ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕರ್ನಾಟಕದ ಬೆಳಗಾವಿಯಲ್ಲಿ 2,700 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.
ರೈತರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಪಿಎಂ-ಕಿಸಾನ್ನ 13ನೇ ಕಂತಿನ ಅಡಿಯಲ್ಲಿ ಸುಮಾರು 16,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದರು.
PM Kisan ಇಂದು ಮಧ್ಯಾಹ್ನ ಬೆಳಗಾವಿಯಿಂದ ಪಿ.ಎಂ ಕಿಸಾನ್ ಬಿಡುಗಡೆ ಮಾಡಲಿದ್ದಾರೆ: ಪ್ರಧಾನಿ ಮೋದಿ
ಮೋದಿ ಅವರು ಮರು ಅಭಿವೃದ್ಧಿಗೊಂಡ ಬೆಳಗಾವಿ ರೈಲ್ವೆ ನಿಲ್ದಾಣ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಜಲ ಜೀವನ ಅಭಿಯಾನದ ಅಡಿಯಲ್ಲಿ ಆರು ಬಹು ಗ್ರಾಮ ಯೋಜನೆಗಳಿಗೂ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿಯ ಜನರ ಎಣೆಯಿಲ್ಲದ ಪ್ರೀತಿ ಮತ್ತು ಆಶೀರ್ವಾದವು
ಜನರ ಕಲ್ಯಾಣಕ್ಕಾಗಿ ಶ್ರಮಿಸಲು ಮತ್ತು ಚೈತನ್ಯದ ಮೂಲವಾಗಲು ಸರ್ಕಾರವನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.
ನಾಳೆ ರಾಜ್ಯದಿಂದಲೇ ರೈತರಿಗೆ ಬಿಡುಗಡೆ ಆಗಲಿದೆ ಪಿ.ಎಂ ಕಿಸಾನ್ ಹಣ!
ಬೆಳಗಾವಿಗೆ ಬರುವುದೆಂದರೆ ಯಾತ್ರಾಸ್ಥಳಕ್ಕೆ ಬರುವುದಕ್ಕಿಂತ ಕಡಿಮೆಯೇನಲ್ಲ.
ಇದು ಕಿತ್ತೂರಿನ ರಾಣಿ ಚೆನ್ನಮ್ಮ ಮತ್ತು ಕ್ರಾಂತಿಕಾರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ನಾಡು,
ವಸಾಹತುಶಾಹಿ ಆಡಳಿತದ ವಿರುದ್ಧ ಧ್ವನಿ ಎತ್ತಿದ ಅವರನ್ನು ಇಂದಿಗೂ ಸ್ಮರಿಸಲಾಗುತ್ತದೆ ಎಂದರು.
ಬೆಳಗಾವಿಯ ಕೊಡುಗೆಗಳ ಬಗ್ಗೆ ಮಾತನಾಡಿದ ಅವರು, ಇಂದಿನ ಹೋರಾಟದಲ್ಲಿ ಮತ್ತು ಭಾರತದ ಪುನರುತ್ಥಾನದಲ್ಲಿ ಬೆಳಗಾವಿ ಸ್ಥಾನ ಪಡೆದಿದೆ.
ಕರ್ನಾಟಕದ ನವೋದ್ಯಮ ಸಂಸ್ಕೃತಿಗೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ಬೆಳಗಾವಿ ನೂರು ವರ್ಷಗಳ ಹಿಂದೆ ನವೋದ್ಯಮಗಳಿಗೆ
ನೆಲೆಯಾಗಿತ್ತು ಮತ್ತು ಬೆಳಗಾವಿಯಲ್ಲಿ ಘಟಕವನ್ನು ಸ್ಥಾಪಿಸಿ, ವಿವಿಧ ಕೈಗಾರಿಕೆಗಳ ತಾಣವನ್ನಾಗಿ ಪರಿವರ್ತಿಸಿದ
ಬಾಬುರಾವ್ ಪುಸಾಲ್ಕರ್ ಅವರ ಉದಾಹರಣೆಯನ್ನು ನೀಡಿದರು. ಪ್ರಸ್ತುತ ದಶಕದಲ್ಲಿ ಬೆಳಗಾವಿಯ
ಈ ಪಾತ್ರವನ್ನು ಮತ್ತಷ್ಟು ಬಲಪಡಿಸಲು ಡಬಲ್ ಎಂಜಿನ್ ಸರ್ಕಾರ ಬಯಸಿದೆ ಎಂದರು.
PMKisanUpdate ಪಿ.ಎಂ ಕಿಸಾನ್ ಹಣ ಇದೇ ದಿನ ನಿಮ್ಮ ಖಾತೆಗೆ ಬರಲಿದೆ!
