ಐದು ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಬೆಲೆ ಪರಿಷ್ಕೃರಣೆಗೆ ವಿರಾಮಹಾಕಿದ್ದ ತೈಲ ಕಂಪನಿಗಳು ಇದೀಗ ಸತತ ನಾಲ್ಕನೇ ದಿನ ತೈಲ ಬೆಲೆಗಳನ್ನು ಏರಿಸಿದ್ದು, ಶುಕ್ರವಾರ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ.
ದೇಶದಲ್ಲಿ ಸೋಂಕಿನ ಅಬ್ಬರ ಹಾಗೂ ಹಲವು ರಾಜ್ಯಗಳಲ್ಲಿ ಜನತಾಕರ್ಫ್ಯೂ ಹೇರಿರುವ ಹೊತ್ತಲ್ಲೆ ಜನ ಸಾಮಾನ್ಯರಜೇಗೆ ಕತ್ತರಿ ಬೀಳುತ್ತಿದೆ.
ಸರ್ಕಾರಿ ಸ್ವಾಮ್ಯದತೈಲ ಕಂಪನಿಗಳಲ್ಲಿ ಸತತ ನಾಲ್ಕನೇ ದಿನವೂ ಇಂಧರದರ ಹೆಚ್ಚಳವಾಗಿದೆ. ಪ್ರತಿ ಲೀಟರ್ ಪೆಟ್ರೋಲ್29 ಪೈಸೆ ಹಾಗೂ ಪ್ರತಿ ಲೀಟರ್ಡೀಸೆಲ್ಗೆ 31 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 91.27 ಡೀಸೆಲ್ 81.37 ಪೈಸೆಗೆ ಮಾರಾಟ ಮಾಡಲಾಗುತ್ತಿದೆ.
ರಾಜಾಸ್ಥಾನ ಶ್ರೀ ಗಂಗಾನಗರಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ದರ 102.15 ರೂಗಳಿಗೆ ಏರಿದೆಎಂದುತೈಲ ಕಂಪನಿಯಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅದೇರೀತಿ ಮಧ್ಯಪ್ರದೇಶಅನುಪ್ಪೂರ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101 ,86 ಪೈಸೆ ತಲುಪಿದೆ. ಮಹಾರಾಷ್ಟ್ರದ ಪರಭಾನಿಯಲ್ಲಿ ಲೀಟರ್ ಪೆಟ್ರೋಲ್ 99.96 ಕ್ಕೆ ಏರಿಕೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಸತತ ಎರಡನೇ ಬಾರಿ ಪೆಟ್ರೋಲ್ ದರ 100 ರೂಗಡಿದಾಟಿದೆ. ಫೆಬ್ರವರಿ ಮಧ್ಯಭಾಗದಲ್ಲಿ ಪೆಟ್ರೋಲ್ದರ 100 ರೂಗಡಿದಾಟಿತ್ತು.
ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಸೇವಾ ಶುಲ್ಕದಆಧಾರದ ಮೇಲೆ ಆಯಾ ರಾಜ್ಯಗಳ ಇಂಧನದರವನ್ನುಏರಿಕೆ ಮಾಡಲಾಗುತ್ತದೆ. ರಾಜಸ್ಥಾನದಲ್ಲಿ ಇಡಿ ದೇಶದಲ್ಲೇ ಅತಿ ಹೆಚ್ಚು ಮೌಲ್ಯವರ್ಧಿತತೆರಿಗೆ ವಿಧಿಸುವರಾಜ್ಯವಾಗಿದ್ದು, ನಂತರದ ಸ್ಥಾನ ಮಧ್ಯಪ್ರದೇಶಕ್ಕೆ ಸಲ್ಲುತ್ತದೆ. ಇದಕ್ಕೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಲಿದೆ.
Share your comments