1. ಸುದ್ದಿಗಳು

PMKisan| ರೈತರಿಗೆ ಸಿಹಿಸುದ್ದಿ: ಪಿ.ಎಂ ಕಿಸಾನ್‌ ಸಮ್ಮಾನ್‌ ನಿಧಿ 8 ಸಾವಿರಕ್ಕೆ ಹೆಚ್ಚಳ ಸಾಧ್ಯತೆ!

Hitesh
Hitesh
PMKisan| Good news for farmers: PM Kisan Samman fund is likely to increase to 8 thousand!

ಕೇಂದ್ರ ಸರ್ಕಾರವು ರೈತರಿಗೆ ಸಿಹಿಸುದ್ದಿಯೊಂದನ್ನು ನೀಡುತ್ತಿದೆ. 2023-24ನೇ ಸಾಲಿನ ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ವರ್ಷಕ್ಕೆ 8,000 ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ.

ರೈತರಿಗೆ ಬ್ಯಾಂಕ್‌ ಸಾಲದ ಮಿತಿ ಹೆಚ್ಚಿಸಲು ವೈಜ್ಞಾನಿಕ ವರದಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುವ ರೈತರಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಬಜೆಟ್ 2023-24ರಲ್ಲಿ ಪಿ.ಎಂ ಕಿಸಾನ್ ಯೋಜನೆಯಡಿಯಲ್ಲಿ ಈ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಮುಂಬರುವ 2023ರ ಬಜೆಟ್‌ನಲ್ಲಿ ವರ್ಷಕ್ಕೆ 6000 ರಿಂದ 8000 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಪಿ.ಎಂ ಕಿಸಾನ್ ಮೊತ್ತದ ಹೆಚ್ಚಳವು ಆರಂಭದಲ್ಲಿ ಒಂದು ವರ್ಷದವರೆಗೆ ಇರುತ್ತದೆ ಮತ್ತು ನಂತರ ಪರಿಶೀಲಿಸಲಾಗುವುದು ಎನ್ನಲಾಗಿದೆ. ಪಿ.ಎಂ ಕಿಸಾನ್ ಹಣದ ಹೆಚ್ಚಳವು ಬಳಕೆ ಮತ್ತು ಗ್ರಾಮೀಣ ಬೇಡಿಕೆಯನ್ನು ಬೆಂಬಲಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಪಾನ್‌ನೊಂದಿಗೆ ಐಎಎಫ್‌ನ ಜಂಟಿ ವಾಯು ರಕ್ಷಣಾ ಸಮರಾಭ್ಯಾಸ, 'ವೀರ್ ಗಾರ್ಡಿಯನ್ 2023ರ ವಿಶೇಷತೆ ಗೊತ್ತೆ ? 

ಮೊತ್ತವನ್ನು ದ್ವಿಗುಣಗೊಳಿಸುವ ಸಲಹೆಗಳಿದ್ದರೂ, ಆದಾಯದ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರದ  ಗಮನಹರಿಸುತ್ತಿದೆ ಅಲ್ಲದೇ ಹಣದುಬ್ಬರದ ಒತ್ತಡವು ಹೆಚ್ಚಳವನ್ನು ಮಿತಿಗೊಳಿಸಬಹುದು ಎಂದು ಅವರು ಹೇಳಿದರು.

ಪ್ರತಿ ರೈತರಿಗೆ 2,000 ರೂ.ಗಳ ಹೆಚ್ಚಳಕ್ಕೆ ಸರಕಾರಕ್ಕೆ ವಾರ್ಷಿಕ 22,000 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚದ ಅಗತ್ಯವಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಸರ್ಕಾರವು ರೈತರಿಗೆ ವಾರ್ಷಿಕ 6000 ರೂಪಾಯಿಗಳನ್ನು ಮೂರು ಸಮಾನ ಕಂತುಗಳಲ್ಲಿ ರೂ. ತಲಾ 2000 ಸಾವಿರ ರೂಪಾಯಿಯಂತೆ ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಯಡಿ ಅರ್ಹ ರೈತರಿಗೆ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ವಿತ್ತೀಯ ನೆರವು ನೀಡಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಪಿಎಂ ಕಿಸಾನ್ ಯೋಜನೆಗೆ ಕೇಂದ್ರವು 68,000 ಕೋಟಿ ರೂಪಾಯಿ ಭಾರಿ ಮೊತ್ತವನ್ನು ಮೀಸಲಿಟ್ಟಿದೆ.

