ಪಿಎಂ ಕಿಸಾನ್ ಫಲಾನುಭವಿಗಳಿಗೆ ಇಲ್ಲಿದೆ ಸಂತಸದ ಸುದ್ದಿ. ಇತ್ತೀಚೆಗೆ ಬಂದ ಮಾಹಿತಿಗಳ ಪ್ರಕಾರ ಡಿಸೆಂಬರ್ 10ರಂದು ಪ್ರಧಾನಮಂತ್ರಿ ಕಿಸಾನ್ ಸಮನ್ ನಿಧಿ ಏಳನೇ ಕಂತಿನ ಹಣ ಬಿಡುಗಡೆಯಾಗಲಿದೆ.
ಈಗಾಗಲೇ ಆರು ಕಂತುಗಳಲ್ಲಿ ಹಣ ಜಮೆಯಾಗಿದೆ. ಈಗ ಏಳನೇ ಕಂತಿನ ಹಣ ಡಿ. 10 ರಿಂದ ರೈತರ ಖಾತೆಗೆ ಜಮೆಯಾಗಲಿದೆ. ಈಗಾಗಲೇ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮನೆಯಲ್ಲಿಯೇ ಕುಳಿತು ಈಗ ನೀವು ನಿಮ್ಮ ಪಿಎಂ ಕಿಸಾನ್ ಹಣದ ಸ್ಟೇಟಸ್ ನೋಡಿಕೊಳ್ಳಬಹುದು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ವರ್ಷ ರೈತರಿಗೆ 6000 ರೂ. ಈ ಹಣವನ್ನು ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ. ಅಂದರೆ ಪ್ರತಿ 4 ತಿಂಗಳಿಗೊಮ್ಮೆ ಒಂದು ಕಂತು ಬಿಡುಗಡೆ ಮಾಡುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಆರು ಕಂತುಗಳನ್ನು ನೀಡಲಾಗಿದ್ದು, ಡಿಸೆಂಬರ್ 10ರಂದು ಏಳನೆಯ ಕಂತು ಬರಲಿದೆ. ಅಂದರೆ ಇದೇ ವಾರದಲ್ಲಿ ಫಲಾನುಭವಿಗಳ ರೈತರ ಖಾತೆಗೆ ಹಣ ಜಮೆಯಾಗಲಿದೆ.
ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡು ಈ ಲಿಂಕ್ ಕ್ಲಿಕ್ ಮಾಡಿ. https://pmkisan.gov.in/beneficiarystatus.aspx
PM KISSAN ಯೋಜನೆಯ 7 ನೆ ಕಂತಿನ ಹೊಸ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ
ಹೊಸ beneficiary ಲಿಸ್ಟ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಬೇಕು. ಗೂಗಲ್ನಲ್ಲಿ ಪಿಎಂ-ಕಿಸಾನ್ ಎಂದು ಟೈಪ್ ಮಾಡಿ ಹಾಗೂ ಸರ್ಚ್ ಕೊಡಿ, ನಂತರ ಮೊದಲ ಆಯ್ಕೆಯನ್ನು ಆಯ್ಕೆಮಾಡಿ ಆಗ ಪಿಎಂಕಿಸಾನ್ ಹೋಂ ಪೇಜಿಗೆ ತೆರೆಯುತ್ತದೆ, ಅಲ್ಲಿ ಬಲಗಡೆ ಬೇನಿಫಿಷೇರಿ ಲಿಸ್ಟ್ ಎಂಬ ಆಪ್ಷನ್ ಇದೆ, ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಹೊಸ beneficiary ಲಿಸ್ಟ್ ಅನ್ನು ನೋಡಿಕೊಳ್ಳಬಹುದು. ಹೀಗೆ ನೀವು ಹೊಸ benificiary ಲಿಸ್ಟ್ ನಲ್ಲಿ ನಿಮ್ಮ ಹೆಸರು ವಿದಿಯೋ ಇಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಏನಾದರೂ ತಾಂತ್ರಿಕ ದೋಷವಿದ್ದರೆ ಈ ಕೆಳಗೆ ನೀಡಿದ ಸಹಾಯವಾಣಿ ನಂಬರಿಗೆ ಸಂಪರ್ಕಿಸಬಹುದು.
ನಿಮಗೆ ಹಣ ಜಮೆಯಾಗುವಲ್ಲಿ, ಅಥವಾ ನೋಂದಣಿಯಲ್ಲಿ ಸಮಸ್ಯೆಯುಂಟಾದರೆ ಈ ಕೆಲಗಿನ ನಂಬರಿಗೆ ಸಂಪರ್ಕಿಸಬಹುದು.
ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಅಥವಾ ಈ Email ID: [email protected] ಗೆ ಮೇಲ್ ಮಾಡಬಹುದು.
Share your comments