಡಲಿದ್ದಾರೆ.

ಗೂಗಲ್ ಮೀಟ್ ವೇದಿಕೆಯಯಲ್ಲಿ ಕಾರ್ಯಕ್ರಮ ನಡೆಎಯಲಿದ್ದು, ಭಾಗವಹಿಸಲು ಇಚ್ಛಿಸುವ ಆಸಕ್ತ ರೈತರು meet.google.com/bip-nsqu-mbr ಈ ಲಿಂಕ್ ಬಳಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಬಹುದು.

ಬಿದಿರು ಬುಟ್ಟಿ, ಬಿದಿರಿನ ಮೊರ, ಬಿದಿರು ಬಂಬುಗಳಿAದ ಮಾಡಿದ ಏಣಿ, ಬಿದಿರಿನ ಪೀಠೋಪಕರಣಗಳು, ಆಟಿಕೆಗಳು, ಕಿಟಕಿ ಪರದೆ, ಚಾಪೆ ಹೀಗೆ ಅನೇಕ ವಿಧದಲ್ಲಿ ಬಿದಿರು ನಮ್ಮ ಸುತ್ತಮುತ್ತ ರಾರಾಜಿಸುತ್ತಿರುತ್ತದೆ. ಆದರೆ ಪ್ರತಿ ದಿನವೂ ಬಿದಿರನ್ನು ಬಳಸುವ ರೈತರು, ಅದನ್ನು ಬೆಳೆಯುವ ವಿಚಾರ ಬಂದಾಗ ಮಾತ್ರ ಹಿಂದೆ ಸರಿಯುತ್ತಾರೆ. ಬಿದಿರು ಒಂದು ಕೃಷಿ ಬೆಳೆಯೇ ಅಲ್ಲ, ಅದೊಂದು ಕಾಡು ಸಸ್ಯ ಎನ್ನುವುದೇ ಬಹುತೇಕ ರೈತರ ವಾದವಾಗಿದೆ. ಆದರೆ, ಎಲ್ಲರೂ ಅಂದುಕೊAಡಿರುವಹಾಗೆ ಬಿದಿರು ಕೃಷಿಗೆ ಯೋಗ್ಯವಲ್ಲದ ಬೆಳೆಯಲ್ಲ. ಹಸಿರು ಹೊನ್ನು ಎಂದು ಕರೆಸಿಕೊಳ್ಳುವ ಬಿದಿರನ್ನು ಬೆಳೆದರೆ ರೈತರ ಬಾಳೂ ಬಂಗಾರವಾಗುತ್ತದೆ. ಬಿದಿರು ಬೆಳೆಯುವುದು ಹೇಗೆ, ಅದರಿಂದ ಆದಾಯ ಗಳಿಸುವುದು ಹೇಗೆ, ಬಿದಿರು ಬೆಳೆಯಬೇಕೆಂದರೆ ಸಸಿಗಳು ಎಲ್ಲಿ ಸಿಗುತ್ತವೆ, ಮಾರುಕಟ್ಟೆ ಹೇಗಿದೆ, ಈ ಕೃಷಿಯಲ್ಲಿ ತೊಡಗಿಕೊಂಡರೆ ಎಷ್ಟು ವರ್ಷಗಳ ಕಾಲ ಆದಾಯ ಗಳಿಸಬಹುದು ಎಂಬೆಲ್ಲಾ ಮಾಹಿತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಾಗುತ್ತದೆ.

ಬಿದಿರು ಕೂಡ ಪ್ರಮುಖ ಬೆಳೆ

ಬಿದಿರು ಒಂದು ಪ್ರಮುಖ ಅರಣ್ಯ ಬೆಳೆಯಾಗಿದ್ದು, ಜಗತ್ತಿನ ನಾನಾದೇಶಗಳಲ್ಲಿ ರೈತರು ಇದನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಾರೆ. ಭಾರತದ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ಹಾಗೂ ಬುಡಕಟ್ಟು ಸಮುದಾಯಗಳು ವಾಸವಿರುವ ಅರಣ್ಯ ಭೂಮಿಯಲ್ಲಿ ಬಿದಿರು ಬೆಳೆಯಲಾಗುತ್ತದೆ. ಆದರೆ ಒಂದು ಕೃಷಿಯನ್ನಾಗಿ ಭಾರತದಲ್ಲಿ ಬಿದಿರು ಬೆಳೆಯನ್ನು ಸಂಪೂರ್ಣ ಮನಸ್ಸಿನಿಂದ ಸ್ವೀಕರಿಸಿಲ್ಲ. ಹೀಗಾಗಿ ಬಿದಿರು ಬೆಳೆಯ ಮಹತ್ವದ ಕುರಿತು ರೈತರಿಗೆ ತಿಳಿಸುವ ಉದ್ದೇಶದಿಂದ ಈ ಅಂತರ್ಜಾಲ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಿದಿರು ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದು ಆಯೋಜಕರು ಕೋರಿದ್ದಾರೆ.

ನುಗ್ಗೆ ಬೇಸಾಯ ಕುರಿತು ತರಬೇತಿ

ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ವತಿಯಿಂದ ಜೂನ್ 17ರಂದು ಬೆಳಗ್ಗೆ 11 ಗಂಟೆಗೆ ‘ನುಗ್ಗೆ ಬೇಸಾಯದ ತಾಂತ್ರಿಕತೆಗಳು’ ವಿಷಯ ಕುರಿತು ಒಂದು ದಿನದ ಆನ್‌ಲೈನ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂಮ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತರಕಾರಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಎಚ್.ಪಿ.ಹಾದಿಮನಿ ಅವರು ಉಪನ್ಯಾಸ ನೀಡಲಿದ್ದಾರೆ. ಆಸಕ್ತರು https://us02web.zoom.us/j/83361897180?pwd=Z05OWE50V3V4SmFJbTRaYitDZ2ZIUT09 ಈ ಲಿಂಕ್ ಹಾಗೂ 833 6189 7180 ಈ ಮೀಟಿಂಗ್ ಐಡಿ ಬಳಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

Published On: 16 June 2021, 08:04 PM English Summary: online training on bamboo cultivation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.