ಆಧಾರ್ ಕಾರ್ಡ್‌ ಇ-ಕೆವೈಸಿ ವಹಿವಾಟು ಪ್ರಮಾಣ 84.8 ಕೋಟಿಗೆ ಏರಿಕೆ! 

PM ಕಿಸಾನ್ 13 ನೇ ಕಂತು ನವೀಕರಣ

ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ಈ ತಿಂಗಳು (ಜನವರಿ) ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತನ್ನು ಬಿಡುಗಡೆ ಮಾಡಲಿದೆ. ಆದರೆ, ಇದಕ್ಕಾಗಿ ಯಾವುದೇ ನಿರ್ದಿಷ್ಟ ದಿನಾಂಕವನ್ನು ಪ್ರಕಟಿಸಿಲ್ಲ. ಪಿಎಂ ಕಿಸಾನ್ 13ನೇ ಕಂತು ಜನವರಿ 23 ರಂದು ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ ಮತ್ತು ಈಗ ಕೆಲವರು ಈ ವಾರ ಆರ್ಥಿಕ ಸಹಾಯವನ್ನು ವಿತರಿಸಬಹುದು ಎಂದು ಹೇಳಿಕೊಂಡಿದ್ದಾರೆ.

EPFO ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ ಆಪ್ಕೆ ನಿಕಟ್‌ 2.0 ವಿಸ್ತರಣೆ!  

pm narendra modi

ಬಿಹಾರದ 17 ಲಕ್ಷ ರೈತರಿಗೆ ಹಣ ಸಿಗುವುದಿಲ್ಲ

ಬಿಹಾರದಲ್ಲಿ, 16.47 ಲಕ್ಷ ರೈತರು ತಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಿಲ್ಲ ಆದ್ದರಿಂದ ಕೃಷಿ ಇಲಾಖೆಯು ಜನವರಿ 28 ರೊಳಗೆ ಅದನ್ನು ಮಾಡುವಂತೆ ಕೇಳಿದೆ. ಇ-ಕೆವೈಸಿ ಪೂರ್ಣಗೊಳಿಸದಿರುವವರು 13 ನೇ ಕಂತಿನಿಂದ ವಂಚಿತರಾಗುತ್ತಾರೆ. ಇ-ಕೆವೈಸಿ ಮಾಡಲು, ರೈತರು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರವನ್ನು (ಸಿಎಸ್‌ಸಿ) ಸಂಪರ್ಕಿಸಬಹುದು. ಕೇವಲ ನಾಮಮಾತ್ರದ ಮೊತ್ತವನ್ನು ಪಾವತಿಸುವ ಮೂಲಕ, ಅವರು ತಮ್ಮ ಇ-ಕೆವೈಸಿಯನ್ನು ನವೀಕರಿಸಬಹುದು.

ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲರಾದ ಫಲಾನುಭವಿಗಳಿಗೆ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತನ್ನು ನೀಡಲಾಗುವುದಿಲ್ಲ ಎಂದು ಅಮೃತಸರದ ಮುಖ್ಯ ಕೃಷಿ ಅಧಿಕಾರಿ ಡಾ ಜತೀಂದರ್ ಸಿಂಗ್ ಗಿಲ್ ಸ್ಪಷ್ಟಪಡಿಸಿದ್ದಾರೆ.  

EPFO ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ ಆಪ್ಕೆ ನಿಕಟ್‌ 2.0 ವಿಸ್ತರಣೆ! 
 

Published On: 30 January 2023, 10:50 AM English Summary: PMKisan| Good news for farmers: PM Kisan Samman fund is likely to increase to 8 thousand!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.