ಶಂಕುಸ್ಥಾಪನೆ ನೆರವೇರಿಸಿದ ಮತ್ತು ಇಂದು ಉದ್ಘಾಟಿಸಲಾಗುತ್ತಿರುವ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಇದು ಬೆಳಗಾವಿಯ ಅಭಿವೃದ್ಧಿಗೆ ಹೊಸ ಚೈತನ್ಯ ಮತ್ತು ವೇಗವನ್ನು ನೀಡಲಿದೆ ಎಂದು ಹೇಳಿದರು.
ಸಂಪರ್ಕ ಮತ್ತು ನೀರಿನ ಸೌಲಭ್ಯಗಳಿಗೆ ಸಂಬಂಧಿಸಿದ ನೂರಾರು ಕೋಟಿ ರೂ.ಗಳ ಯೋಜನೆಗಳಿಗಾಗಿ ಅವರು ಈ ಪ್ರದೇಶದ ನಾಗರಿಕರನ್ನು ಅಭಿನಂದಿಸಿದರು.
ಪಿಎಂ-ಕಿಸಾನ್ ನಿಂದ ಮತ್ತೊಂದು ಕಂತಿನ ಹಣವನ್ನು ಬಿಡುಗಡೆ ಮಾಡಿ, ದೇಶದ ಪ್ರತಿಯೊಬ್ಬ ರೈತನಿಗೂ ವಿಶೇಷ ಉಡುಗೊರೆ ಸಿಕ್ಕಿದೆ ಎಂದು ಬೆಳಗಾವಿ ಮೂಲಕ ಪ್ರಧಾನಮಂತ್ರಿ ಹೇಳಿದರು.
PM Kisan ಪಿ.ಎಂ ಕಿಸಾನ್ 13ನೇ ಕಂತಿನ ಹಣ ಇನ್ನು ಕೆಲವೇ ಗಂಟೆಗಳಲ್ಲಿ ನಿಮ್ಮ ಖಾತೆಗೆ! ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಪರಿಶೀಲಿಸಿ
ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ 16,000 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಮಧ್ಯವರ್ತಿಯ ಹಾವಳಿಯಿಲ್ಲದೆ ಇಷ್ಟು ದೊಡ್ಡ ಮೊತ್ತವನ್ನು ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಆಡಳಿತಕ್ಕೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, 1 ರೂಪಾಯಿ ಬಿಡುಗಡೆಯಾದರೆ ಕೇವಲ 15 ಪೈಸೆ ಬಡವರಿಗೆ ತಲುಪುತ್ತದೆ ಎಂದು ಆಗಿನ ಪ್ರಧಾನಮಂತ್ರಿ ಹೇಳಿದ್ದನ್ನು ಸ್ಮರಿಸಿದರು.
"ಆದರೆ ಇದು ಮೋದಿ ಕಿ ಸರ್ಕಾರ್" ಎಂದು ಹೇಳಿದ ಪ್ರಧಾನಮಂತ್ರಿ, "ಪ್ರತಿ ಪೈಸೆಯೂ ನಿಮಗೆ ಸೇರಿದೆ ಮತ್ತು ಅದು ನಿಮಗಾಗಿ" ಎಂದು ಹೇಳಿದರು.
ಪ್ರಧಾನಮಂತ್ರಿಯವರು ಭಾರತದ ಎಲ್ಲ ರೈತರಿಗೆ ಅತ್ಯಂತ ಸಮೃದ್ಧ ಹೋಳಿಯ ಶುಭ ಹಾರೈಸಿದರು ಮತ್ತು ಹೋಳಿಗೆ ಮುಂಚಿತವಾಗಿ ಅವರು ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು.
ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ವರದಿ ಅನುಷ್ಠಾನಕ್ಕೆ 6 ಸಾವಿರ ಕೋಟಿ ಮೀಸಲು -ಸಿಎಂ
ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಯವರ ಬದ್ಧತೆಗೆ ಮತ್ತೊಂದು ನಿದರ್ಶನ ತೋರುವ ಒಂದು ಹೆಜ್ಜೆಯಾಗಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ಸುಮಾರು 16,000 ಕೋಟಿ ರೂ.ಗಳ 13ನೇ ಕಂತಿನ ಮೊತ್ತವನ್ನು 8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೇರ
ಸವಲತ್ತು ವರ್ಗಾವಣೆಯ ಮೂಲಕ ಬಿಡುಗಡೆ ಮಾಡಲಾಯಿತು.
ಈ ಯೋಜನೆಯಡಿ, ಅರ್ಹ ರೈತ ಕುಟುಂಬಗಳಿಗೆ ತಲಾ 2000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6000 ರೂ.ಗಳ ಸವಲತ್ತು ನೀಡಲಾಗುತ್ತಿದೆ.
Share your comments